
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ. 27: ಮಲಾಡ್ ಪೂರ್ವದ ಕುರಾರ್ ವಿಲೇಜ್ನ ತಾನಾಜಿ ನಗರ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ 19ನೇ ವಾರ್ಷಿಕ ಪುನರ್ ಪ್ರತಿಷ್ಠಾಪನಾ ವರ್ಧಂತ್ಯುತ್ಸವವನ್ನು ಸಾಂಪ್ರದಾಯಿಕ ಮತ್ತು ಶಾಸ್ತ್ರೋಕ್ತ ವಾಗಿ ನೆರವೇರಿಸಲ್ಪಟ್ಟಿತು.
ಕಳೆದ ಗುರುವಾರ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ ಇವರ ಮಾರ್ಗದರ್ಶನ ಮತ್ತು ಮಂದಿರದ ಪ್ರಧಾನ ಅರ್ಚಕ ಸೂಡ ರಾಘವೇಂದ್ರ ಭಟ್ ಇವರ ಸಹಭಾಗಿತ್ವದಲ್ಲಿ ಹಿರಿಯ ತಂತ್ರಿಗಳಾದ ಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಇವರು ತನ್ನ ಪೌರೋಹಿತ್ಯದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಸದ್ಭಕ್ತರನ್ನು ಹರಸಿದರು.
ಆ ಪ್ರಯುಕ್ತ ಕಳೆದ ಗುರುವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮಹೂರ್ತ, ಶ್ರೀ ಮಹಾಗಣಪತಿ ಹೋಮ, ನವಕ ಪ್ರಧಾನ ಹೋಮ, ಶ್ರೀದೇವಿ ಸನ್ನಿಧಿಯಲ್ಲಿ ೨೫ ಕಲಶಾರಾಧನೆ, ಕಲಾಭಿಷೇಕ, ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಸಲ್ಪಟ್ತಿತು. ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಸಿ.ಜತ್ತನ್ ಮತ್ತು ಆಶಾ ಆರ್.ಕೊಟ್ಟಾರಿ ಅವರ ಮುಂದಾಳುತ್ವದಲ್ಲಿ ಸಂಜೆ ಅರಸಿನ ಕುಂಕುಮ ಕಾರ್ಯ ಕ್ರಮ ನಡೆಯಿತು. ರಾತ್ರಿ ರಂಗಪೂಜೆ, ಬಲಿ ಉತ್ಸವ ನಡೆಸಲಾಗಿ ಶುಕ್ರವಾರ ಬೆಳಿಗ್ಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೊಂದಿಗೆ ಪುನರ್ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ, ಗೌ| ಪ್ರ| ಕಾರ್ಯದರ್ಶಿ ಸೋಮಪ್ಪ ಬಿ.ಕೋಟ್ಯಾನ್, ಉಪಾಧ್ಯಕ್ಷರುಗಳಾದ ರಮೇಶ್ ಟಿ.ಶೆಟ್ಟಿ, ಸುರೇಶ್ ಎಂ.ಕೋಟ್ಯಾನ್, ಯೋಗೇಂದ್ರಮ್ ಆರ್.ಕೊಟ್ಟಾರಿ, ಜೊತೆ ಕಾರ್ಯದರ್ಶಿಗಳಾದ ಪ್ರಸಾದ್ ಆರ್.ಕೋಟ್ಯಾನ್, ಮುರಳೀಧ ರ್ ಬಿ.ಪೂಜಾರಿ, ಸಲಹೆಗಾರರುಗಳಾದ ಪ್ರೇಮ್ನಾಥ ಎಸ್.ಸಾಲಿಯಾನ್, ಆನಂದ್ ಕೆ. ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ದಯಾನಂದ್ ಆರ್.ಶೆಟ್ಟಿ, ಶರತ್ ಎಸ್.ಕೋಟ್ಯಾನ್, ಆಯುಷ್ ಆರ್.ಕೊಟ್ಟಾರಿ, ಗಿರೀಶ್ ಬಿ.ಸುವರ್ಣ, ಸಂದೀಪ್ ಬೆಹೆರ, ಸೇವಾಕರ್ತರಾದ ವತ್ಸಲಾ ಎಸ್. ಕೋಟ್ಯಾನ್, ಭಾರತಿ ಎಸ್.ಕೋಟ್ಯಾನ್, ಶಾಂತಾ ಪೂಜಾರಿ, ಶೈಲೇಶ್ ಕೋಟ್ಯಾನ್, ದಾನಿಗಳು, ಮಹಿಳಾ ಮತ್ತು ಯುವ ವಿಭಾಗ ಸೇರಿದಂತೆ ಸದಸ್ಯರನೇಕರು, ಭಕ್ತಾಭಿಮಾನಿಗಳು ಪಾಲ್ಗೊಂಡು ಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.