Skip to main content
www.kallianpur.com | Email : kallianpur7@gmail.com | Mob : 9741001849

ತುಳು-ಕನ್ನಡ ಮಿತ್ರ ನವಿಮುಂಬಯಿ ದೀಪಾವಳಿ ಸ್ನೇಹ ಸಮ್ಮೇಳನ.

By November 18, 2024Kannada News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ನ.೧೭: ನವಿಮುಂಬಯಿ ತುಳು-ಕನ್ನಡ ಮಿತ್ರ  ವೃಂದವು  ಕಳೆದ ಶನಿವಾರ ಜುಯಿ ನಗರದ ಬಂಟ್ಸ್  ಸೆಂಟರ್ ಸಭಾಗೃಹದಲ್ಲಿ ಅದ್ದೂರಿಯಿಂದ  ದೀಪಾವಳಿ  ಸ್ನೇಹ ಸಮ್ಮೇಳನ  ನೇರವೇರಿಸಿತು.

ಮಹಾರಾಷ್ಟ್ರ ಭಾಜಪ ಐಟಿ ಸೆಲ್‌ನ ಮುಖ್ಯಸ್ಥ ಸತೀಶ ನಿಕಮ್,  ಕರ್ನಾಟಕದ  ಭಾಜಪ ಶಾಸಕ  ಹಾಗೂ ಪಶ್ಚಿಮ  ಮಹಾರಾಷ್ಟ್ರದ ಚುನಾವಣಾ ಪ್ರಭಾರಿ  ಸಿ.ಟಿ.ರವಿ,  ಮಂಗಳೂರು  ಸಂಸದ ಕ್ಯಾ| ಬೃಜೇಶ್  ಚೌಟ,  ಬೆಳ್ತಂಗಡಿಯ  ಶಾಸಕರಾದ  ಹರೀಶ್  ಪೂಂಜ,  ಬೆಂಗಳನ  ಹಿರಿಯ  ಭಾಜಪ  ನಾಯಕರಾದ  ಉಮೇಶ್ ಶೆಟ್ಟಿ, ವಾಶಿಯಲ್ಲಿನ ಉದ್ಯಮಿ ಶ್ಯಾಮ್ ಎನ್.ಶೆಟ್ಟಿ ವಿಶೇಷ ಆಮಂತ್ರಿತರಾಗಿದ್ದು,  ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಟಾಟಿಸಿದರು.

ಸಾಂಸ್ಕೃತಿಕ  ಕಾರ್ಯಕ್ರಮವಾಗಿಸಿ ಕು| ಕೃತಿ  ಚಡಗ ಅವರಿಂದ ಗಣೇಶ ವಂದನೆ, ಭಾರತ ಮಾತೆಯ ಸ್ತುತಿ ಮತ್ತು  ಕು| ರಿತಿಕಾ ಸರಸ್ವತಿ ವಂದನೆ, ಕು| ಮನಿಷಾ ಶೆಟ್ಟಿ ಅವರು ಭರತನಾಟ್ಯ ಮತ್ತು ಅವರ ತಂಡ ನಾಡಗೀತೆ, ಬಾಕ್ಯರ್ದ ಕಂಡೊಡು ಪ್ರಸ್ತುತ ಪಡಿಸಿದರು. ಗೋಕುಲ  ಸಾಂಸ್ಕೃತಿಕ ಕೇಂದ್ರದ ಕಲಾವಿದರು  ಕುಡುಗೋಲು ಕೃಷ್ಣನ ಉಡುಪಿ ಕ್ಷೇತ್ರ ಮತ್ತು ಚೆನ್ನಕೇಶವ, ಕು| ರಿತಿಕಾ ಮತ್ತು ತಂಡವು ಲಲ್ಲಾತಿ ಭಂಡಾರ, ನೃತ್ಯ ಸಂಯೋಜಕಿ  ವಿಧುಷಿ ಶ್ರೀಮತಿ  ಸಹನಾ ಭಾರಧ್ವಾಜ್ ತಂದವು ವಿವಿಧ ನೃತ್ಯವಳಿಗಳನ್ನು ಪ್ರದರ್ಶಿಸಿದರು. ಕ್ಯಾಪ್ಟನ್  ಬೃಜೇಶ್  ಚೌಟ, ಸತೀಶ ನಿಕಮ್, ಸಿ.ಟಿ ರವಿ, ಹರೀಶ್  ಪೂಂಜ ಮಾತನಾಡಿ ಶುಭಾರೈಸಿದರು.

ಅನಿತ ಶೆಟ್ಟಿ ಮಾತನಾಡಿ ಇಂದಿನ  ಪರಿಸ್ಥಿತಿಯಲ್ಲಿ  ಸನಾತನ ಧರ್ಮದ  ಮೇಲೆ  ಬಂದಿರುವ  ಸಂಕಟದ ಬಗ್ಗೆ  ವಿವರಿಸಿ ಕೇವಲ  ಭಾಜಪ  ಸರ್ಕಾರ  ಮಾತ್ರ  ಈ ಪರಿಸ್ಥಿತಿಯಿಂದ  ದೇಶವನ್ನು  ಉಳಿಸಬಲ್ಲುದು  ಎಂದರು.

ಸಂಪತ್ ಶೆಟ್ಟಿ, ಜಗದೀಶ ಶೆಟ್ಟಿ,  ಸುನಿಲ್ ಶೆಟ್ಟಿ, ಭೋಜ ದೇವಾಡಿಗ, ರಮೇಶ್ ದೇವಾಡಿಗ, ಅನಿತಾ ಆಚಾರ್ಯ,  ಪೂರ್ಣಿಮಾ  ದೇವಾಡಿಗ, ಹರಿಣ ಅಮೀನ್  ಮತ್ತಿತರ ಗಣ್ಯರು  ಉಪಸ್ಥಿತರಿದ್ದರು.

ಮಿತ್ರ ವೃಂದದ  ಸದಸ್ಯರಾದ   ಕೆ.ರಾಜರಾಮ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣಗೈದು ಸನಾತನ ಧರ್ಮವನ್ನು ವಿನಾಶವಾಗಲು ಬಿಡದಂತೆ  ಜನರನ್ನು ಕೋರಿದರು. ಸುಜಿತ್  ಕುಮಾರ  ಪೂಜಾರಿ ಕಾರ್ಯಕ್ರಮ  ನಿರೂಪಿಸಿದರು. ಹರೀಶ ಪೂಜಾರಿ ಧನ್ಯವದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.