kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.೨೧: ಉತ್ತಮ ಶಿಕ್ಷಣ ದೊರೆತಾಗ ವ್ಯಕ್ತಿಯು ಸುಸಂಸ್ಕೃತನಾಗಿ ರೂಪುಗೊಂಡು ಸಮಾಜದ ಬೆಳವಣಿ ಗೆಗೆ ಕಾರಣೀಭೂತನಾಗುತ್ತಾನೆ. ನಮ್ಮ ಸಫಲಿಗ ಸಮಾಜದ ಏಳಿಗೆಗಾಗಿ ಸಂಘದ ಕಾರ್ಯಕಾರಿ ಸಮಿತಿಯು ಕೆಲವು ಯೋಜನೆಗಳನ್ನು ಹಮ್ಮಿಕೊಂಡು ಅದರ ಮುಖೇನ ಸಮಾಜ ಸದೃಢವಾಗಲು ಆ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದು ಸಂಘದ ಉದ್ದೇಶವನ್ನು ಜನರಿಗೆ ಮುಟ್ಟಿಸುವಲ್ಲಿ ಸಫಲತೆಯನ್ನು ಪಡೆದಿದೆ.
ಸಾಫಲ್ಯ ಭಾಗ್ಯ ಯೋಜನೆಯ ಮುಖಾಂತರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಹೊಲಿಗೆ ತರಬೇತಿ ಯನ್ನು ನೀಡಿದೆ. ಸಾಫಲ್ಯ ಸಂಜೀವಿನಿ ಯೋಜನೆಯ ಮೂಲಕ ಅನಾರೋಗ್ಯದಿಂದ ಬಳಲುವ ಹಿರಿಯರಿಗೆ ಉಚಿತ ಮೆಡಿಕಲ್ ಟೂಲ್ಸ್, ವೀಲ್ ಚೇಯರ್ಸ್ ಒದಗಿಸಿದೆ. ನಾದಸ್ವರ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಪೂರ್ಣ ವರ್ಷದ ಶಿಕ್ಷಣ ಶುಲ್ಕ, ಸಾಫಲ್ಯ ಶಿಕ್ಷಣ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಗಣಕಯಂತ್ರ ತರಬೇತಿ ವೆಚ್ಚ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ. ಸಾಫಲ್ಯ ಜ್ಯೋತಿ ಯೋಜನೆಯ ಮೂಲಕ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಮತ್ತು ವೃದ್ಧಾಶ್ರಮದಲ್ಲಿರುವವರಿಗೆ ಹಳೆಯ ಬಟ್ಟೆ ಪೂರೈಕೆ, ವೈದ್ಯಕೀಯ ಸವಲತ್ತುಗಳ ಪೂರೈಕೆ, ಅಡುಗೆ ಸಾಮಾಗ್ರಿ ಪೂರೈಕೆ ಹಾಗೂ ಆರ್ಥಿಕ ಸಹಾಯವನ್ನು ಒದಗಿಸುತ್ತಾ ಬಂದಿದೆ. ಸಾಫಲ್ಯ ಪ್ರಾಣಿ ಸಂಕುಲ ಯೋಜನೆ ಯ ಮೂಲಕ ಪ್ರಾಣಿ ಸಂಗ್ರಹಾಲಯಕ್ಕೆ ಆಹಾರ ಮತ್ತು ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದೆ ಎಂದು ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ ಅವರು ಕಳೆದ ರವಿವಾರ (ಆ.೧೮)ರಂದು ಪೇಜಾ ವರ ಮಠ, ಸಾಂತಾಕ್ರೂಜ್ ಇಲ್ಲಿ ನಡೆದ ಸಾಫಲ್ಯ ಸೇವಾ ಸಂಘದ ೭೦ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ, ಉಪಾಧ್ಯಕ್ಷ ಕೃಷ್ಣಕುಮಾರ್ ಬಂಗೇರ, ಕೋಶಾಧಿಕಾರಿ ಹೇಮಂತ್ ಸಪಳಿಗ ಹಾಗೂ ಗೌ.ಪ್ರ.ಕಾರ್ಯದರ್ಶಿ ಭಾಸ್ಕರ ಟಿ.ಸಪಳಿಗ ಅವರುಗಳು ಉಪಸ್ಥಿತರಿದ್ದು, ಭಾಸ್ಕರ್ ಟಿ ಸಪಳಿಗ ವರ್ಷದ ವಾರ್ಷಿಕ ಮಹಾಸಭೆಯ ವರದಿಯನ್ನು ಮಂಡಿಸಿ, ಸರ್ವಾನುಮತದಿಂದ ಅಂಗೀಕರಿಸಲಾಯಿತು. ಹೇಮಂತ್ ಸಪಳಿಗ ಅವರು ಕಳೆದ ವರ್ಷದ ಆಯವ್ಯಯ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟರು ಮತ್ತು ಅದು ಸರ್ವಾನುಮತದಿಂದ ಅಂಗೀಕರಿಸಿದರು.
ಅಧ್ಯಕ್ಷ ಶ್ರೀನಿವಾಸ ಸಾಫಲ್ಯರ ಹಸ್ತದಿಂದ ಆದಾಯ ತೆರಿಗೆ 80G ವಿನಾಯಿತಿ ಪ್ರಮಾಣ ಪತ್ರ ಮತ್ತು ನೋಂದಾ ವಣೆ ಪ್ರಮಾಣ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಆರ್ಯಾಷ್ ಫೈನಾನ್ಸಿಯಲ್ ಸರ್ವಿಸಸ್ ನ ಮಹೇಶ ಬಂಗೇರ ಅವರು ಹಣಕಾಸು ಹೂಡಿಕೆ ಮತ್ತು ಗಳಿಕೆಯ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ, ಗಣಕಯಂತ್ರದ ತರಬೇತಿ ಶುಲ್ಕ, ಗರಿಷ್ಟ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನ, ನಾದಸ್ವರ ಯೋಜನೆಯ ವತಿಯಿಂದ ಹಲವು ಮಕ್ಕಳಿಗೆ ವಾರ್ಷಿಕ ಶಿಕ್ಷಣ ಶುಲ್ಕ, ದಿವಂಗತ ಶ್ರೀ ಕೆ.ಟಿ ಕುಂದರ್ ಸ್ಮರಣಾರ್ಥ ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಶುಲ್ಕ ಇತ್ಯಾದಿ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಅಂದು ನಡೆದ ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ ಮತ್ತು ಕಾವ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಗಳನ್ನು ನೀಡಲಾಯಿತು.ತೀರ್ಪುಗಾರರಾಗಿ ಶ್ರೀಮತಿ ರೇಷ್ಮಾ ಆಚಾರ್ಯ, ರವಿ ಕರ್ಕೇರ ಹಾಗೂ ಡಾ| ಜಿ.ಪಿ ಕುಸುಮಾ ಆಗಮಿಸಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭಜನೆ, ಸತ್ಯನಾರಾಯಣ ಮಹಾಪೂಜೆ ನೇರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾದ ಬಳಿಕ ಅನ್ನಸಂತರ್ಪಣೆ ನಡೆಯಿತು. ಶ್ರೀಮತಿ ಲಕ್ಷ್ಮಿ ಮೆಂಡನ್, ಉಷಾ ಸಪಳಿಗ ಮತ್ತು ಅನುಸೂಯ ಸೋಮೇಶ್ವರ ಪ್ರಾರ್ಥನೆಗೈದರು. ಗೌ.ಪ್ರ.ಕಾರ್ಯದರ್ಶಿ ಭಾಸ್ಕರ್ ಟಿ ಸಪಳಿಗ ಅವರು ಸಭಿಕರನ್ನು ಸ್ವಾಗತಿಸಿದರು.
ಗೌರವ ಧನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಕು. ಐಶ್ವರ್ಯ, ಶ್ರೀಮತಿ ರತಿಕಾ ಸಾಫಲ್ಯ, ಕು. ಸಮೀಕ್ಷಾ ಬಂಗೇರ ಅವರುಗಳು ನಡೆಸಿಕೊಟ್ಟರು. ಬಹುಮಾನ ವಿತರಣೆಯ ಕಾರ್ಯವನ್ನು ಕು.ಶ್ರೇಯ ಪುತ್ರನ್ ನಡೆಸಿಕೊಟ್ಟರು . ಶ್ರೀ ಮಹೇಶ್ ಬಂಗೇರ ಅವರನ್ನು ಶ್ರೀಮತಿ ಕಲಾ ಬಂಗೇರ ಅವರು ಪರಿಚಯಿಸಿದರು. ಶ್ರೀಮತಿ ಉಷಾ ಸಪಳಿಗ ಅವರು ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಟಿ ಸಪಳಿಗ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯಗೊಂಡಿತು
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.