
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.೨೩: ಕಾಂದಿವಲಿ ಪಶ್ಚಿಮದದಲ್ಲಿ ಕಳೆದ ಎರಡುವರೆ ದಶಕಗಳಿಂದ ಸೇವಾನಿರತ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ (ರಿ.) ಸಂಸ್ಥೆಯು ಬಳಗದ ರಜತೋತ್ಸವ ಸಂಭ್ರಮಾಚರಣೆ ಅಂಗವಾಗಿ ಇಂದಿಲ್ಲಿ ಭಾನುವಾರ ಅಪರಾಹ್ನ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಆಯೋಜಿಸಿತ್ತು.
ಬಳಗದ ಅಧ್ಯಕ್ಷ ರವೀಂದ್ರ ಎಂ.ಶೆಟ್ಟಿ ಮಾರ್ಗದರ್ಶನದಲ್ಲಿ ಆಯೋಜಿತ ಮಹಿಳಾ ಸಮಾವೇಶದಲ್ಲಿ ಮುಖ್ಯ ಅತಿಥಿsಯಾಗಿದ್ದ ಪದ್ಮಶಾಲಿ ಸಮಾಜ ಸೇವಾ ಸಂಘ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಹರಿ ಶೆಟ್ಟಿಗಾರ್ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಮಾತನಾಡಿ ಮಹಿಳಾ ಸಮಾವೇಶ ಸಮಾಜಕ್ಕೆ ಮಾದರಿ. ಹಿರಿಕಿರಿಯರ ಶ್ರಮದ ಫಲ ಈ ಬೆಳ್ಳಿಹಬ್ಬದ ಸಡಗರವಾಗಿದೆ. ಈ ಬಳಗವು ದಶಕದ ಒಳಿಗಾಗಿ ಸ್ವಂತದ ಭವನ ರೂಪಿಸಿರುವುದು ಸಂಸ್ಥೆಯ ಸೇವಾನಿಷ್ಠೆಗೆ ಸಾಕ್ಷಿಯಾಗಿದೆ. ಸಂಸ್ಕಾರ ಸಂಸ್ಕೃತಿಯನ್ನು ಮುನ್ನಡೆಸಿ ಬಾಳಲು ಇಂತಹ ಸಮಾವೇಶಗಳು ಪ್ರೇರಕವಾಗಿವೆ ಎಂದರು. ಕಂಠಧ್ವನಿ ಕಲಾವಿದೆ ಧನುಷ್ಮತಿ ಉದ್ಯಾವರ ಅತಿಥಿs ಅತಿಥಿಯಾಗಿದ್ದರು.
ಕಾರ್ಯಕ್ರಮದ ಅಂಗವಾಗಿ ಶಿವಸಾಗರ್‌ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ಎನ್.ಟಿ ಪೂಜಾರಿ ಮತ್ತು ಎಲ್‌ಡಿಎಸ್ ಇನ್ಫೋಟೆಕ್ ಸಂಸ್ಥೆಯ ನಿರ್ದೇಶಕಿ ಶೈಲಜಾ ಅಮರನಾಥ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಪ್ರಥಮ ವಿಚಾರ ಗೋಷ್ಠಿ ನಡೆಸಲ್ಪಟ್ಟಿತು. ನ್ಯಾಯವಾದಿ ಅಮಿತಾ ಎಸ್.ಭಾಗವತ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ‘ಮಹಿಳಾ ಪ್ರಪಂಚ ಭ್ರಮೆ-ವಾಸ್ತವ’ ಗೋಷ್ಠಿಯಲ್ಲಿ ಗ್ರಾಮೀಣ ಮಹಿಳೆ-ಬದುಕು-ಹೋರಾಟ ವಿಷಯದಲ್ಲಿ ಕವಿ, ಲೇಖಕಿ ದೀಪಾ ಗೋನಾಳ್ ಹಾನಗಲ್, ನಗರ ಮಹಿಳೆ- ಸಮಸ್ಯೆ-ಪರಿಹಾರ ವಿಷಯದಲ್ಲಿ ಪ್ರಾಧ್ಯಾಪಕಿ, ಲೇಖಕಿ ಡಾ| ಮಧುಮಾಲ ಕೆ.ಮಂಗಳೂರು, ಮಹಾನಗರ ಮಹಿಳೆ-ಸವಾಲು-ಸಾಧನೆ ವಿಷಯದಲ್ಲಿ ಪತ್ರಕರ್ತೆ, ಲೇಖಕಿ ಡಾ| ಜಿ.ಪಿ ಕುಸುಮಾ ಮುಂಬಯಿ ತಮ್ಮ ವಿಷಯಗಳನ್ನು ಪ್ರಸ್ತುತಪಡಿಸಿದರು. ಹಾಗೂ ಬಳಗವು ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು.
ಉದ್ಯಮಿ ಕೃಷ್ಣಾನಂದ ಶೆಟ್ಟಿಗಾರ್ ಮತ್ತು ಕಂಠಧ್ವನಿ ಕಲಾವಿದ ಜಯಶೀಲ ಸುವರ್ಣ ಪ್ರಾಯೋಜಕತ್ವದಲ್ಲಿ ನಡೆಸಲ್ಪಟ್ಟ ಕವಿಗೋಷ್ಠಿಯಲ್ಲಿ ಶಮೀಮ ಕುತ್ತಾರ್ ಕುಂಬ್ಳೆ, ಹೇಮಾ ಎಸ್.ಅಮೀನ್, ವಾಣಿ ಶೆಟ್ಟಿ, ಸಿಎ| ರಜನಿ ತೋಳಾರ್, ಲಲಿತಾ ಪ್ರಭು ಅಂಗಡಿ, ಜಯಲಕ್ಷ್ಮೀ ಪಿ.ಶೆಟ್ಟಿ, ದೀಪಾ ಗೋನಾಳ್ ಮತ್ತಿತರ ಕವಯಿತ್ರಿಯರು ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ಡಾ| ಸುರೇಖಾ ರಾಧಾಕೃಷ್ಣ ನಾಯಕ್ ಅವರ ಕವಿತಾ ಸಂಕಲನ ‘ಕಥೆಗಳೆಷ್ಟು ಚೆನ್ನ’ ಕವಿ-ಕಾವ್ಯ ಕೃತಿಯನ್ನು ಹೆಸರಾಂತ ಕವಯತ್ರಿ, ಲೇಖಕಿ ಹೇಮಲತಾ ವಸ್ತ್ರದ ವಿಜಯಪುರ ಬಿಡುಗಡೆಗೊಳಿಸಿದರು. ಲೇಖಕಿ ಶಶಿಕಲಾ ಹೆಗಡೆ ಕೃತಿ ಪರಿಚಯಿಸಿದರು. ರೂಪ ಭಟ್ ಮತ್ತು ಕುಮಾರಿ ವಾಣಿ ಗೋಷ್ಠಿಗಳನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಉಷಾ ಗೋಪಾಲ ಶೆಟ್ಟಿ, ಬಳಗದ ಬೆಳ್ಳಿಹಬ್ಬ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್.ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ. ಕೋಟ್ಯಾನ್, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕ ಗೋಪಾಲ ತ್ರಾಸಿ, ವಿಶ್ವಸ್ಥ ಸದಸ್ಯ ಭಾಸ್ಕರ್ ಬಂಗೇರ ಸರಪಾಡಿ ಮತ್ತು ಭಾರತಿ ಎಸ್.ರಾವ್, ವೀಣಾ ದೀಪಕ್ ಸುವರ್ಣ, ಹಾಲಿ ಮತ್ತು ಮಾಜಿ ಪದಾಧಿಕಾರಿಗಳು ಸೇರಿದಂತೆ ಉಪ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದರು.
ಸಮಾವೇಶದ ಅಂಗವಾಗಿ ಬಳಗದ ಮಹಿಳೆಯರು ಮತ್ತು ಮಕ್ಕಳು ಭಜನೆ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ತನುಜಾ ಭಟ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.
ಯಮುನಾ ಸಾಲ್ಯಾನ್, ಪದ್ಮಾವತಿ ನಾಯ್ಕ್, ರಶ್ಮೀ ಆಚಾರ್ಯ, ವಿಜಯಲಕ್ಷಿ ಶೆಟ್ಟಿ, ಉಷಾ ಆಚಾರ್ಯ ಪ್ರಾರ್ಥನೆಯನ್ನಾಡಿದರು. ಮಹಿಳಾ ವಿಭಾಗಧ್ಯಕ್ಷೆ ಪದ್ಮಾವತಿ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಮಹಿಳಾ ವಿಭಾಗದ ಸಂಚಾಲಕಿ ಶಾಂತಾ ಎನ್.ಭsಟ್ ಪ್ರಸ್ತಾವನೆಗೈದರು. ಸುನಂದ ಭಟ್ ಚುಟುಕು ಹಾಡಿದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಪಗುಚ್ಫ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಶಶಿಕಲಾ ಹೆಗಡೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ರಾಜೀವಿ ಆರ್. ಕೋಟ್ಯಾನ್ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.