
ಮುಂಬಯಿ (ಆರ್‌ಬಿಐ), ಆ.೧೨: ೨೦೧೬ರಲ್ಲಿ ಮೋಹನ್ ಕುಮಾರ್ ಜೆ. ಗೌಡರ ಇವರ ಸಾರಥ್ಯದಲ್ಲಿ ಸ್ಥಾಪಿತ ಗೌಡರ ಉನ್ನತೀಕರಣ ಸಂಸ್ಥೆ ಇದೀಗ ಸರಿಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಸದಸತ್ವವನ್ನು ಹೊಂದಿರುವ ಗೌಡರ ಉನ್ನತೀಕರಣ ಸಂಘವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿದೆ ಹಾಗೂ ಬಡ ಕಾರ್ಮಿಕ ಹಾಗೂ ಸಣ್ಣ ಉದ್ಯಮಿ ವರ್ಗಕ್ಕೂ ಸಹಕರಿ ಸುತ್ತಾ ಸಾಮಾಜಿಕ ಕಾರ್ಯಕ್ರಮಗಳಿಂದ ತನ್ನ ಅಸ್ಮಿತೆಯನ್ನು ರೂಪಿಸಿಕೊಂಡಿದೆ.
ಇದೀಗ ಇದೇ ಬರುವ ಶುಕ್ರವಾರ, ಆಗಸ್ಟ್.೧೫ ರಂದು ತನ್ನ ೯ನೇ ವಾರ್ಷಿಕೋತ್ಸವವನ್ನು ಸಂಭ್ರಮಿಸಲಿದೆ. ಸಿಡ್ಕೋ ಎಕ್ಷೀಬಿಷನ್ ಸೆಂಟರ್ ವಾಶಿ ನವಿ ಮುಂಬಯಿ (ವಾಶಿ ರೈಲ್ವೇ ಸ್ಟೇಷನ್ ಹತ್ತಿರ) ಇಲ್ಲಿ ವಿಜೃಂಭನೆಯಿಂದ ವಾರ್ಷಿಕೋತ್ಸವದ ಆಚಾರಿಸಲಿದೆ.
ಈ ಭವ್ಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿsತಿಗಳಾಗಿ ಮಹಾರಾಷ್ಟ್ರ ಸರ್ಕಾರದ ಅರಣ್ಯ ಖಾತೆ ಸಚಿವ ಗಣೇಶ್ ನಾಯ್ಕ್ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಡಾ| ಕೆ.ಸಿ ನಾರಾಯಣ ಗೌಡ ಹಾಗೂ ಶ್ರಾವಣ ಬೆಳಗೋಳ ಕ್ಷೇತ್ರದ ಶಾಸಕ ಡಾ. ಸಿ.ಎನ್ ಬಾಲಕೃಷ್ಣ ಆಗಮಿಸಲಿದ್ದಾರೆ.
ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗುವ ಸಭಾ ಕಾರ್ಯಕ್ರಮದಲ್ಲ್ಲಿ ಗಣ್ಯ ಅಥಿತಿಗಳಾಗಿ ಕೆ.ಎಂ ರಾಮು ಸ್ವಾಮೀಜಿ (ಗುರು ಸ್ವಾಮಿಗಳು, ಶ್ರೀ ಶನೀಶ್ವರ ದೇವಲಯ ಚೆಂಬೂರು, ರವಿ ಎಸ್.ದೇವಾಡಿಗ (ಮಾಜಿ ಅಧ್ಯಕ್ಷರು, ದೇವಡಿಗ ಸಂಘ ಮುಂಬಯಿ), ಬಾಲಕೃಷ್ಣ ಬಿ.ಶೆಟ್ಟಿ ಮಾರಳಿ ಕೆಳಮನೆ (ಮಾಲಕರು, ಹೋಟೆಲ್ ರಿತ್ವಿಕ್ ರೆಸೆಡೆನ್ಸಿ ಮತ್ತು ಸಾಮಜಿಕ ಕಾರ್ಯಕರ್ತರು) ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಮಹಾರಾಷ್ಟ್ರ ಘಟಕ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಶಿವ ಮೂಡಿಗೆರೆ (ಉಪಾಧ್ಯಕ್ಷರು ಚಿತ್ರಪಟ್ ಕಮಘರ್ ಅಗಾಡಿ ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರ ಪ್ರದೇಶ) ಹಾಗೂ ಶ್ರೀ ಬಾಲಾಜಿ ಟ್ರಾನ್ಸ್ ಸಿರ್ಟ್ ನ ನಿರ್ದೇಶಕ ಅಭಿಜಿತ್ ಆರ್. ಗೌಡರು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ನಿಮಿತ್ತ ಮಧ್ಯಾಹ್ನ ೧.೦೦ ಗಂಟೆಯಿಂದ ೨.೦೦ ಗಂಟೆ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ (ಶನಿಮಂದಿರ ಕಾಂಜೂರ್ ಮಾರ್ಗ) ಇವರ ಮುಂದಾಳುತ್ವದಲ್ಲಿ ವರ ಮಹಾಲಕ್ಷ್ಮಿ ಪೂಜೆ ನಡೆಸಲಾಗುತ್ತಿದೆ. ಹಾಗೂ ೨. ೦೦ ಗಂಟೆ ಯಿಂದ ಮಹಿಳಾ ಮಂಡಳಿಯಿಂದ ಅರಿಸಿನ ಕುಂಕುಮ ಕಾರ್ಯಕ್ರಮ ನೆಡೆಯಲಿದೆ. ತದನಂತರ ೩. ೦೦ ಗಂಟೆಯಿಂದ ೫.೦೦ ಗಂಟೆಯ ವರೆಗೆ ಸಂಘದ ಮಹಿಳಾ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಲಿದೆ. ಸಂಜೆ ೫.೦೦ ಯಿಂದ ೬:೩೦ರ ವರೆಗೆ ಸನ್ಮಾನ ಸಮಾರಂಭ ಹಾಗೂ ಸಭಾ ಕಾರ್ಯ ಕ್ರಮ ನೆರೆವೇರಲಿದೆ. ನಂತರ ೬:೩೦ ಗಂಟೆಯಿಂದ ೮.೦೦ ಗಂಟೆ ವರೆಗೆ ಸತೀಶ್ ಎರ್ಮಾಳ್ ರಚಿಸಿ ಅನಿಲ್ ಕುಮಾರ್ ಹೆಗ್ಗಡೆ ಅನುವಾದಿಸಿ ಬಾಬಾ ಪ್ರಸಾದ್ ಅರಸ ನಿರ್ದೇಶಿತ ಕನ್ನಡ ಸಾಮಾಜಿಕ ನಾಟಕ ಯಾರಿಗೂ ಹೇಳ್ಬೇಡಿ” ಪ್ರದರ್ಶನ ಗೊಳ್ಳಲಿದೆ. ತದನಂತರ ರಾತ್ರಿ ೮.೦೦ ಗಂಟೆಯಿಂದ ಪ್ರೀತಿ ಭೋಜನ೩ವನ್ನು ಏರ್ಪಡಿಸಲಾಗಿದೆ.
ಈ ಸಂಪೂರ್ಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ತಾವೆಲ್ಲರೂ ಸಕುಟುಂಬ, ಬಂಧುಮಿತ್ರರೊಡನೆ ೪ಆಗಮಿಸಿ ಕಾರ್ಯ ಕ್ರಮವನ್ನು ಚೆಂದಗಾಣಿಸಿ ಕೊಡುವುದರ ಮೂಲಕ ಶ್ರೀ ವಾರಮಲಷ್ಮಿ ದೇವಿಯ ಪ್ರಸಾದವನ್ನು ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗ ಬೇಕೆಂದು ಮುಂಬಯಿ, ಥಾಣೆ, ನವಿ ಮುಂಬಯಿ ಜಿಲ್ಲೆಯ ಕನ್ನಡಿಗರೆಲ್ಲರಿಗೂ ಸಾದಾರದಿಂದ ಗೌಡರ ಉನ್ನತಿ ಕಾರಣ ಸಂಸ್ಥೇ (ರಿ.) ಮಹಾರಾಷ್ಟ್ರ ಇದರ ತಮ್ಮಣ್ಣ ಕಾಳೆ ಗೌಡ (ಉಪಾಧ್ಯಕ್ಷರು), ಜಯರಾಮ ಮಹಾಲಿಂಗೇಗೌಡ (ಉಪಾಧ್ಯಕ್ಷರು), ರವೀಂದ್ರ ನಂಜಪ್ಪ ಗೌಡ (ಪ್ರ.ಕಾರ್ಯದರ್ಶಿ) ತೇಜಕುಮಾರ್ ಎಲ್ ಗೌಡ (ಕೋಶಧಿಕಾರಿ), ಉಮೇಶ್ ಪುಟ್ಟಸ್ವಾಮಿ ಗೌಡ (ಜೊತೆ ಕಾರ್ಯದರ್ಶಿ), ರವಿ ಜೆ. ಗೌಡ (ಜೊತೆ ಕೊಸಧಿಕಾರಿ) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ. ಸಾಂಸ್ಕೃತಿಕ ಮತ್ತು ಆರೋಗ್ಯ ವಿಭಾಗ, ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗ ಸೇರಿದಂತೆ ಸಲಹಾ ಸಮಿತಿ ಹಾಗೂ ಸರ್ವ ಸದಸ್ಯರು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.