
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.07: ನೊಂದ ಸ್ತ್ರೀಯರ ಪರವಾದ ಜನಪಯೋಗಿ ವಿಚಾರ ಸಂಕಿರಣದಿಂದ ಸ್ತ್ರೀಯರ ಕ್ರೀಯಾಶಕ್ತಿಯನ್ನು ತಿಳಿಯಲು ಅವಕಾಶವಾಗುತ್ತದೆ. ಪುರಾಣ ಹಾಗೂ ಇತಿಹಾಸ ಕಾಲದಲ್ಲಿ ಹಲವು ಪ್ರತೀಕೂಲ ಪರಿಸ್ಥಿತಿಯಲ್ಲಿ ನಮ್ಮ ತಾಯಂದಿರು ತೋರಿಸಿದ ವೀರತನ ನಮಗೆ ಸದಾ ಪ್ರೇರಣೆಯಾಗಿದೆ. ಕದಂಬರ ರಾಜವಂಶ ಹಾಗೆ ಇತಿಹಾಸದಲ್ಲಿ ದುಡಿದ ಅದೆಷ್ಟೊ ವೀರ ವನಿತೆಯರ ಕುರಿತು ತಿಳಿಯುವ ಅವಕಾಶ ಇದಾಗಿದೆ. ಇಂಥ ವಿಚಾರ ಸಂಕಿರಣಗಳು ಮಹಿಳೆಯರಲ್ಲಿ ನಾಯಕತ್ವ ರೂಪಿಸುತ್ತದೆ. ಎಂದು ಅಪ್ಪಾಜಿಬೀಡು ವರ್ಲಿ (ಮುಂಬಯಿ) ಇದರ ಟ್ರಸ್ಟಿ ರಘುನಾಥ ಎನ್.ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ನ ಸಭಾಗೃಹದಲ್ಲಿ “ಇತಿಹಾಸದಲ್ಲಿ ಮಹಿಳೆ” ವಿಷಯ ದಲ್ಲಿ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ಆಯೋಜಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ರಘುನಾಥ ಶೆಟ್ಟಿ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಟಿ.ಆರ್ ಮಧುಸೂದನ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷೆ ಶ್ರೀದೇವಿ ಸಿ.ರಾವ್, ದೇವಾಡಿಗ ಸಂಘ ಮುಂಯಿ ಇದರ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಜಯಂತಿ ಎಂ.ದೇವಾಡಿಗ ಅಭ್ಯಾಗತ ರಾಗಿ ಉಪಸ್ಥಿತರಿದ್ದರು.
ಚೆನ್ನ ಭೈರಾದೇವಿ, ಕಿತ್ತೂರ ರಾಣಿ ಚೆನ್ನಮ್ಮ, ಓನಕೆ ಒಬ್ಬವ್ವ, ರಾಣಿ ಅಬ್ಬಕ್ಕ, ಕೆಳದಿಯ ಚೆನ್ನಮ್ಮ ಹೀಗೆ ಹೆಜ್ಜೆ ಹೆಜ್ಜೆಗೂ ವೀರವನಿತೆಯರನ್ನು ಕಾಣಬಹುದು. ಪತಿ ಯುದ್ಧದಲ್ಲಿ ಸೋತಾಗ ಇಲ್ಲವೇ ಮಡಿದಾಗ ಎದೆಗುಂದದೆ ತಾನೇ ಯುದ್ಧ ಮಾಡಿ ಶತ್ರುಸೈನ್ಯ ಎದುರಿಸಿ ರಾಜ್ಯ ರಕ್ಷಿಸಿದ ನಮ್ಮ ವೀರ ವನಿತೆಯರನ್ನು ಸ್ಮರಿಸಿ ಇತಿಹಾಸದಲ್ಲಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ ಮಹಿಳೆಯರ ನೆನಪಿನೊಂದಿಗೆ ವಿಶ್ವ ಮಹಿಳಾ ದಿನದ ಶುಭವಸರದಲ್ಲಿ ವಿಶೇಷ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು ರಮಾಬಾಯಿ ಅಂಬೇಡ್ಕರ್ ಮತ್ತು ಸವಿತಾ ಅಂಬೇಡ್ಕರ್ ಬಗ್ಗೆ ರಶ್ಮಿ ಭಟ್, ಜಯದೇವಿತಾಯಿ ಲಿಗಾಡೆ ಕುರಿತು ಸವಿತಾ ಅರುಣ್ ಶೆಟ್ಟಿ, ಅಹಲ್ಯಾ ಬಾಯಿ ಹೊಳ್ಕರ ಕುರಿತು ಕುಮುದಾ ಶೆಟ್ಟಿ, ಸಂಚಿ ಹೊನ್ನಮ್ಮ ಬಗ್ಗೆ ಲಲಿತಾ ಪ್ರಭು ಅಂಗಡಿ ಮಾತನಾಡಿದರು.
ಇತಿಹಾಸದಲ್ಲಿ ಅಪಾರ ಸೇವೆ ಸಲ್ಲಿಸಿ ಮರೆಯಾದ ಅದೆಷ್ಟೊ ಸಾಹಸಿ ಮಹಿಳೆಯರ ಕುರಿತು ಬೆಳಕು ಚೆಲ್ಲ್ಲುವ ಇಂತಹ ಸಂಕಿರಣ ಮಾದರಿ ಕಾರ್ಯವಾಗಿದೆ. ಇಲ್ಲಿ ಕೇಳಿತಿಳಿದ ಮಾಹಿತಿಯಿಂದ ಧೈರ್ಯ ತುಂಬಿದೆ. ನಮಗೆ ಅಂಬೇಡ್ಕರ್ ಗೊತ್ತು ಆದರೆ ಅವರ ಬಾಳಸಂಗಾತಿ ಬಗ್ಗೆ ಮತ್ತು ಹದಿನಾರನೇ ಶತಮಾನದ ವೀರಧೀರ ಸ್ತ್ರೀಯರ ಬಗ್ಗೆ ತಿಳಿದಿರಲಿಲ್ಲ. ಅವರ ವಿವಿಧ ಜನೋಪಯೋಗಿ ಕಾಯಕವನ್ನು ಅಧ್ಯಯನ ಮಾಡಿದ ಇಂದಿನ ಸಂಪನ್ಮೂಲವ್ಯಕ್ತಿಗಳ ಪ್ರಯತ್ನ ಪ್ರಶಂಸನೀಯ. ಶಾಲೆಯಲ್ಲಿ ಎಲ್ಲವನ್ನು ಕಲಿಸಲಾಗುವುದಿಲ್ಲ ಆದರೆ ಇಂತಹ ವಿಚಾರ ಸಂಕಿರಣಗಳು ಜ್ಞಾನಾರ್ಜನೆಯನ್ನು ಹೆಚ್ಚಿಸುವ ಜವಾಬ್ದಾರಿ ಹೊತ್ತಿವೆ ಎಂದು ಟಿ.ಆರ್ ಮಧುಸೂದನ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಪ್ರಧಾನ ರೂವಾರಿ ವಿಶ್ವನಾಥ ದೊಡ್ಮನೆ, ಉಪಾದ್ಯಕ್ಷ ಕೆ.ಎಲ್ ಶಾಂತಾರಾಂ, ಗೌ| ಪ್ರ| ಕಾರ್ಯದರ್ಶಿ ಸವಿತಾ ಆರ್.ಶೆಟ್ಟಿ, ಕೋಶಾಧಿಕಾರಿ ರಾಜ್ವರ್ಮ ಜೈನ್, ಸುದುಘ ದೊಡ್ಮನೆ ಸೇರಿದಂತೆ ಸದಸ್ಯರು, ಗಣ್ಯರನೇಕರು ಹಾಜರಿದ್ದರು.
ಜ್ಯೋತಿ ಯಾಜಿ ಭಟ್ ಪ್ರಾರ್ಥನೆಯನ್ನಾಡಿದರು. ತಾರಾ ಜಿ.ಬಂಗೇರ ಸ್ವಾಗತಿಸಿದರು. ವಿಶ್ವನಾಥ ದೊಡ್ಮನೆ ಪ್ರಸ್ತಾವನೆಗೈದರು. ಅಂಬಿಕಾ ದೇವಾಡಿಗ, ಅನಘ ದೊಡ್ಮನೆ ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳಿಗೆ ಸ್ಮರಣಿಕೆ, ಪುಷ್ಪಗುಚ್ಫವನ್ನೀಡಿ ಗೌರವಿಸಿ ದರು. ದೀಪಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಆರ್.ಶೆಟ್ಟಿ ವಂದನಾರ್ಪಣೆಗೈದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.