
kallianpurdotcom: Mob 9741001849
Official release from Mount Rosary School, Santhekatte.
ಸಂತೆಕಟ್ಟೆ: ನಾವು ವ್ಯವಹಾರಿಕ ಭಾಷೆಯಾಗಿ ಇಂಗ್ಲೀಷನ್ನು ಬಳಸಿಕೊಂಡರೂ ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಕನ್ನಡವನ್ನು ನಿತ್ಯ ಬಳಸಿ ಕೊಂಡರೆ ಮಾತ್ರ ಸಾಹಿತ್ಯ, ಪತ್ರಿಕೆ, ಸಿನೇಮಾ ಭಾವಗೀತೆಗಳು ಜೀವಂತವಾಗಿ ಉಳಿಯಲು ಸಾಧ್ಯ. ಕನ್ನಡವೇ ನಮ್ಮ ಉಸಿರಾಗಬೇಕು ಎಂದು ಮೌಂಟ್ ರೋಸರಿ ಚರ್ಚಿನ ಸಹಾಯಕ ಧರ್ಮಗುರು ವಂ| ರೋಹನ್ ಮಸ್ಕರೇನಸ್ ಹೇಳಿದರು.
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಂಘದ ಆಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಮಾತನಾಡಿ ಕನ್ನಡವನ್ನು ಕೇವಲ ಒಂದು ಭಾಷೆ ಎಂದು ಅಭ್ಯಾಸ ಮಾಡದೆ ನಿತ್ಯ ತನುಮನ ನುಡಿ ಕನ್ನಡವಾಗಬೇಕೆಂದು ಕರೆ ಕೊಟ್ಟರು. ಕನ್ನಡ ರಾಜ್ಯ ಉಗಮವಾಗಿ ಐವತ್ತೇರಡು ವರ್ಷಗಳ ಸಂಭ್ರಮದಲ್ಲಿ ೫೨ ಮಹತ್ತರ ಸಾಧನೆಗಳನ್ನು ವಿದ್ಯಾರ್ಥಿನಿ ಶ್ರೀನಿಧಿ ರಸವತ್ತಾಗಿ ವಿವರಿಸಿದರು. ವಿದ್ಯಾರ್ಥಿಗಳಿಂದ ಸಮೂಹ ಗೀತೆ, ಕಿರುನಾಟಕ, ನೃತ್ಯಗಳ ಪ್ರದರ್ಶಿತಗೊಂಡವು.
ಕನ್ನಡ ಸಂಘದ ನಿರ್ದೇಶಕರಾದ ಆಲ್ವಿನ್ ದಾಂತಿ, ಶೋಭಾ, ಕನ್ನಡ ಸಂಘದ ಅಧ್ಯಕ್ಷ ಅನ್ವಿತ್ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸುಮಂಗಳ, ನ್ಯಾನ್ಸಿ, ಅನಿತಾ ಸಹಕರಿಸಿದರು. ವಿದ್ಯಾರ್ಥಿಗಳಾದ ಆನಿಶ್ ಹಾಗೂ ವೈಷ್ಣವಿ ನಿರೂಪಿಸಿದರು. ಸುಪ್ರಭಾ ಸ್ವಾಗತಿಸಿ ವರ್ಣೀಕಾ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.