kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಎ.೦೭: ನರಿಂಗಾನದ ಯೆನೆಪೋಯ ಆಯುರ್ವೇದ ಆಸ್ಪತ್ರೆಯ ಕಟ್ಟಡದಲ್ಲಿ ಕ್ಯಾನ್ಸರ್ ರೋಗಿಗಳಿಗೆ ತಾತ್ಕಾಲಿಕ ಉಪಶಾಮಕ ಆರೈಕೆ ವಾರ್ಡ್ನ ಕಾಮಗಾರಿ ಬಹು ಕೋಟಿ ವೆಚ್ಚದಲ್ಲಿ ಸಾಗುತ್ತಿದ್ದು ದಾನಿಗಳು, ಪ್ರೋತ್ಸಹಕರು, ಹಿತೈಷಿಗಳ ಆಶ್ರಯದೊಂದಿಗೆ ಕಟ್ಟಡದ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿ. ಇದು ಕ್ಯಾನ್ಸರ್ ರೋಗಿಗಳಿಗೆ ಆಶ್ರಯ ತಾಣವಾಗಲಿ ಎಂದು ತ್ರಿವೇಣಿ ಸಮೂಹ ಮತ್ತು ರೂಪೀ ಬಾಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ| ಎನ್.ಬಿ ಶೆಟ್ಟಿ ಹಾರೈಸಿದರು.
ತಪಸ್ಯ ಫೌಂಡೇಷನ್ ಮತ್ತು ಲಯನ್ಸ್ ಇಂಟರ್‌ನ್ಯಾಷನಲ್ ೩೧೭ಡಿ ಆಶ್ರಯದಲ್ಲಿ ಇತ್ತೀಚೆಗೆ ಮಂಗಳೂರು ಮುಡಿಪು ಸನಿಹದ ನರಿಂಗಾನ ಅಲ್ಲಿನ ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ತಾತ್ಕಾಲಿಕ ಉಪಶಾಮಕ ಆರೈಕೆ ವಾರ್ಡ್ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿದ್ದು ಸಿಎ| ಎನ್.ಬಿ ಶೆಟ್ಟಿ ಮಾತನಾಡಿದರು.
ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಂ.ವಿಜಯ್ ಕುಮಾರ್ ಉಪಶಾಮಕ ಆರೈಕೆ ವಾರ್ಡ್ ಉದ್ಘಾಟಿಸಿ ಮಾತನಾಡಿ ಜೀವನದ ಕೊನೆಯುಸಿರು ಇರುವವರೆಗೂ ಕ್ಯಾನ್ಸರ್ ರೋಗಿಗಳನ್ನು ಗೌರವದಿಂದ ಕಾಣುವುದೇ ಉಪಶಾಮಕ ಆರೈಕೆ ವಾರ್ಡಿನ ಉದ್ದೇಶವಾಗಿದೆ. ತಪಸ್ಯ ಫೌಂಡೇಷನ್ ಹಮ್ಮಿಕೊಂಡಿರುವ ಮಾನವೀಯತೆಯ ಕಾರ್ಯಕ್ಕೆ ಯೆನೆಪೋಯ ಸಂಸ್ಥೆ ಸದಾ ಬೆಂಬಲಿಸುತ್ತದೆ.
ಕ್ಯಾನ್ಸರ್ ರೋಗದ ನೈಸರ್ಗಿಕ ಇತಿಹಾಸವನ್ನು ಬದಲಾಯಿಸದೇ ರೋಗಲಕ್ಷಣಗಳಿಗೆ ಕಂಡುಕೊಳ್ಳುವ ಪರಿಹಾರ, ತೊಡಕುಗಳ ನಿವಾರಣೆ ವಾರ್ಡಿನ ಮೂಲಕ ಸಾಧ್ಯ. ಕ್ಯಾನ್ಸರ್ ರೋಗಿಗಳು ಮನೆಮಂದಿಯಿಂದ ತಿರಸ್ಕರಿಸಲ್ಪಡು ವಾಗ, ಸಲಹಲು ಅಸಾಧ್ಯವಾದಂತಹ ರೀತಿಯಲ್ಲಿ ಇರುತ್ತಾರೆ. ಅಂತಹವರನ್ನು ಗೌರವದಿಂದ ಕಾಣಲು ತಪಸ್ಯ ಫೌಂಡೇಷನ್ ಮುಡಿಪು ಭಾಗದಲ್ಲಿ ನಿರ್ಮಿಸುವ ಕೇಂದ್ರಕ್ಕೆ ಸಹಕಾರ ಅಗತ್ಯ. ಯೆನೆಪೋಯ ಸಂಸ್ಥೆ ತಪಸ್ಯ ಫೌಂಡೇಷನ್ ಸದಾ ಜತೆಗಿದೆ ಎಂದರು.
೩೧೭ಡಿ ಪಾಸ್ಟ್ ಮಲ್ಟಿಪಲ್ ಕೌನ್ಸಿಲ್ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಮುಡಿಪು ಹತ್ತಿರ ಜಾಗ ಸಮತಟ್ಟು ಮಾಡಿ ಕೆಲಸ ಆರಂಭವಾಗಿತ್ತು, ಕೋವಿಡ್‌ನಿಂದಾಗಿ ಕಾಮಗಾರಿ ವಿಳಂಬವಾಗಿದೆ. ಜಿಲ್ಲೆಯಲ್ಲೇ ಇದೊಂದು ಮೊದಲ ಸೆಂಟರ್ ಆಗಿದ್ದು, ಈಗಾಗಲೇ ಟ್ರಸ್ಟ್ ಮೊಬೈಲ್ ಆಂಬ್ಯುಲೆನ್ಸ್ ಮೂಲಕ ರೋಗಿಗಳ ಮನೆ ಮನೆಗೆ ಭೇಟಿ ನೀಡಿ ಸೇವೆಯನ್ನು ನೀಡುತ್ತಿದೆ. ಯೆನೆಪೋಯ ಪರಿಗಣಿತ ವಿವಿ ಉಪಕುಲಪತಿಗಳು ಮೊದಲಿನಿಂದಲೂ ಸಹಕಾರವನ್ನು ನೀಡುತ್ತಾ ಬಂದಿದ್ದು ಅವರ ಆಶ್ರಯದಿಂದ ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ವಾರ್ಡ್ನ್ನು ನೀಡುವ ಮೂಲಕ ಟ್ರಸ್ಟ್ ಸೇವೆಯನ್ನು ಆರಂಭಿಸಿದೆ ಎಂದರು.
ತಪಸ್ಯ ಫೌಂಡೇಶನ್ ಟ್ರಸ್ಟೀಗಳಾದ ಡಾ| ಸುಂದರಾಮ್ ರೈ, ಮೋಹನ್ ಶೆಟ್ಟಿ, ನವೀನ್ ಚಂದ್ರ ಹೆಗ್ಡೆ, ಡಾ| ಆಶಾ ಜ್ಯೋತಿ ರೈ, ಅನಿಲ್ ಯು.ಪಿ, ಪದ್ಮಿನಿ ಪ್ರಶಾಂತ್ ರಾವ್, ವಿಶ್ವಾಸ್ ಯು.ಯಸ್ ಉಪಸ್ಥಿತರಿದ್ದು ತಪಸ್ಯ ಫೌಂಡೇ ಶನ್‌ನ ಆಡಳಿತ ಟ್ರಸ್ಟೀ ಸಬಿತಾ ಶೆಟ್ಟಿ ಸ್ವಾಗತಿಸಿ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.