
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.೩೦: ಯಾವುದೇ ಜನ ಸಮುದಾಯದ ಐತಿಹಾಸಿಕ, ಸಾಮಾಜಿಕ ಹಿನ್ನಲೆಯನ್ನು ತಿಳಿಯಲು ಆ ಜನರ ಪಾರಂಪರಿಕ ಸಾಂಪ್ರದಾಯಿಕ ಹಾಡುಗಳ ಪರಿಚಯ ತುಂಬಾ ಅಗತ್ಯ. ಅದುದರಿಂದ ಯುವ ಪೀಳಿಗೆ ತಮ್ಮ ಸಮುದಾಯದ ಜನಪದ ಸಾಹಿತ್ಯದತ್ತ ಒಲವು ಬೆಳಸಿಕೊಳ್ಳುವುದಕ್ಕೆ ಆಸಕ್ತಿ ತೋರಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ಜೋಕಿಂ ಜ್ಞಾನಿ ಆಲ್ವಾರಿಸ್ ಅವರು ರವಿವಾರ ಜೂ.೨೯ ರಂದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಸಭಾಗಂಣದಲ್ಲಿ ಕೊಂಕಣಿ ಸಾಹಿತ್ಯ ಕಲಾ ಆನಿ ಸಾಂಸ್ಕ್ರತಿಕ ಸಂಘಟನ್, ಉಡುಪಿ ಜಿಲ್ಲೆ, ಮತ್ತು ಕಥೋಲಿಕ ಸಭಾ. ಮಿಲಾಗ್ರಿಸ್ ಘಟಕ. ಕಲ್ಯಾಣಪುರ ಇವರ ಜಂಟಿ ಸಹಯೋಗದಲ್ಲಿ ಜರಗಿದ ವೊವಿಯೊ ವೇರ್ಸ್ ಕಾರ್ಯಾಗಾರವನ್ನು ಗುಮಟ್ ವಾದನವನ್ನು ಭಾರಿಸುವುದರ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆ, ಶಿಕ್ಷಣ, ಸಾಹಿತ್ಯ, ಕಲೆ, ಜಾನಪದ ಮತ್ತು ಪರಂಪರೆ ಉಳಿಸುವಿಕೆ ಹಾಗೂ ಬೆಳಸುವಿಕೆಗೆ ನಿರಂತರ ಪ್ರೋತ್ಸಾಹಿಸುತ್ತ ಬರುತ್ತಿದೆ. ಕೊಂಕಣಿ ಭಾಂದವರು ಅಕಾಡೆಮಿಯು ನಡೆಸುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಇದರ ಸದುಪಯೋಗವನ್ನು ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ವಿನ್ಸೆಂಟ್ ಆಳ್ವಾ, ರವರು ಡಾ| ಪ್ಲಾವಿಯಾ ಕ್ಯಾಸ್ತೆಲಿನೊ ಮಣಿಪಾಲ ಇವರು ಬರೆದಿರುವ “ತುಜ್ಯಾ ಹಾಸ್ಯಾಂ ಖಾತಿರ್” ಕವಿತ ಸಂಗ್ರಹದ ಪುಸ್ತಕವನ್ನು ಬಿಡುಗಡೆ ಮಾಡುತ್ತ ಜಾಗತೀಕರಣದ ಅತಿಯಾದ ಒತ್ತಡಗಳ ಫಲವಾಗಿ ಇಂದಿನ ಯುವಜನತೆಗೆ ತಮ್ಮ ಪರಂಪರೆಯ ಹಾಗೂ ಜನಪದ ಸಂಸ್ಕ್ರತಿಯ ಕುರಿತು ಅಭಿಮಾನ ಬೆಳೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹಲವಾರು ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ. ಈ ಹಿನ್ನಲೆಯಲ್ಲಿ ತಂದೆ, ತಾಯಿ, ಪೋಷಕರು ತಮ್ಮ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವುದರೊಂದಿಗೆ ತಮ್ಮ ತಮ್ಮ ಕುಟುಂಬದ ಪರಂಪರೆಯನ್ನು ನೆನಪು ಮಾಡುತ್ತಾ ಇರಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿದ್ದ ಸ್ವಾಮಿ ಪ್ರಮೋದ್ ಕಾರ್ಡೋಜರವರು ಮಾತನಾಡಿ ಪಾಶ್ಚಾತ್ತೀಕರಣದ ಫಲವಾಗಿ ನಮ್ಮ ಜನರ ನಡುವೆ ಜನಪದ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಹಲವಾರು ಅನಾಹುತಕಾರಿ ಬದಲಾವಣೆಗಳಾಗಿವೆ. ಇವುಗಳ ಬಗ್ಗೆ ತಮ್ಮ ಮನೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಹೆಚ್ಚಿನ ಗಮನ ನೀಡಿ ಹಿರಿಯರು, ಕಿರಿಯರನ್ನು ಸರಿದಾರಿಗೆ ತರುವಂತಾಗ ಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಹ ಸಂಘಟಕರಾದ ಕಥೊಲಿಕ್ ಸಭಾ ಕಲ್ಯಾಣಪುರದ ಅಧ್ಯಕ್ಷರಾದ ಶ್ರೀಮತಿ ಮಾರ್ಸೆಲಿನ್ ಶೆರಾ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಾಹಿತ್ಯ, ಕಲೆ ಮತ್ತು ಸಾಂಸ್ಕ್ರತಿಕ ಸಂಘಟನೆಯ ಅಧ್ಯಕ್ಷರಾದ ಡಾ| ಪ್ಲಾವಿಯಾ ಕಾಸ್ತೆಲಿನೊ ಇವರು ವಂದನಾರ್ಪಣೆ ಮಾಡಿದರು. ರಿತೇಶ್ ಡಿಸೋಜ, ಉದ್ಯಾವರ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಶ್ರೀಮತಿ ಐರಿನ್ ರೆಬೆಲ್ಲೊ, ಅನಿಲ್ ಡಿಕುನ್ಹಾ ಮತ್ತು ಗ್ಲೆನನ್ ಡಿಸೋಜ ಇವರ ನೇತೃತ್ವದಲ್ಲಿ ವೊವಿಯೋ ವೇರ್ಸ್ ಕಾರ್ಯಾಗಾರ ನಡೆಯಿತು. ಇದರಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿಯನ್ನು ನೀಡಲಾಯಿತು.
ಅಪರಾಹ್ನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ತರಬೇತು ಪಡೆದ ಶಿಬಿರಾರ್ಥಿಗಳಿಂದ ಸಾಂಪ್ರದಾಯಿಕ ಹಾಡುಗಳ ಪ್ರದರ್ಶನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಫೆದರ್ ಕಮ್ಯುನಿಕೇಶನ್ ಸಂಸ್ಥೆಯ ಮಾಲೀಕರಾದ ವಾಲ್ಟರ್ ಪಿಂಟೊ ಇವರು ಮುಖ್ಯ ಅತಿಥಿಯಾಗಿ ಭಾಗವಹಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ವೊಯೊ ವೇರ್ಸ್ ಕಾರ್ಯಾಗಾರವನ್ನು ಗುಮಟ್ ವಾದನವನ್ನು ಭಾರಿಸು ವುದರ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆ, ಶಿಕ್ಷಣ, ಸಾಹಿತ್ಯ, ಕಲೆ, ಜಾನಪದ ಮತ್ತು ಪರಂಪರೆ ಉಳಿಸುವಿಕೆ ಹಾಗೂ ಬೆಳಸುವಿಕೆಗೆ ನಿರಂತರ ಪ್ರೋತ್ಸಾಹಿಸುತ್ತ ಬರುತ್ತಿದೆ. ಕೊಂಕಣಿ ಭಾಂದವರು ಅಕಾಡೆಮಿಯು ನಡೆಸುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಇದರ ಸದುಪಯೋಗವನ್ನು ಪಡೆಯಬೇಕೆಂದು ಕರೆ ನೀಡಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.