
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.೦೪: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಸಹಯೋಗದಲ್ಲಿ ಕಾರ್ತಿಕ ಮಾಸ ಶುಕ್ಲ ಪಕ್ಷ ಬಲಿ ಪ್ರತಿಪದೆಯಿಂದ ಉತ್ಥಾನದ್ವಾದಶಿ ತನಕ ತುಳಸಿ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬುಧವಾರ ದಿನಾಂಕ ೨೨.೧೦.೨೦೨೫ ರಿಂದ ದಿನಾಂಕ ೩.೧೧.೨೦೨೫ ಸೋಮವಾರದವರೆಗೆ ಸಂಜೆ ೫ ಗಂಟೆಯಿಂದ ಗೋಕುಲದ ವಿವಿಧ ವಲಯದ ಭಜನಾ ಮಂಡಳಿಗಳು ಮತ್ತು ಇತರ ಭಜನಾ ಮಂಡಳಿಯವರಿಂದ ಹರಿನಾಮ ಸಂಕೀರ್ತನೆ, ಭಕ್ತಿ ಸಂಗೀತ, ಭರತನಾಟ್ಯ, ವಾಯಲಿನ್ ವಾದನ ಇತ್ಯಾದಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ದಿನಾಂಕ ೨೨.೧೦.೨೦೨೫ ರಿಂದ ೩.೧೧.೨೦೨೫ ರವರೆಗೆ ಗೋಕುಲ ಭಜನಾ ಮಂಡಳಿ ಮತ್ತು ಗೋಕುಲ ಸಾಂಸ್ಕೃತಿಕ ಶಿಕ್ಷಣ ಕೇಂದ್ರದ ಸಂಯುಕ್ತ ಆಯೋಜನೆಯಲ್ಲಿ ಪ್ರತಿದಿನ ೫ ಗಂಟೆಯಿಂದ ೬.೧೫ ರವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಕ್ರಮವಾಗಿ ಶ್ರೀ ಗೋಪಾಲ ಕೃಷ್ಣ ಭಜನಾ ಮಂಡಳಿ, ಅಂಧೇರಿ, ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜರಿಮರಿ, ಶ್ರೀ ವಾಗ್ದೇವಿ ಭಜನಾ ಮಂಡಳಿ, ಬೋರಿವಲಿ, ಜಿ.ಎಸ್ ಬಿ. ಮಹಿಳಾ ಭಜನಾ ಮಂಡಳಿ, ಮಾತುಂಗ ಶಾಖೆ, ಶ್ರೀ ಮಧ್ವೇಶ ಭಜನಾ ಮಂಡಳಿ, ಸಾಂತಾಕ್ರೂಜ್, ಶ್ರೀ ಮೂಕಾಂಬಿಕಾ ಭಜನಾ ಮಂಡಳಿ, ಘನ್ಸೋಲಿ, ಶ್ರೀ ವಿಠ್ಠಲ ಭಜನಾ ಮಂಡಳಿ, ಮೀರಾ ರೋಡ್, ಶ್ರೀ ಹರಿಕೃಷ್ಣ ಭಜನಾ ಮಂಡಳಿ, ನವಿ ಮುಂಬಯಿ, ಶ್ರೀ ಸ್ಕಂದ ಭಜನಾ ಮಂಡಳಿ, ಚೆಂಬೂರ್, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ, ಅಂಧೇರಿ, ಗೋಕುಲ ಯುವ ಕಲಾವೃಂದ, ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ, ದಾದರ್, ಮುಂತಾದವರಿಂದ ಭಜನೆ, ನೃತ್ಯ ಭಜನಾ ಕಾರ್ಯಕ್ರಮವು ಅತ್ಯಂತ ವರ್ಣರಂಜಿತವಾಗಿ ಜರಗಿತು. ಸಂಜೆ ಗಾನ ಕಲಾ ವಿದ್ಯಾ ನಿಲಯದ ಗುರು ಶೇಖರ್ ತಂಜೋರ್ಕರ್ ಶಿಷ್ಯ ವೃಂದದಿಂದ ವಾಯಲಿನ್ ವಾದನ, ಅರುಣೋದಯ ಕಲಾ ನಿಕೇತನ ಗುರು ಮೀನಾಕ್ಷಿ ಶ್ರೀಯಾನ್ ಶಿಷ್ಯವರ್ಗದವರಿಂದ ಭರತನಾಟ್ಯ, ಗುರು ಶ್ರೀಧರ್ ಚಾರಿ ಮತ್ತು ಶಿಷ್ಯರಿಂದ ಮಧುರ ಧ್ವನಿ, ಭಕ್ತಿ ಸಂಗೀತ, ಕಲಾಶ್ರೀ ಡಾ.ಲತಾ ಸುರೇಂದ್ರ ಶಿಷ್ಯೆಯರಿಂದ “ವರ್ಣಮ್” ಭರತನಾಟ್ಯ, ಪವಿತ್ರಾ ಆರ್ಟ್ ಮತ್ತು ವಿಶುಯಲ್ ಇನ್ಸ್ಟಿಟ್ಯೂಟ್ ಅವರಿಂದ ಭರತನಾಟ್ಯ, ಶ್ರೀ ಷಣ್ಮುಖಾನಂದ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭಕ್ತಿ ರಸ ಮಂಜರಿ, ಶಶಿ ಬಾಲ ರಮೇಶ್ ಮತ್ತು ಲಾವಣ್ಯ ಇನ್ಸ್ಟಿಟ್ಯೂಟ್ ಓಫ್ ಡಾನ್ಸ್ ಆರ್ಟ್ಸ್ ಶಿಷ್ಯವೃಂದದವರಿಂದ ಭರತನಾಟ್ಯ, ವೇದ್ ಇನ್ಸ್ಟಿಟ್ಯೂಟ್ ಓಫ್ ಪರ್ಫಾರ್ಮಿಂಗ್ ಆರ್ಟ್ಸ್ ಅವರಿಂದ ಕಥಕ್ ನೃತ್ಯ, ನೃತ್ಯಾಂ ಗನ ಅಕಾಡೆಮಿ ಓಫ್ ಫೈನ್ ಆರ್ಟ್ಸ್ ಅವರಿಂದ ಭರತನಾಟ್ಯ, ನೃತ್ಯ ರಂಜನಿ ಫೈನ್ ಆರ್ಟ್ಸ್ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಂದ ಭರತ ನಾಟ್ಯ, ವಿದ್ಯಾ ಹರಿಕೃಷ್ಣ ಮತ್ತು ಗಿಂಅಒ ಅಕಾಡೆಮಿ ವಿದ್ಯಾರ್ಥಿಗಳಿಂದ ಭಕ್ತಿಗಾನ, ನಟನಪ್ರಿಯ ನಾದಂ ನ ಗುರು ವಿದ್ಯಾ ವೆಂಕಟೇಶ್ವರನ್ ರವರ ಶಿಷ್ಯವೃಂದದವರಿಂದ, ಭರತನಾಟ್ಯ, ಕಥಕ್ ಮತ್ತು ಒಡಿಸ್ಸಿ ನೃತ್ಯ ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು ,ಶ್ರೀಮತಿಯರಾದ ಪ್ರೇಮಾ ರಾವ್, ಸಹನಾ ಪೋತಿ, ಶೈಲಿನಿ ರಾವ್, ಸ್ಮಿತಾ ಭಟ್, ಪ್ರಫುಲ್ಲಾ ರಾವ್, ಪ್ರೇಮಾ ಎನ್ ರಾವ್, ಅಂಜನಾ ರಾವ್, ಶಾಂತಲಾ ಉಡುಪ, ವನಿತಾ ರಾವ್, ರಾಜೇಶ್ವರಿ ಭಟ್, ಯಶೋದಾ ವೈಲಾಯ, ವೀಣಾ ರಾವ್, ಕುಸುಮ್ ಶ್ರೀನಿವಾಸ್, ಕಾರ್ಯಕ್ರಮ ನಿರೂಪಿಸಿದರು.ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ರಾತ್ರಿ ನಿತ್ಯ ಪೂಜೆ, ತುಳಸಿ ಪೂಜೆ ಹಾಗೂ ಪುರೋಹಿತ ವರ್ಗದವರಿಂದ ತುಳಸಿ ಸಂಕೀರ್ತನೆ ಜರಗಿತು.
ಉತ್ತಾನ ದ್ವಾದಶಿ-ತುಳಸಿ ವಿವಾಹ : ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ, ಒಲ್ಲನೋ ಹರಿ ಕೊಳ್ಳನೋ ಎಂದಿದ್ದಾರೆ ದಾಸವರೇಣ್ಯರು. ಶ್ರೀ ಹರಿಗೆ ಅತ್ಯಂತ ಪ್ರಿಯಳಾದ ಹಾಗೂ ಪವಿತ್ರತೆಯ ಸಂಕೇತ ಹಾಗೂ ಪೌರಾಣಿಕ ಮಹತ್ವವುಳ್ಳ ಶ್ರೀಕೃಷ್ಣ ತುಳಸೀ ವಿವಾಹದ ದಿನ ವಾದ ಸೋಮವಾರ ದಿನಾಂಕ ೩.೧೧.೨೦೨೫ ಉತ್ಥಾನ ದ್ವಾದಶಿ, ಪರ್ವಕಾಲದಲ್ಲಿ, ಬೆಳಿಗ್ಗೆ ನಿತ್ಯಪೂಜೆಯ ನಂತರ ಮಂದಿರದ ಅರ್ಚಕ ವೇದಮೂರ್ತಿ ಗಣೇಶ್ ಭಟ್ ರವರು ತುಳಸೀ ಪೂಜೆ, ಗೋಪೂಜೆ, ಸಂಕೀರ್ತನೆ ಇತ್ಯಾದಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಸಂಜೆ ಅಲಂಕೃತ ತುಳಸಿ ವೃಂದಾವನದಲ್ಲಿ ಶ್ರೀ ತುಳಸಿ ದೇವಿಯ ಸುಂದರ ಮೂರ್ತಿಯನ್ನು ಶ್ರೀಮತಿ ಶಾಲಿನಿ ಉಡುಪರವರು ಅತ್ಯಂತ ಮನೋಹರವಾಗಿ ಅಲಂಕರಿಸಿದ್ದರು.ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ರಾತ್ರಿ ಪೂಜೆ ಜರಗಿದ ಬಳಿಕ ವೈಭವದ ಶ್ರೀ ಕೃಷ್ಣ ತುಳಸೀ ವಿವಾಹ, ಕ್ಷೀರಾಬ್ಧಿ ಮಹೋತ್ಸವವು ಪ್ರಧಾನ ಅರ್ಚಕರಾದ ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ನೇತೃತ್ವದಲ್ಲಿ ಡಾ| ಸುರೇಶ್ ಎಸ್ ರಾವ್, ಶ್ರೀಮತಿ ವಿಜಯಲಕ್ಷ್ಮಿ ಎಸ್. ರಾವ್ ದಂಪತಿ ಪ್ರಾಯೋಜಕತ್ವ ಮತ್ತು ಯಜಮಾನತ್ವದಲ್ಲಿ ವೈಭವದಿಂದ ನೆರವೇರಿತು. ತದನಂತರ ಸಾಂಪ್ರದಾಯಿಕ ತುಳಸಿ ಸಂಕೀರ್ತನೆ, ತೀರ್ಥ-ಪ್ರಸಾದ ವಿತರಣೆ, ಉಪಾಹಾರದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ಬೋರ್ಡಿಂಗ್ ಮಾಲಿಕ ರಮೇಶ್ ಶೆಟ್ಟಿ ಪರಿವಾರ ಅಂದಿನ ;ಲಾಡು ಪ್ರಸಾದ ಪ್ರಾಯೋಜಕರಾಗಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರೀಶ್ ಪೂಜಾರಿ ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ನಂತರ ಗೋಕುಲ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಹರಿನಾಮ ಸಂಕೀರ್ತನೆ, ನೃತ್ಯ ಭಜನೆ ಸಂಕೀರ್ತನೆ ನೃತ್ಯ ಸೇವೆ ಜರಗಿತು.
ಬಿ. ರಮಾನಂದ ರಾವ್, ಮೋಹನ್ ರಾಜ್, ಲಕ್ಷ್ಮೀನಾರಾಯಣ್ ಆಚಾರ್, ಎಚ್. ಲಕ್ಷ್ಮೀನಾರಾಯಣ್ ವೇದಮೂರ್ತಿ ಎಸ್ ಎನ್ ಉಡುಪ, ಡಾ. ಅರುಣ್ ರಾವ್, ದ್ರೌಪದಿ ವೆಂಕಟಾಚಲನ್, ವೆಂಕಟೇಶ್ ರಾವ್ ಬಾಳೂರ್. ಅಕ್ಷಯ್ ಬಲ್ಲಾಳ್, ಸವಿತಾ ಗುರುರಾಜ್, ಅವ್ಯಯ್ ಶಶಿಕಿರಣ್ ರಾವ್, ಜಗದೀಶ್ಚಂದ್ರ ಕುಮಾರ್, ಸುಮಂಗಲ ತಂತ್ರಿ, ಕೃಷ್ಣಾದೇವಿ ಶೆಟ್ಟಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜಕರಾಗಿ ದೇಣಿಗೆ ನೀಡಿದ್ದರು. ಡಾ| ಸುರೇಶ್ ಎಸ್ ರಾವ್ ತುಳಸಿ ವಿವಾಹದ ಪ್ರಾಯೋಜಕರಾದ್ದರು. ತುಳಸಿ ವಿವಾಹ ಪೂಜೆಗೆ ಹಲವಾರು ಭಕ್ತರು ತಮ್ಮ ದೇಣಿಗೆ ನೀಡಿದ್ದರು.
ಅತ್ಯಂತ ವೈಭವದಿಂದ ಜರಗಿದ ಶ್ರೀ ಕೃಷ್ಣ ತುಳಸಿ ಕಲ್ಯಾಣೋತ್ಸವದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಸದಸ್ಯರು, ಧಾರ್ಮಿಕ ಸಮಿತಿ ಸದಸ್ಯರು, ಬಿ. ಎಸ್ ಕೆ. ಬಿ. ಎಸೋಸಿಯೇಶನ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯ ಬಾಂಧ ವರು ಮಾತ್ರವಲ್ಲದೆ ಮುಂಬಯಿಯಾದ್ಯಂತದ ಸುಮಾರು ೩೦೦ ಕ್ಕಿಂತಲೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.