
kallianpurdotcom: Mob 9741001849
( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )
ಉದ್ಯಾವರ: ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಈ ಸಂಸ್ಥೆ ಸತತವಾಗಿ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದನ್ನು ಕಾರ್ಯಗತಗೊಳಿಸುವ ಪರಿ ಇದೆಯಲ್ಲ ಇದು ನಿಜವಾಗಿಯೂ ದೇವರ ಕೆಲಸ . ಅರ್ಹ ವಿದ್ಯಾರ್ಥಿಗಳ ಕಲಿಕೆಗಾಗಿ ಹಾಕಿಕೊಳ್ಳುವ ಯಾವುದೇ ಕೆಲಸವಾಗಿರಲಿ ಅದು ದೇವರ ಸೇವೆ ಎಂದು ಪರಿಗಣಿತವಾಗಿದೆ .ಇಂತಹ ಸೇವೆಯನ್ನು ಸತತವಾಗಿ 50 ವರ್ಷಗಳಿಂದ ಈ ಸಂಸ್ಥೆ ಮಾಡುತ್ತದೆ ಎಂದರೆ ನಿಜವಾಗಿಯೂ ಆಶ್ಚರ್ಯವೆನಿಸುತ್ತದೆ. ಈ ಕೆಲಸ ಸಂಸ್ಥೆಯಿಂದ ನಿರಂತರವಾಗಲಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡಿದ ಸಂಮಾನ ಅದು ಬೇರೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ. ಈ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿ ಎಂದು ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಧರ್ಮ ಗುರುಗಳಾದ ರೆ_ಫಾ_ಅನಿಲ್_ಡಿಸೋಜ ಅವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಫ್ಸಾ ಅಡಿಟೋರಿಯಂನಲ್ಲಿ ಜರಗಿದ ,ಯು . ಪದ್ಮನಾಭ ಶೆಟ್ಟಿಗಾರ್, ಸದಾನಂದ ಕಾಂಚನ್, ಐರಿನ್ ಮಿನೇಜಸ್, ಜಾರ್ಜ್ ಮಿನೇಜಸ್ , ಮನೋಹರ್ ಕೋಟ್ಯಾನ್ ಸ್ಮಾರಕ ವಿದ್ಯಾರ್ಥಿವೇತನ ಮತ್ತು ಅಬ್ದುಲ್ ಜಲೀಲ್ ಸಾಹೇಬರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು
ಅವರು ಮುಂದುವರಿಯುತ್ತಾ ಜಾತಿ, ಧರ್ಮ ಭೇದವಿಲ್ಲದೆ ಒಂದು ಸಂಸ್ಥೆಯನ್ನು ಮುನ್ನಡೆಸಲು ಈ ಸಂದರ್ಭದಲ್ಲಿ ಒಂದು ಬದ್ಧತೆ ಬೇಕು. ಸೌಹಾರ್ದ ಭಾರತದ ಕಲ್ಪನೆ ಬೇಕು. ಇದು ಸಂಸ್ಥೆಯ ಕಾರ್ಯಕರ್ತರಲ್ಲಿ ಇದೆ .ಹಾಗಾಗಿ ಈ ಸಂಸ್ಥೆ ಇನ್ನೂ ಕೂಡ ಮುಂದುವರಿಯುತ್ತಿದೆ ಸಂಸ್ಥೆಯನ್ನು ಆರಂಭಿಸುವುದು ಬಹಳ ಸುಲಭ .ಆದರೆ ಅದನ್ನು ಮುನ್ನಡೆಸುವುದು ಅತ್ಯಂತ ಕಷ್ಟಕರವಾದುದು. ಆದರೆ ಇಲ್ಲಿನ ಮಿತ್ರರು ಅದನ್ನು ಸಾಧಿಸಿ ತೋರಿಸಿದ್ದಾರೆ . ಇವರ ಈ ಜನಸೇವೆ ನಿರಂತರವಾಗಲಿ ಎಂದು ಹಾರೈಸಿದರು .
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಅತ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ #ಹರಿಪ್ರಸಾದ್_ರೈ ಅವರು ಮಾತನಾಡುತ್ತಾ ಸ್ನೇಹ ,ಸೇವೆ ,ಸಹಕಾರ ,ನಾಯಕತ್ವ ಈ ನಾಲ್ಕು ಪದಗಳು ಈ ಸಂಸ್ಥೆಯ ತಳಪಾಯ, ಇದು ಒಂದು ಸಂಸ್ಥೆ ಕಟ್ಟುವುದಕ್ಕೆ ಮಾತ್ರವಲ್ಲ ನಮ್ಮ ದೇಶದ ತಳಪಾಯವೂ ಕೂಡ ಆಗಿದೆ. ಹಾಗಾಗಿ ಈ ಸಂಸ್ಥೆಯ ಕೆಲಸ ಕಾರ್ಯಗಳು ಜನಪರವಾಗಿಯೇ ಇರುತ್ತೆ. ಸೌಹಾರ್ದತೆಯ ನೆಲೆಗಟ್ಟಲ್ಲಿ ಇರುತ್ತದೆ. ಇಂದು ಸುಮಾರು ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ ಅವರ ಮುಂದಿನ ಭವಿಷ್ಯ ಹಸನಾಗಲಿ ಈ ಮೂಲಕ ಸಂಸ್ಥೆಯ ಸೇವೆಗೆ ಸಾರ್ಥಕತೆ ದೊರೆಯಲಿ ಎಂದು ಆಶಿಸಿದರು.
ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರು ಹಲೀಮಾ ಸಾಬ್ಜು ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಆಡಳಿತ ವಿಶ್ವಸ್ಥರಾದ #ಅಬ್ದುಲ್_ಜಲೀಲ್_ಸಾಹೇಬರು ಮಾತನಾಡುತ್ತಾ ನಿಜಾಾರ್ಥದಲ್ಲಿ ಸಂಸ್ಥೆ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಕೇವಲ ಧ್ವಜಾರೋಹಣ ಭಾಷಣಗಳಿಗೆ ಸೀಮಿತವಾಗದೆ ವಿದ್ಯಾರ್ಥಿ ಸಮುದಾಯಕ್ಕೆ ಸಹಾಯ ಹಸ್ತವನ್ನು ನೀಡುವ ಈ ಕಾರ್ಯಕ್ರಮ ಶ್ಲಾಘನೀಯವಾದದು. ಇದು ನಿಜವಾದ ಸ್ವಾತಂತ್ರ್ಯೋತ್ಸವ ಆಚರಣೆ. ಇದು ನಿರಂತರವಾಗಲಿ ಎಂದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳು ಅಂತಿಮ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರಾಂಕ್ ಗಳಿಸಿದ ಮಾ.ಜಯದೀಪ್ ಪೂಜಾರಿ ,ಕು. ರಿಹಾ ಮೆಲನಿ ಡಿಸೋಜ, ಕು. ದೃಶಿತಾ ಎಚ್. ಪುತ್ರನ್ ಅವರನ್ನು ಸಂಮಾನಿಸಿದರು, ಮಹಮ್ಮದ್ ರಿಝಾನ್ ಅವರ ಅನುಪಸ್ಥಿಯಲ್ಲಿ ಅವರ ತಂದೆ ಮಹಮ್ಮದ್ ಆಸಿಫ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಚಂದ್ರಾವತಿ ಎಸ್. ಭಂಡಾರಿ, ಶರತ್ ಕುಮಾರ್, ಯು. ಪದ್ಮನಾಭ ಕಾಮತ್, ಕೋಶಾಧಿಕಾರಿ ಸತೀಶ್ ಡಿ.ಸಾಲ್ಯಾನ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ವಂದಿಸಿದರು. ಜತೆ ಕಾರ್ಯದರ್ಶಿ ಶ್ರೀಮತಿ ಆಶಾವಾಸು, ಮಾಜಿ ಅಧ್ಯಕ್ಷ ತಿಲಕ್ ರಾಜ್ ಸಾಲ್ಯಾನ್ ,ಮಾಜಿ ಉಪಾಧ್ಯಕ್ಷ ಶ್ರೀಮತಿ ಸುಗಂಧಿ ಶೇಖರ್ ಫಲಾನುಭವಿಗಳ ಹೆಸರು ವಾಚಿಸಿದರು . ಮಾಜಿ ಅಧ್ಯಕ್ಷ ಅನೂಪ್ ಕುಮಾರ್ ರವರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಜರಗಿತ್ತು. ಕಾರ್ಯಕ್ರಮದಲ್ಲಿ 150 ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಒಂದು ಲಕ್ಷ ರೂಪಾಯಿಗಳಷ್ಟು ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾರ್ಯಾಲಯದಲ್ಲಿ ಬೆಳಿಗ್ಗೆ ಜರಗಿದ ಧ್ವಜಾರೋಹಣ ಸಮಾರಂಭದಲ್ಲಿ ಮಾಜಿ ಅಧ್ಯಕ್ಷರಾದ ಜಿ.ಎಸ್. ಹಿದಾಯತ್ ರಾಷ್ಟ್ರಧ್ವಜ ಅರಳಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.