![](https://kallianpur.com/wp-content/uploads/2025/01/Kannada-Bhavana-Diamond-Junliee-1.jpg)
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.11: ಕನ್ನಡ ಭವನದ ವಿದ್ಯಾ ಸಂಕುಲವು ವಟವೃಕ್ಷವಾಗಿದೆ. ವಿದ್ಯಾಲಯದ ಆರಂಭದಿಂದಲೇ ನಾನಿಲ್ಲಿ ಅಧ್ಯಾಪಕನಾಗಿದ್ದೆ. ಈ ಸಂಸ್ಥೆಯು ಜನಸಾಮಾನ್ಯರನ್ನೂ ಜನಮಾನ್ಯರಾಗಿರಿಸಿ ಅತೀ ಉತ್ತಮರನ್ನಾಗಿ ಬೆಳೆಸಿದೆ. ವಿಸ್ತಾರವಾಗಿ ಬೆಳೆಯುತ್ತಾ ಎಲ್ಲರನ್ನೂ ಬಂಧುಗಳಾಗಿಸಿದ ಬನೀನು ವೃಕ್ಷವಾಗಿದೆ. ಹಳೆ ಬೇರು ಹೊಸ ಚಿಗುರುವಾಗಿಸಿ ಮುನ್ನಡೆದ ಕಾರಣ ಈ ಸಂಸ್ಥೆ ಇಂದಿಗೂ ಜೀವಾಳವಾಗಿದ್ದು ಅರ್‍ವತ್ತರ ನಡಿಗೆಯ ಸಡಗರದಲ್ಲಿದೆ. ಇಲ್ಲಿನ ವಿದ್ಯಾರ್ಥಿಗಳು ಮೇರು ಪರ್ವತವಾಗಿ ಬೆಳೆದ ಆನಂದವೇ ಸಂಸ್ಥೆಯ ಶ್ರೇಷ್ಠತೆಯಾಗಿದೆ. ಇವತ್ತು ಶಿಕ್ಷಣ ಸಂಸ್ಥೆಗಳು ವ್ಯಪಾರ ಆಗಿರುವುದು ದುರದೃಷ್ಟ. ಆದ್ದರಿಂದಲೇ ಮಾತೃಭಾಷೆ ಮರೆಯುವ ಕಾಲ ಬಂದಿದೆ. ಆದರೆ ಕನ್ನಡ ಭವನ ಇಂದಿಗೂ ಪರಿಶುದ್ಧ ಶಿಕ್ಷಾಣಾತ್ಮಕ ಮೌಲ್ಯಗಳನ್ನು ರೂಢಿಸಿರುವುದು ಸ್ತುತ್ಯಾರ್ಹ. ಇಂತಹ ಕನ್ನಡ ಭವನದ ಶುದ್ಧತೆಯ ಶಿಕ್ಷಣಾಲಯವು ಶತಕಾಲ ಬೆಳೆದು ಕನ್ನಡಾಂಭೆಯ ಜೀವಾಳವಾಗಿ ಬೆಳೆಯಲಿ ಎಂದು ಸರ್ವಜ್ಞ ವಿದ್ಯಾಪೀಠ ವಿರಾರ್ ಇದರ ಕುಲಪತಿ, ನಿವೃತ್ತ ಪ್ರಾಂಶುಪಾಲ ಪ್ರಲ್ಹಾದಾಚಾರ್ಯ ಆರ್.ನಾಗರಹಳ್ಳಿ ನುಡಿದರು.
ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ (ಕೆಬಿಇಎಸ್) ತನ್ನ ಪ್ರೌಢಶಾಲೆ ಮತ್ತು ಕಿರಿಯ ಮಹಾವಿದ್ಯಾಲಯದ ವಜ್ರಮಹೋತ್ಸವ ಸಮಾರೋಪ ಇಂದಿಲ್ಲಿ ಶನಿವಾರ ಪೂರ್ವಾಹ್ನ ಮುಂಬಯಿ ಮೆರೈನ್‌ಲೈನ್ಸ್‌ನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಪಾಟ್ಕರ್ ಸಭಾಗೃಹದಲ್ಲಿ ನೆರವೇರಿಸಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯ ನ್ನಿತ್ತು ಪ್ರಲ್ಹಾದಾಚಾರ್ಯರು ಆಶೀರ್ವಚನವನ್ನಿತ್ತರು.
ಕನ್ನಡ ಭವನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಯಾನಂದ ಬಿ.ಅಮೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಯಾಗಿ ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಸಿಎ| ಶ್ರೀನಿವಾಸ ಪಿ.ಸಾಪಲ್ಯ, ಗೌರವ ಅತಿಥಿಗಳಾಗಿ ಎನ್‌ಬಿಎಸ್ ಆಂಡ್ ಕಂಪೆನಿ ಚಾರ್ಟರ್ಡ್ ಅಕೌಂಟೆಂಟ್ಸ್ ಇದರ ಕಾರ್ಯಾಧ್ಯಕ್ಷ ಸಿಎ| ಎನ್.ಬಿ ಶೆಟ್ಟಿಮಹೇಶ್ ಹೊಟೇಲು ಸಮೂಹದ ನಿರ್ದೇಶಕಿ ಶಾರದ ಎಸ್.ಕರ್ಕೇರ, , ಹಾಸ್ಪಿಟಾಲಿಟಿ ಇಂಡಸ್ಟ್ರಿ ಉದ್ಯಮಿ ಶ್ರೀನಿವಾಸ ಎಸ್.ಶೆಟ್ಟಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಾಧಕರಾದ ಸಿಎ| ಉಷಾ ಗೌಡ, ಸಿಎಸ್| ಸಂಜಯ್ ರಾಜು ಕುಂದರ್, ನ್ಯಾಯವಾದಿ ಜಯರಾಮ ಶೆಟ್ಟಿ, ವಾಸ್ತುತಜ್ಞ ಪಂಡಿತ್ ನವೀನ್‌ಚಂದ್ರ ಆರ್.ಸನಿಲ್ ಮತ್ತು ಅಜಯ್ ಚವ್ಹಾಣ್, ಸುದೀರ್ಘ ಸೇವೆ ಸಲ್ಲಿಸಿದ ಬೋಧಕ ಸಿಬ್ಬಂದಿಗಳಾದ ಜೂನಿಯರ್ ಕಾಲೇಜು ಉಪನ್ಯಾಸಕರಾದ ಗುಲಾಬ್‌ರಾ ವ್ ಎಂ.ಪಾಟೀಲ್, ರಾಜೇಂದ್ರ ಆರ್.ಗುಪ್ತಾ, ಇನ್ನಿತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಅತಿಥಿಗಳು ಸನ್ಮಾನಿಸಿ ಅಭಿನಂದಿಸಿದರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಮತ್ತು ಸಂತೋಷ ಶೆಟ್ಟಿ ಹಾಗೂ ಉಪಸ್ಥಿತ ಗಣ್ಯರನ್ನು ವಿಶೇಷವಾಗಿ ಗೌರವಿಸಲಾಯಿತು.
ಹಳೆ ವಿದ್ಯಾರ್ಥಿಗಳ ಕೂಡುವಿಕೆಯಿಂದ ಈ ಉತ್ಸವ ಮತ್ತಷ್ಟು ಉತ್ಸಾಹ ಭರಿತವಾಗಿದೆ. ೧೯೬೪ ಬ್ಯಾಚ್‌ನ ವಿದ್ಯಾರ್ಥಿಗಳೂ ಇಂದಿಲ್ಲಿ ಉಪಸ್ಥಿತರಿರುವುದು ಇನ್ನಷ್ಟು ಸಂತೋಷ ತಂದಿದೆ. ಸಂಸ್ಥೆಯ ಕನ್ನಡಿಗ ಮತ್ತು ಕನ್ನಡೇತರ ಸಂಸ್ಥಾಪಕರನ್ನು ನೆನೆಪಿಸಿ ಅವರ ಸೇವೆಯನ್ನು ಸ್ಮರಿಸುತ್ತೇವೆ. ಅವರೆಲ್ಲರ ದೂರದೃಷ್ಟಿ ಪ್ರಯತ್ನದ ಫಲ ಈ ವಿದ್ಯಾ ಸಂಕುಲವಾಗಿದೆ. ಅದೆಷ್ಟೋ ಜನರನ್ನು ಸರ್ವೋತ್ತಮ ನಾಗರಿಕರನ್ನಾಗಿಸಿದ ಹಿರಿಮೆ ಈ ಸಂಸ್ಥೆಯ ಸಾಧನೆಯಾಗಿದೆ ಅನ್ನೋದು ನಮ್ಮ ಅಭಿಮಾನವಾಗಿದೆ ಎಂದ ಅಧ್ಯಕ್ಷೀಯ ಭಾಷಣದಲ್ಲಿ ದಯಾನಂದ ಅಮೀನ್ ತಿಳಿಸಿದರು.
ಕೆಬಿಇಎಸ್ ಉಪಾಧ್ಯಕ್ಷ ಗಿರೀಶ್ ಬಿ.ಸಾಲಿಯಾನ್ ಗೌ| ಪ್ರ| ಕಾರ್ಯದರ್ಶಿ ಶೇಖರ್ ಎ.ಅವಿನ್, ಗೌ| ಕೋಶಾಧಿಕಾರಿ ಪುರುಷೋತ್ತಮ ಎಂ.ಪೂಜಾರಿ, ಜೊತೆ ಕಾರ್ಯದರ್ಶಿ ಡಾ| ಸತೀಶ್ ಎನ್.ಬಂಗೇರ ಮತ್ತು ನರೇಶ್ ಟಿ. ಅವಿನ್, ಜೊತೆ ಕೋಶಾಧಿಕಾರಿ ಮೋಹನ್ ಡಿ.ಪೂಜಾರಿ, ಪ್ರಾಂಶುಪಾಲೆ ಅಮೃತಾ ಎ.ಶೆಟ್ಟಿ ವೇದಿಕೆಯನ್ನಲಂಕರಿಸಿದ್ದರು. ಕೆಬಿಇಎಸ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಶಿಕ್ಷಣಾಲಯ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಹಳೆ ಮತ್ತು ಹಾಲಿ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಕೆಬಿಇಎಸ್ ವಿದ್ಯಾಲಯದ ವಿದ್ಯಾರ್ಥಿಗಳು, ಹಳೆ ವಿದ್ಯಾಥಿsಗಳು ವೈವಿಧ್ಯಮ ಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಿಕ್ಷಕ ವಿಠಲ್ ಮನೋರೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ವಿದ್ಯಾಥಿನಿಯರು ಪ್ರಾರ್ಥನೆಯನ್ನಾಡಿದರು. ಅಮೃತಾ ಎ.ಶೆಟ್ಟಿ ಸ್ವಾಗತಿಸಿದರು. ಶೇಖರ್ ಎ.ಅವಿನ್ ಸಂಸ್ಥೆಯ ಅರ್‍ವತ್ತರ ಸಾಧನೆಯನ್ನು ಸ್ಥೂಲವಾಗಿ ತಿಳಿಸಿದರು. ಹಳೆವಿದ್ಯಾಥಿ ಗೋಪಾಲ ತ್ರಾಸಿ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಸತೀಶ್ ಎನ್.ಬಂಗೇರ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.