Skip to main content
www.kallianpur.com | Email : kallianpur7@gmail.com | Mob : 9741001849

ಶ್ರೀ. ಕ್ಷೇ. ಧ. ಗ್ರಾ. ಯೋ. B. C ಟ್ರಸ್ಟ್ (ರಿ.) ಉಡುಪಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಡುಪಿ ಹಾಗೂ ವಿಕಾಸ ಸೇವಾ ಟ್ರಸ್ಟ್ ಅಶೋಕ ನಗರ ಇವರ ವತಿಯಿಂದ ಕಾನೂನು ಮಾಹಿತಿ ಹಾಗೂ ಸಲಹಾ ಕಾರ್ಯಕ್ರಮ.

By July 22, 2024Kannada News
kallianpurdotcom: 9741001849
(ಚಿತ್ರ /ವರದಿ : ಪ್ರೀತಿ ಕಲ್ಯಾಣಪುರ)

ಉಡುಪಿ: ದಿನಾಂಕ 21/07/2024 ರಂದು ಶ್ರೀ. ಕ್ಷೇ. ಧ. ಗ್ರಾ. ಯೋ. B. C ಟ್ರಸ್ಟ್ ರಿ ಉಡುಪಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಡುಪಿ  ಹಾಗೂ ವಿಕಾಸ ಸೇವಾ ಟ್ರಸ್ಟ್ ಅಶೋಕ ನಗರ ಇವರ ವತಿಯಿಂದ   ನಾರಾಯಣ ಗುರು ಸಭಾಭವನ ಬನ್ನಂಜೆ ಇಲ್ಲಿ ಕಾನೂನು ಮಾಹಿತಿ ಹಾಗೂ ಸಲಹಾ ಕಾರ್ಯಕ್ರಮವನ್ನು skdrdp (r) ಉಡುಪಿ ತಾಲೂಕಿನ ಯೋಜನಾಧಿಕಾರಿ ರಾಮ. M ಉದ್ಘಾಟಿಸಿದರು.

ನಮ್ಮ ಜೀವನದಲ್ಲಿ ಕರ್ತವ್ಯದ ಜೊತೆ ಸೇವಾ ಮನೋಭಾವನೆಯನ್ನು ರೂಢಿಸಿಕೊಂಡಾಗ ಮಾನವೀಯತೆ ತನ್ನಿಂದ ತಾನೇ ಬೆಳೆದು ವ್ಯಕ್ತಿ ವಿಕಾಸಿತ ನಗುತ್ತಾನೆ ಎಂದು ತಿಳಿದರು ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ನಗರ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ್ ರವರು  ಸೈಬರ್ ಕ್ರೈಂ, ಪೋಕ್ಸೋ ಕಾಯ್ದೆ , ಡಿಜಿಟಲ್ ಮನಿ ಇದರಿಂದ ನಡೆಯುತ್ತಿರುವ ದುಷ್ಪರಿಣಾಮಗಳ ಬಗ್ಗೆ ಹಾಗೂ ನಾವು ಜಾಗೃತರಾಗುವ ಸಲಹೆ  ಸೂಚನೆ ನೀಡಿದರು.

ಕಾರ್ಯ ಕ್ರಮದ ಅಧ್ಯಕ್ಷತೆಯನ್ನು  ವಿಕಾಸ ಸೇವಾ ಟ್ರಸ್ಟ್ ಅಶೋಕನಗರ ಇದರ ಸ್ಥಾಪಕರಾದ ಕಿಶೋರ್ ಪೂಜಾರಿ ಗರ್ಡೇ ವಹಿಸಿದ್ದರು  ಈ ಸಂದರ್ಭದಲ್ಲಿ ಉಡುಪಿ ವಲಯದ ವಲಯ್ಯಾಧ್ಯಕ್ಷರಾದ ಭಾರತಿ ಜಯಕರ,ಪುತ್ತೂರು  ನಗರಸಭೆ ಸದಸ್ಯರಾದ ಜಯಂತಿ ಪೂಜಾರಿ, ಮಾಧವ ಬನ್ನಂಜೆ, ಪ್ರೇಮ ದಯಾನಂದ್, ರತ್ನಾಕರ ಕೋಟ್ಯಾನ್,  ಉಡುಪಿ ವಲಯದ ಮೇಲ್ವಿಚಾರಕರಾದ ಕುಮಾರಿ ಪವಿತ್ರ, ಶೌರ್ಯ ವಿಪತ್ತು ನಿರ್ವಹಣಾ ಉಡುಪಿ ಘಟಕದ ಘಟಕಪ್ರತಿನಿಧಿ ಶಂಕರ್ ಕೋಟ್ಯಾನ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ  ಮೆಸ್ಕಾಂನ ನೇಜರಿನ ಶಾಖೆಯಲ್ಲಿ ಲೈನ್ ಮ್ಯಾನ್ ಆಗಿ10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಾಳಪ್ಪ ಆರ್ ಸೂಲನ್ನನವರ್ ರವರಿಗೆ ಅಭಿನಂದಿಸಲಾಯಿತು ಹಾಗೂ “ನಮ್ಮ ನಡೆ ಸ್ವಚ್ಛತೆ ಕಡೆ” ಅನಾವರಣ ಮಾಡಲಾಯಿತು.ಶ್ರೀಮತಿ ಸುಜಾತ  ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ನಂದಿತಾ  ಸ್ವಾಗತಿಸಿದರು ಶೌರ್ಯ ವಿಪತ್ತು ನಿರ್ವಹಣಾ ಉಡುಪಿ ಘಟಕದ ಸಂಯೋಜಕಿ ಪ್ರೀತಿ  ಧನ್ಯವಾದ ಅರ್ಪಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.