
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.೦೧: ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಶತಮಾನದ ಹಿಂದೆ ಸ್ಥಾಪಿಸಲ್ಪಟ್ಟು ಪ್ರಸ್ತುತ ನೂರರಲ್ಲಿನ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಸಯಾನ್ ಸಂಸ್ಥೆಯು ಆಚರಿಸುತ್ತಿರುವ ಶತಮಾನೋತ್ಸವ ಸಂಭ್ರಮ ಇಂದಿಲ್ಲಿ ನೂತನ ವರ್ಷದ ಮೊದಲದಿನದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮೊದಲ್ಗೊಂಡಿತು.
ಗೋಕುಲದ ನೂರು ವರ್ಷಗಳ ‘ಏಕತೆ, ಸಂಪ್ರದಾಯ, ಸಂಸ್ಕೃತಿ’ ಧ್ಯೇಯದ ಘೋಷಣೆಯೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡೆ ಇತ್ಯಾದಿಗಳ ಮೇಳೈಕೆಗಳೊಂದಿಗೆ ೨೦೨೫ರ ವರ್ಷವಿಡೀ ಹಮ್ಮಿಕೊಳ್ಳಲಾದ ಶತ ಕಾರ್ಯಕ್ರಮಗಳ ಸಂಕಲ್ಪಕ್ಕೆ ಚಾಲನೆಯನ್ನೀಡಲಾಯಿತು.
ಇಂದಿಲ್ಲಿ ಬುಧವಾರ ಮುಂಜಾನೆ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಮುಂಬಯಿ ಇದರ ವಡಲಾದಲ್ಲಿನ ಶ್ರೀರಾಮ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ದೇವರಿಗೆ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿ ಮಹಾರಾಷ್ಟ್ರದ ಮಥುರಾ ಪ್ರಸಿದ್ಧಿಯ ಸಯಾನ್‌ನ ಗೋಕುಲದಲ್ಲಿನ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶತಸಂಭ್ರಮಕ್ಕೆ ಚಾಲನೆಯನ್ನೀಡಲಾಯಿತು. ನಡಿಗೆಯುದ್ದಕ್ಕೂ ಭಜನೆ, ಸಂಕೀರ್ತನೆಗಳು ಮೊಳಗಿದ್ದು ಭಕ್ತ ಸಮೂಹ ಸಾಥ್ ನೀಡಿತು.
ಮುಂಜಾನೆ ೬.೦೦ ಗಂಟೆಗೆ ಶ್ರೀರಾಮ ದೇವಳದ ಅರ್ಚಕ ವೇ| ಮೂ| ಗೋವಿಂದ ಆಚಾರ್ಯ ಶ್ರೀರಾಮ ದೇವರಿಗೆ ಪೂಜೆ ನೆರವೇರಿಸಿ ನೀಡಿದ್ದ ಪ್ರಸಾದ ಸ್ವೀಕರಿಸಿದ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಗೋಕುಲ ಪರಿವಾರವು ಬಳಿಕ ಕಾಲ್ನಡಿಗೆ ಮೂಲಕ ಸಯಾನ್‌ನ ಗೋಕುಲಕ್ಕೆ ಆಗಮಿಸಿದ್ದು ಗೋಕುಲದ ಆರ್ಚಕ ಅಕ್ಷಯ್ ಬಲ್ಲಾಳ್ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.
ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್‌ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯೊಂದಿಗೆ ಆಯೋಜಿಸಲಾಗಿದ್ದ ಗೋಕುಲಾಯ್ಟ್‌ಸ್ ನಡಿಗೆಯಲ್ಲಿ ಬಿಎಸ್‌ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್, ಉಪಾಧ್ಯಕ್ಷ ವಾಮನ್ ಹೊಳ್ಳಾ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ, ಯುವ ವಿಭಾಗಧ್ಯಕ್ಷ ಪ್ರಶಾಂತ್ ಹೆರ್ಲೆ, ಗೋಕುಲ ಕಲಾವೃಂದದ ಕಾರ್ಯಾಧ್ಯಕ್ಷೆ ವಿನೋದಿನಿ ಆರ್.ರಾವ್, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲಕೃಷ್ಣ ಟ್ರಸ್ಟ್‌ನ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಆಶ್ರಯದ ಅಧ್ಯಕ್ಷ ರಾಜರಾಮ ಆಚಾರ್ಯ, ಸಂಚಾಲಕಿ ಚಂದ್ರಾವತಿ ರಾವ್, ದೀಪಕ್ ಶಿವತ್ತಾಯ, ಕೃಷ್ಣ ಮಂಜರಬೆಟ್ಟು, ರಾಮ ವಿಠಲ ಕಲ್ಲೂರಾಯ ಸೇರಿದಂತೆ ಎಸ್.ಎಸ್ ಉಡುಪ, ರಾಮ ಮಂದಿರದ ಅಧ್ಯಕ್ಷ ಮುಕುಂದ್ ಕಾಮತ್, ಉಪಾಧ್ಯಕ್ಷ ಆನಂತ್ ಪೈ, ಕಮಲಾಕ್ಷ ಸರಾಫ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಭಾಗವಹಿಸಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.