
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಫೆ.26: ಪ್ರತಿವರ್ಷ ಅದ್ಧೂರಿಯಿಂದ ನೆರವೇರುತ್ತಿರುವಂತಹ ಕನ್ನಡಿಗ ಕಲಾವಿದರ ಮಾತೃಸಂಸ್ಥೆಯಾದ ಕನ್ನಡಿಗಕಲಾವಿದರಪರಿಷತ್ತು (ರಿ.) ಇದರ 16ನೇ ಕಲಾಮಹೋತ್ಸವವನ್ನು ತಾ.22, ಮಾರ್ಚ್ 2025 ಶನಿವಾರ ಮಧ್ಯಾಹ್ನ 1:30 ರಿಂದ ರಾತ್ರಿ 8:30ರ ವರೆಗೆ ಸಾಂತಾಕ್ರೂಜ್ ಇಲ್ಲಿನ ಬಿಲ್ಲವ ಭವನದಲ್ಲಿ ಆಚರಿಸುವುದಾಗಿ ನಿರ್ಧರಿಸಲಾಗಿದೆ. ಆ ಪ್ರಯುಕ್ತ ವಿಚಾರವಿನಿಮಯ ಮಾಡಲು ಪರಿಷತ್ತುನ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಕಳೆದ ಇತ್ತೀಚೆಗೆ ಬಿಲ್ಲವಭವನದ ಸಮಾಲೋಚನಾ ಸಭಾಗೃಹದಲ್ಲಿ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆಯೊಂದನ್ನು ನಡೆಸಿ ಸಭೆಯಲ್ಲಿ ಕಲಾಮಹೋತ್ಸವದ ಬಗ್ಗೆ ಚರ್ಚಿಸಲಾಯಿತು.
ಅಧ್ಯಕ್ಷರು ಸ್ವಾಗತಿಸಿ ಸಭೆಗೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಚಂದ್ರಶೇಖರ ಭಟ್ ಗತ ಸಭೆಯ ವರದಿಯನ್ನು ಮತ್ತು ಗೌರವ ಕೋಶಾಧಿಕಾರಿ ಪಿ.ಬಿ ಚಂದ್ರಹಾಸ ಅವರು ಆವಯವವನ್ನು ಸಭೆಗೆ ತಿಳಿಸಿದರು.
ಬಳಿಕ ಅಧ್ಯಕ್ಷರು ಸಭೆಯನ್ನು ಮುಂದುವರಿಸುತ್ತಾ ಕಲಾಮಹೋತ್ಸವದಂದು ಡಾ| ಆರ್.ಕೆ. ಶೆಟ್ಟಿ ಅವರ ಮಾತ್ರಶ್ರೀಯವರ ಸ್ಮರಣಾರ್ಥ ಕೊಡಮಾಡುವ ಕಲಾಶ್ರೀ ಪ್ರಶಸ್ತಿ ಪ್ರದಾನಕ್ಕೆ ಅಭ್ಯಥಿಯ ಆಯ್ಕೆಗಾಗಿ ಈಗಾಗಲೇ ಸಮಿತಿಯೊಂದನ್ನು ರಚಿಸಿದ್ದೇವೆ. ಸಮಿತಿಯು ಅಭ್ಯಥಿಯ ಆಯ್ಕೆಗಾಗಿ ಕಾರ್ಯನಿರತವಾಗಿದೆ ಮತ್ತು ಕಲಾಮಹೋತ್ಸವದಂದು ಪರಿಷ್ಕೃತಗೊಂಡ “ಮಾಹಿತಿಗ್ರಂಥ” ಕೈಪಿಡಿಯ ಬಿಡುಗಡೆಯೂ ನೆರವೇರಿಸಲಾಗುವುದು ಎಂದು ಸಭೆಗೆ ತಿಳಿಯ ಪಡಿಸಿದರು.
ಪ್ರತಿಸಲದಂತೆ ಈಬಾರಿಯೂ ಯಕ್ಷಗಾನ, ನಾಟಕ, ನೃತ್ಯ, ಸಮೂಹನೃತ್ಯ, ಸಂಗೀತ ಮುಂತಾದ ವಿವಿಧ ಕಲಾಪ್ರಕಾರಗಳ ವೈವಿಧ್ಯಮಯ ಪ್ರದರ್ಶನವನ್ನು ನೀಡುವರೇ ನಿರ್ಧರಿಸಲಾಯಿತು. ಮುಂಬಯಿಯ ಖ್ಯಾತ ಯಕ್ಷಗಾನ ಕಲಾವಿದ ಲೇಖಕ ದಾಮೋದರ ಶೆಟ್ಟಿ ಇರುವೈಲು ನೇತೃತ್ವದಲ್ಲಿ ಯಕ್ಷಗಾನ, ಖ್ಯಾತ ರಂಗನಿರ್ದೇಶಕ ಲೇಖಕ, ನಾರಾಯಣ ಶೆಟ್ಟಿನಂದಳಿಕೆ ಅವರ ಮಾರ್ಗದರ್ಶನದಲ್ಲಿ ಯುವ ರಂಗಪ್ರತಿಭೆ ಚಿನ್ಮಯ್ಮೋಹನ್ಸಾಲ್ಯಾನ್ ಅವರ ತಂಡದಿಂದ ನಾಟಕ, ಮಹಾನಗರದ ಖ್ಯಾತ ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನಿರ್ದೇಶನದಲ್ಲಿ ಸಂಗೀತ ರಸಮಂಜರಿ, ರಂಗನಟಿ ಚಂದ್ರಾವತಿ ದೇವಾಡಿಗ ಅವರ ಮುಂದಾಳತ್ವದಲ್ಲಿ ವಿದೂಷಿ ಅಮಿತಾಜತನ್, ಅಂಕಿತಾ ನಾಯಕ್, ಶ್ರೇಯಸ್ ಹೆಗ್ಡೆಇವರ ತಂಡಗಳಿಂದ ನೃತ್ಯ, ಸಮೂಹನೃತ್ಯ ಮುಂತಾz ಪ್ರದರ್ಶನ ಕಲೆಗಳು ನೆರವೇರಲಿದೆ ಎಂದರು.
ಮುಂಬಯಿಯ ವಿವಿಧ ಕಲಾ ಪ್ರಕಾರಗಳ ಕಲಾವಿದ ಸದಸ್ಯ ಬಾಂಧವರು, ಸಂಘಟಕರು ,ಕಲಾಭಿಮಾನಿಗಳು, ಹಾಗೇಯೇ ನಮ್ಮ ಆತ್ಮೀಯ ಕಲಾಪೋಷಕರು ಕಲಾಪ್ರೇಕ್ಷಕರು, ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾಮಹೋತ್ಸವವನ್ನು ಯಶಸ್ವಿ ಗೊಳಿಸಬೇಕಾಗಿ ಡಾ| ಸುರೇಂದ್ರಕುಮಾರ್ ಹೆಗ್ಡ್ಡೆ (ಅಧ್ಯಕ್ಷರು), ಕಮಲಾಕ್ಷ ಜಿ.ಸರಾಫ್ ಮತ್ತು ಸಿಎ| ಶ್ರೀನಿವಾಸ ಪಿ.ಸಾಫಲ್ಯ (ಉಪಾಧ್ಯಕ್ಷರು), ಚಂದ್ರಶೇಖರ್ಭಟ್ (ಗೌ| ಕಾರ್ಯದರ್ಶಿ) ಪಿ.ಬಿ.ಚಂದ್ರಹಾಸ (ಗೌ| ಕೋಶಾಧಿಕಾರಿ) ಚಂದ್ರಾವತಿ ದೇವಾಡಿಗ (ಜೊತೆ ಕಾರ್ಯದರ್ಶಿ) ನವೀನ್ ಶೆಟ್ಟಿ ಇನ್ನಬಾಳಿಕೆ (ಜೊತೆ ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿ ಮತ್ತು ಸರ್ವಸದಸ್ಯರು ವಿನಂತಿಸಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.