(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಆ.೨೦: ಸಂಘಕ್ಕೆ ಯುವ ಪೀಳಿಗೆಯು ಸೇರುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯುವಜನತೆ ಸೇರಲಿದ್ದಾರೆ ಇದು ಸಂಘದ ಬೆಳವಣಿಗೆಯಾಗಿದೆ. ಯುವಜನತೆ ಸಂಘದಲ್ಲಿ ಸಕ್ರೀಯರಾಗಿ ಪಾಲ್ಗೊಂಡು ಕ್ರೀಡೋತ್ಸವವನ್ನು ಅದ್ದೂರಿಯಾಗಿ ನೇರವೇರಿಸಬೇಕೆಂದು ಕರೆ ನೀಡುತ್ತೇನೆ. ಯುವ ಪೀಳಿಗೆಗೆ ಬೇಕಾಗುವಂತಹ ಎಲ್ಲಾ ತರಹದ ಸಹಕಾರವನ್ನು ನಮ್ಮ ಪದಾಧಿಕಾರಿಗಳು ಸೂಕ್ತ ಸಮಯದಲ್ಲಿ ನೀಡಲಿದ್ದಾರೆ.
ಸುಮಾರು ಒಂದುವರೆ ದಶಕದಿಂದ ಬಾಕಿವಿರುವ ಸಂಘದ ಕುರ್ಲಾದಲ್ಲಿನ ಕಛೇರಿ ಪುನರ್‌ನಿರ್ಮಾಣ ಮಾಡಲಾಗಿ ಬರುವ ಸೆಪ್ಟೆಂಬರ್‌ನಲ್ಲಿ ಸೇವಾರಂಭಿಸಲಿದೆ. ಎರಡು ವರ್ಷಗಳೊಳಗೆ ನೂತನ ಕಛೇರಿ ಆಗುವ ನಿರೀಕ್ಷೆವಿದ್ದು ಮುಲುಂಡ್‌ನಲ್ಲಿನ ಕಛೇರಿ ಕೂಡ ಪುನರ್‌ನಿರ್ಮಾಣಕ್ಕೆ ಹೋಗಲಿದ್ದು, ಅದರ ಕೆಲಸವು ಶೀಘ್ರ‍್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ಪ್ರಭಾಕರ ಪಿ.ಭಂಡಾರಿ ತಿಳಿಸಿದರು.
ಇಂದಿಲ್ಲಿ ಆದಿತ್ಯವಾರ ಸಂಜೆ ಸಯನ್ ಪೂರ್ವದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನಡೆಸಲ್ಪಟ್ಟ ಭಂಡಾರಿ ಸೇವಾ ಸಮಿತಿಯ ೭೦ನೇ ವಾರ್ಷಿಕ ಮಹಾಸಭೆ ನಡೆಸಲಾಗಿದ್ದು ಪ್ರಭಾಕರ್ ಭಂಡಾರಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಕಾರ್ಯದರ್ಶಿ ರಮೇಶ್ ಭಂಡಾರಿ ಪೊವಾಯಿ, ಕೋಶಾಧಿಕಾರಿ ಶೀನ ಭಂಡಾರಿ ವಡಾಲ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ (ನಿಕಟಪೂರ್ವ ಅಧ್ಯಕ್ಷ), ಮಹಿಳಾ ಕಾರ್ಯಾಧ್ಯಕ್ಷೆ ಶಾಲಿನಿ ಆರ್.ಭಂಡಾರಿ ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷರಾದ ಶಶಿಧರ್ ಡಿ.ಭಂಡಾರಿ ಮತ್ತು ರಮಾನಂದ ಕೆ.ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ರಂಜಿತ್ ಎಸ್.ಭಂಡಾರಿ ಮತ್ತು ರಾಕೇಶ್ ಎಸ್.ಭಂಡಾರಿ, ಮಹಿಳಾ ಉಪ ಕಾರ್ಯಾಧ್ಯಕ್ಷೆ ಜಯಸುಧಾ ಟಿ.ಭಂಡಾರಿ, ಕಾರ್ಯದರ್ಶಿ ಲತಾ ಯೋಗೇಶ್ ಥಾಣೆ, ಸಂಘದ ವ್ಯವಸ್ಥಾಪಕ ಸಮಿತಿಯ ಸದಸ್ಯರುಗಳಾದ ನ್ಯಾಯವಾದಿ ಶೇಖರ ಎಸ್.ಭಂಡಾರಿ (ಮಾಜಿ ಅಧ್ಯಕ್ಷ), ಕರುಣಾಕರ ಎಸ್.ಭಂಡಾರಿ, ಜಯಶೀಲ ಯು. ಭಂಡಾರಿ, ರುಕ್ಮಯ್ಯ ಭಂಡಾರಿ, ಕೇಶವ ಟಿ.ಭಂಡಾರಿ, ಪ್ರೇಮಾ ಭಂಡಾರಿ, ಉಷಾ ಭಾಸ್ಕರ್, ರಾಜೇಶ್ ಎಸ್.ಭಂಡಾರಿ, ಪ್ರಕಾಶ್ ಭಂಡಾರಿ, ರೇಖಾ ಎ.ಭಂಡಾರಿ, ಕ್ಷಮಾ ರಾಮಣ್ಣ ಭಂಡಾರಿ, ಮಾಜಿ ಅಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ ಉಪಸ್ಥಿತರಿದ್ದರು.
ಭಂಡಾರಿ ಬಂಧುಗಳು, ಸಂಘದ ಮಾಜಿ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಸ್ತುತಿಸಿ ಮಹಾ ಸಭೆ ಆರಂಭಿಸಲಾಯಿತು. ಗತವರ್ಷದಲ್ಲಿ ಅಗಲಿದ ಸರ್ವ ಭಂಡಾರಿ ಭಾಂಧವರು, ಗಣ್ಯರು, ಸಂಘದ ಹಿತೈಷಿಗಳಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ಸಭಿಕರ ಪರವಾಗಿ ಸೀತಾರಾಮ ಭಂಡಾರಿ, ಡಾ| ಕಿಶೋರ್ ಭಂಡಾರಿ, ರಂಜಿತ್ ಭಂಡಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನಿತ್ತರು.
ಶಾಲಿನಿ ಭಂಡಾರಿ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆ ಆದಿಗೊಂಡಿತು. ಕಾರ್ಯದರ್ಶಿ ರಮೇಶ್ ಭಂಡಾರಿ ಪೊವಾಯಿ ಸ್ವಾಗತಿಸಿ, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ, ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತರು. ಕೋಶಾಧಿಕಾರಿ ಶೀನ ಭಂಡಾರಿ ವಡಾಲ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪುರುಷೋತ್ತಮ ಭಂಡಾರಿ ಆಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾ ಸಭೆ ಸಮಾಪನ ಗೊಂಡಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.