Skip to main content
www.kallianpur.com | Email : kallianpur7@gmail.com | Mob : 9741001849

ಭಾರತ್ ಬ್ಯಾಂಕ್ ಸಹಕಾರಿ ಸಂಸ್ಥೆಗೆ ನೂತನ ಸಾರಥಿ ಸೂರ್ಯಕಾಂತ್ ಜಯ ಸುವರ್ಣ ಕಾರ್ಯಾಧ್ಯಕ್ಷ.

By October 11, 2023Mumbai News
kallianpurdotcom: 11/10/23
(ಚಿತ್ರ /ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ,ಅ.೧೧: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ತುಳು-ಕನ್ನಡಿಗರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಎಂದೇ ಪ್ರಸಿದ್ಧಿ ಪಡೆದ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ೨೦೨೩-೨೦೨೮ರ ಸಾಲಿನ ನೂತನ ಕಾರ್ಯಧ್ಯಕ್ಷ ಆಗಿ ಸೂರ್ಯಕಾಂತ್ ಜಯ ಸುವರ್ಣ ಮತ್ತು ಉಪಕಾರ್ಯಾಧ್ಯಕ್ಷ ಆಗಿ ನ್ಯಾಯವಾದಿ ಸೋಮ ನಾಥ ಬಿ. ಅಮೀನ್ ಆಯ್ಕೆಯಾದರು.

ಇಂದಿಲ್ಲಿ ಗುರುವಾರ ಗೋರೆಗಾಂವ್ ಪೂರ್ವದಲ್ಲಿನ ಬ್ಯಾಂಕ್‌ನ ಕೇಂದ್ರ ಕಛೇರಿ ಮಾರುತಗಿರಿ ಇದರ ಸಭಾಗೃಹದಲ್ಲಿ ನಡೆಸಲಾದ ಬ್ಯಾಂಕ್‌ನ ನೂತನ ನಿರ್ದೇಶಕ ಮಂಡಳಿಯ ಪ್ರಥಮ ಸಭೆಯಲ್ಲಿ ಮುಂದಿನ ಐದು ವರ್ಷಗಳ ಕಾಲಾವಧಿಯ ನಿರ್ದೇಶಕ ಮಂಡಳಿಗೆ ಅಂತಿಮ ಹಂತದ ಆಯ್ಕೆಪ್ರಕ್ರಿಯೆಯನ್ನು ಮುಖ್ಯ ಚುನಾವಣಾಧಿಕಾರಿ ಆಗಿದ್ದ ಕೋ.ಆಪರೇಟಿವ್ ಸೊಸೈಟಿಗಳ ಹೆಚ್ಚುವರಿ ರಿಜಿಸ್ತ್ರಾರ್ ಎ.ಕೆ ಚವ್ಹಾಣ್ ನಡೆಸಿದರು.

ನಂತರ ಬ್ಯಾಂಕ್ ನಿರ್ದೇಶಕ ಮಂಡಳಿಯ ಕ್ರಮ ೧೯ರ ಅನೇಕತ್ವ ರಾಜ್ಯ ಸಹಕಾರಿ ಸೊಸೈಟಿಗಳ ಕಾರ್ಯಗತ ಗೊಳಿಸುವಿಕೆ ಕ್ರಮಾನುಸಾರ ನಡೆಸಲ್ಪಟ್ಟ ಸಭೆಯಲ್ಲಿ ಬ್ಯಾಂಕ್‌ನ ನಿರ್ದೇಶಕತ್ವ ಆಯ್ಕೆಗೆ ನಡೆಸಲಾದ ಸರ್ವವ ಕಾರ್ಯವಿಧಾನ ಪ್ರಕ್ರಿಯೆ ಮಾಹಿತಿಯನ್ನಿತ್ತು ೨೦೨೩-೨೮ರ ಸಾಲಿನ ಎಲ್ಲಾ ನೂತನ ನಿರ್ದೇಶಕರ ಹೆಸರುಗಳನ್ನು ಅಧಿಕೃತವಾಗಿ ಪ್ರಕಟಿಸಿದರು. ಬ್ಯಾಂಕ್‌ಗೆ ಈ ಬಾರಿಯೂ ೧೭ ಸಾಮಾನ್ಯ ವಿಭಾಗದ ನಿರ್ದೇಶಕರು ೨ ಮಹಿಳಾ ಮೀಸಲು ಮತ್ತು ೧ ಜಾತಿ-ಪರಿಶಿಷ್ಟ ವರ್ಗದ ಸದಸ್ಯತ್ವ ನಿರ್ದೇಶಕರ ಆಯ್ಕೆ ಗೊಳಿಸಲಾಗಿದ್ದು, ಚುನಾವಣೆ ಮುಖೇನ ಸಾಮಾನ್ಯ ವಿಭಾಗದಲ್ಲಿ ಆಯ್ಕೆಗೊಂಡ ಸೂರ್ಯಕಾಂತ ಜೆ.ಸುವರ್ಣ, ನ್ಯಾಯವಾದಿ ಸೋಮನಾಥ್ ಬಿ.ಅಮೀನ್, ಅಶೋಕ್ ಎಂ.ಕೋಟ್ಯಾನ್, ಜಯ ಎ. ಕೋಟ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ನರೇಶ್ ಕೆ.ಪೂಜಾರಿ, ನಿರಂಜನ್ ಲಕ್ಶ್ಮಣ್ ಪೂಜಾರಿ, ಸಂತೋಷ್ ಕೆ. ಪೂಜಾರಿ, ದಯಾನಂದ ಆರ್.ಪೂಜಾರಿ, ಗಣೇಶ್ ಡಿ.ಪೂಜಾರಿ, ಗಂಗಾಧರ ಜೆ.ಪೂಜಾರಿ, ಹರೀಶ್ ವಿ.ಪೂಜಾರಿ, ಮೋಹನ್‌ದಾಸ್ ಜಿ ಪೂಜಾರಿ, ಭಾಸ್ಕರ್ ಎಂ.ಸಾಲಿಯಾನ್, ನಾರಾಯಣ ಎಲ್.ಸುವರ್ಣ, ನಾರಾಯಣ ವಿ.ಸುವರ್ಣ ಕಾರ್ನಾಡ್, ಸುರೇಶ್ ಬಿ.ಸುವರ್ಣ, ಮಹಿಳಾ ಸ್ಥಾನದಿಂದ ಆಶಾ ಆರ್. ಬಂಗೇರ ಮತ್ತು ಜಯಲಕ್ಷ್ಮಿ ಪಿ. ಸಾಲಿಯಾನ್ ಅಂತೆಯೇ ಹಿಂದುಳಿದ ಜಾತಿ- ಪರಿಶಿಷ್ಟ ವರ್ಗದ ಸ್ಥಾನದಿಂದ ಅವಿರೋಧವಾಗಿ ಆಯ್ಕೆಯಾದ ಅನ್ಬಲಗನ್ ಸಿ.ಹರಿಜನ ಸೇರಿದಂತೆ ಎಲ್ಲಾ ನಿರ್ದೇಶಕರ ಅಂತಿಮ ಪಟ್ಟಿಯನ್ನು ಎ.ಕೆ ಚವ್ಹಾಣ್ ಅಧಿಕೃತವಾಗಿ ಪ್ರಕಟಿಸಿ ಶುಭಾರೈಸಿದರು.

ಬಳಿಕ ನಿರ್ದೇಶಕ ಮಂಡಳಿಯು ನೂತನ ಕಾರ್ಯಧ್ಯಕ್ಷರನ್ನಾಗಿ ಸೂರ್ಯಕಾಂತ್ ಜಯ ಸುವರ್ಣ ಮತ್ತು ಉಪಕಾರ್ಯಾಧ್ಯಕ್ಷ ಆಗಿ ನ್ಯಾಯವಾದಿ ಸೋಮನಾಥ ಬಿ. ಅಮೀನ್ ಅವರನ್ನು ಆಯ್ಕೆಗೊಳಿಸಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಚುನಾವಣಾಧಿಕಾರಿ ಸಂದೀಪ್ ದೇಶ್‌ಮುಖ್, ಸಹಾಯಕ ಚುನಾವಣಾ ಅಧಿಕಾರಿ ಡಿ.ಬಿ. ಗೋಸ್ವಾಮಿ, ಭಾರತ್ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿಇಓ ವಿದ್ಯಾನಂದ ಎಸ್. ಕರ್ಕೇರ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮತ್ತು ಸಹಾಯಕ ಚುನಾವಣಾಧಿಕಾರಿ ದಿನೇಶ್ ಬಿ. ಸಾಲಿಯಾನ್, ಸಹಾಯಕ ಚುನಾವಣಾ ಅಧಿಕಾರಿ, ಮಾರ್ಕೇಟಿಂಗ್ ಹೆಡ್ ರೋಹಿತ್ ಉದ್ಯಾವರ ಮುಂತಾದ ವರು ಉಪಸ್ಥಿತರಿದ್ದರು

ಫ಼್ಲೈಟ್ ಪೈಲಟ್ ಸೂರ್ಯಕಾಂತ ಈಗ ಭಾರತ್ ಬ್ಯಾಂಕ್‌ನ ಪೈಲಟ್ ಸೂರ್ಯಕಾಂತ್ ಜಯ ಸುವರ್ಣ : ಸೂರ್ಯಕಾಂತ್ ಇವರು ಭಾರತ್ ಬ್ಯಾಂಕ್ ನ ಸರ್ವಾಂಗೀಣ ಅಭಿವೃದ್ಧಿಯ ಸರದಾರನಾಗಿದ್ದು ಸ್ವರ್ಗೀಯರಾದ ಜಯ ಸಿ. ಸುವರ್ಣ ಮತ್ತು ಲೀಲಾವತಿ ಜೆ. ಸುವರ್ಣ ಅವರ ಸುಪುತ್ರ. ಜಯ ಸುವರ್ಣ ಅವರು ರಾಷ್ಟ್ರ ಮನ್ನಣೆ ಪಡೆದ ಪ್ರತಿಷ್ಠಿತ, ಧೀಮಂತ ವ್ಯಕ್ತಿತ್ವವುಳ್ಳ ಜನನಾಯಕರಾಗಿದ್ದರು. ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮತ್ತು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಇದರ ಅಧ್ಯಕ್ಷ, ಭಾರತ್ ಬ್ಯಾಂಕ್ ನ ಮಾಜಿ ಕಾರ್ಯಾಧ್ಯಕ್ಷರಾಗಿ ಜನಾನುರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರಾಗಿ ದ್ದರು.

ಆರಂಭದಲ್ಲಿ, ಸೂರ್ಯಕಾಂತ್ ಸುವರ್ಣ ಅವರು ತಮ್ಮ ತಂದೆಯ ವ್ಯವಹಾರಕ್ಕೆ ಸೇರಿಕೊಂಡರು. ಅವರು ೨೦೧೧ರಲ್ಲಿ ಬಿಲ್ಲವರ ಅಸೋಸಿಯೇಷನ್ ಸೇರಿ ಯುವ ಉಪಸಮಿತಿ ಯಲ್ಲಿ ಶ್ರಮಿಸಿದ್ದರು. ೨೦೧೩ ರಿಂದ ಎರಡು ಅವಧಿಗೆ ಭಾರತ್ ಬ್ಯಾಂಕ್‌ನ  ನಿರ್ದೇಶಕ ರಾಗಿದ್ದರು.

ಪಂಚಗಣಿಯ ಬೋರ್ಡಿಂಗ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿ ನಂತರ ಮುಂಬಯಿ ಅಂಧೇರಿಯಲ್ಲಿ MVLU ಕಾಲೇಜ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿರುವರು. ೧೨ನೇ ಶಿಕ್ಷಣದ ನಂತರ ಯುಎಸ್ಎ ಡಲ್ಲಾಸ್‌ನಲ್ಲಿ ವಾಣಿಜ್ಯ ಪೈಲಟ್ ತರಬೇತಿ ಪಡೆದರು ಮತ್ತು ವಾಣಿಜ್ಯ ಪೈಲಟ್ ಸುಶಿಕ್ಷಿತನಾಗಿ ಪೈಲಟ್ ಪರವಾನಗಿ ಹೊಂದಿರುವರು. ತಂದೆಯ ನಿಧನದ ನಂತರ ಸೂರ್ಯಕಾಂತ್ ಪೂಜ್ಯನೀಯರ ಸಾಮಾಜಿಕ, ವ್ಯವಹಾರದ ಜವಾಬ್ದಾರಿ ಯನ್ನು ಹೊಂದಿ ತಂದೆ ಜಯ ಸಿ. ಸುವರ್ಣರ ಹಾದಿಯಲ್ಲಿ ಸಾಗುತ್ತಿದ್ದಾರೆ. ಸೂರ್ಯಕಾಂತ್ ಅವರು ತಮ್ಮ ಪರಂಪರೆ ಮತ್ತು ಸಮಾಜಕ್ಕೆ ಮರಳಿ ನೀಡುವ ತತ್ವವನ್ನು ಅನುಸರಿಸು ತ್ತಿದ್ದಾರೆ.

ಪ್ರಸ್ತುತ ಸೂರ್ಯಕಾಂತ್ ರಾಷ್ಟ್ರೀಯ ಬಲ್ಲವರ ಮಹಾಮಂಡಲದ ಉಪಾಧ್ಯಕ್ಷ – ಶ್ರೀ ಗೋಕರ್ಣನಾಥ ಶೆಲ್‌ನಂ ಅಭಿವೃದ್ಧಿ ಸಮಿತಿ ಸದಸ್ಯ, ಕುದ್ರೋಳಿ ಶ್ರೀ ನಾರಾಯಣ ಗುರು ಶಾಲೆಯ ಟ್ರಸ್ಟಿ, ಶ್ರೀ ನಾರಾಯಣ ಗುರು ಶಾಲೆ ಮೂಲ್ಕಿ ಇದರ ಉಪಾಧ್ಯಕ್ಷ, ಮಾರಿಗುಡಿ ಹೊಸಮನೆ ಕಾಪು ಮುಂಬಯಿ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.