Skip to main content

ತೋನ್ಸೆ ಗರೋಡಿ ಪುನರ್ ನಿರ್ಮಾಣ ಯೋಜನೆಯ ‘ದಿವ್ಯ ಮನವಿ’ ಬಿಡುಗಡೆ ಒಳ್ಳೆಯ ಜನರಿದ್ದರೆ ಇಡೀ ಊರು ಒಳ್ಳೆಯದಾಗಿರುತ್ತದೆ : ತೋನ್ಸೆ ಆನಂದ್ ಎಂ.ಶೆಟ್ಟಿ.

By April 7, 2026Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಎ.೦೪: ಕೋಟಿ ಚೆನ್ನಯರು, ಗರೋಡಿಗಳ ಅಸ್ತಿತ್ವದ ಇತಿಹಾಸವನ್ನು ಬಗ್ಗೆ ನಾವ್ಯಾರೂ ತಿಳಿದವರಲ್ಲ. ಆದರೆ ಮನುಷ್ಯ ಜಾತಿಯಲ್ಲಿ ಹುಟ್ಟಿ ದೈವತ್ವ ಸ್ವೀಕೃತ ಕೋಟಿ ಚೆನ್ನಯರ ಆರಾಧನೆ ಪೂರ್ವಜರಿಂದ ನಡೆಸಿಕೊಂಡು ಬಂದಿದ್ದೇವೆ. ಪರಂಪರಿಕವಾಗಿ ನಡೆದುಬಂದ ಇಂತಹ ಕ್ಷೇತ್ರಗಳಿಂದ ಊರಿಗೆ ಊರೇ ಕ್ಷೇಮಾಭಿವೃದ್ಧಿ ಹೊಂದಿದೆ ಅನ್ನುವುದು ಸತ್ಯ. ಆದ್ದರಿಂದ ಒಳ್ಳೆಯ ಜನರಿದ್ದರೆ ಊರು ಒಳ್ಳೆಯದು ಆದಂತೆ, ಒಳ್ಳೆಯ ಊರು ಇದ್ದರೆ ಅಲ್ಲಿನ ಜನರೂ ಒಳ್ಳೆಯವರಾಗಿದ್ದು ಕ್ಷೇಮಾಭಿವೃದ್ಧಿ, ನೆಮ್ಮದಿಯಿಂದ ಬಾಳುತ್ತಾರೆ.

ತೋನ್ಸೆಯಂತಹ ಊರಲ್ಲಿ ದೈವ, ನಾಗಗಳ ಆರಾಧನೆ ಪ್ರಕೃತಿದತ್ತವಾಗಿ ಬಂದಿದೆ. ಅಂತೆಯೇ ದೈವಸ್ಥಾನ, ದೇವಸ್ಥಾನಗಳಿದ್ದರೆ ಮಾತ್ರ ಊರು ನಾಡುವಾಗಿ ಬೆಳೆಯುತ್ತದೆ. ಪ್ರಸ್ತುತ ಹೊಸ ಗರೋಡಿಗಳ ನಿರ್ಮಾಣದ ಬಗ್ಗೆ ನಾನು ತಿಳಿದಿಲ್ಲ ಆದರೆ ಪುರಾತನ ಗರೋಡಿಗಳ ಪುನ:ನಿರ್ಮಾಣ ವಾಸ್ತವಿಕ. ತೋನ್ಸೆ ಗರೋಡಿಯಿಂದ ಸೇವಾವಕಾಶ ನಮ್ಮ ಪಾಲಿಗೆ ಒದಗಿ ಬಂದಿದ್ದು ನಾವೆಲ್ಲರೂ ಭಾಗ್ಯವಂತರು. ನಮ್ಮಿಂದಾಗುವ ಸೇವೆಗೈದು ಪಾವನರಾಗೋಣ ಎಂದು ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ತೋನ್ಸೆ ಆನಂದ್ ಎಂ.ಶೆಟ್ಟಿ ತಿಳಿಸಿದರು.

ಉಡುಪಿ ಸಂತೆಕಟ್ಟೆ ಅಲ್ಲಿನ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿಯ ಸಂಪೂರ್ಣ ಪುನ:ರ್ ನಿರ್ಮಾಣ, ಶಿಲಾನ್ಯಾಸ ಮತ್ತು ಮುಷ್ಟಿಕಾಣಿಕೆ ಪ್ರಯುಕ್ತ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇಂದಿಲ್ಲಿ ಭಾನುವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಆಯೋಜಿಸಿದ್ದ ಗರೋಡಿ ಪುನರ್‌ನಿರ್ಮಾಣ ಯೋಜನೆಯ ‘ದಿವ್ಯ ಮನವಿ’ ಬಿಡುಗಡೆ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಆನಂದ್ ಶೆಟ್ಟಿ ಮಾತನಾಡಿದರು.

ತೋನ್ಸೆ ಗರೋಡಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆ ಮತ್ತು ಕಾರ್ಯಕ್ರಮ ದಲ್ಲಿ ಅತಿಥಿ ಅಭ್ಯಾಗತರುಗಳಾಗಿದ್ದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಬಿಲ್ಲ್ಲವರ ಅಸೋಸಿ ಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಆನಂದ್ ಎಂ.ಶೆಟ್ಟಿ  ಅವರು ಅತಿಥಿಗಳನ್ನೊಳಗೊಂಡು ‘ದಿವ್ಯ ಮನವಿ’ ಬಿಡುಗಡೆ ಗೊಳಿಸಿದರು.

ಗೌರವ್ವ್ವಾನಿತ ಅತಿಥಿಗಳಾಗಿ ಬುಧಾಗಿ ಇಂಜಿನಿಯರ್ಸ್ ಏಂಡ್ ಕಾಂಟ್ರಾಕ್ಟರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹೆರ್ಗಾ ಬಾಬು ಪೂಜಾರಿ, ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಮುಕ್ತೇಸರ ಚಂದ್ರಶೇಖರ ಆರ್.ಬೆಳ್ಚಡ, ಗೋಲ್ಡನ್ ಟ್ರಾವೆಲ್ಸ್ (ಬೆಂಗಳೂರು) ಮಾಲೀಕ ಲಕ್ಷ ಣ ಕೆ.ಅಮೀನ್, ಮ್ಯಾಡಿಸನ್ ವರ್ಲ್ಡ್ ಸಂಸ್ಥೆಯ ಹಣಕಾಸು ನಿರ್ದೇಶಕ ಸದಾನಂದ ಎನ್.ಆಚಾರ್ಯ, ಸ್ವಾರ್ಕ್ ವಿಡಿಯೋಟೆಕ್ ಎಲ್‌ಎಲ್‌ಪಿ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಸಿ.ಪೂಜಾರಿ, ಪ್ರಸಿದ್ಧ ರಂಗಕಲಾವಿದ, ಸಮಾಜ ಸೇವಕ ಲಕ್ಷ ಣ್ ಕಾಂಚನ್ ಹಾಗೂ ವಿಶೇಷ ಆಹ್ವಾನಿತರಾಗಿ ತೋನ್ಸೆ ಗರೋಡಿಯ ಉಪಾಧ್ಯಕ್ಷ ಉಮೇಶ್ ಪೂಜಾರಿ ಬಡನಿಡಿಯೂರು, ನಿಕಟಪೂರ್ವ ಗೌರವ ಕಾರ್ಯದರ್ಶಿ ಶೇಖರ್ ಗುಜ್ಜರ್‌ಬೆಟ್ಟು, ಜಯಂತ್ ಎ.ಅವಿನ್ (ಗರಡಿ ಮನೆ), ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಂದಕಿಶೋರ್ ಕೆಮ್ಮಣ್ಣು, ಖಜಾಂಚಿ ಅಡ್ವೊಕೇಟ್ ಸಂದೀಪ್ ಶಂಕರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಸಮಯೋಚಿತವಾಗಿ ಮಾತನಾಡಿ ಪುರಾತನ ಇತಿಹಾಸವುಳ್ಳ ಈ ಗರಡಿಯ ಪುನ:ರ್ ನಿರ್ಮಾಣದ ಯೋಜನೆ ನಿರೀಕ್ಷಿತ ಅವಧಿಯೊಳಗೆ ನಿರ್ವಿಘ್ನವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.

ಜಯಕೃಷ್ಣ ಶೆಟ್ಟಿ ಮಾತನಾಡಿ ಗರೋಡಿಯ ಶಿಲಾನ್ಯಾಸ ಕಾರ್ಯಕ್ರಮವೇ ಬ್ರಹ್ಮಕಲಶಲಶದಂತೆ ಕಂಗೊಳಿಸಿದೆ. ಆದರಂತೆ ನವೀಕರಣದ ಯೋಜನೆಯೂ ನಿರೀಕ್ಷೆಕ್ಕಿಂತ ಮೀರಿ ರೂಪುಗೊಳ್ಳುವ ಆಶಯ ನನಗಿದೆ. ಸಂಸ್ಕೃತಿ ಮತ್ತು ನಂಬಿಕೆಯ ಬೇರುಗಳಾದ  ಪರಂಪರೆಯ ಕಳೆ ತೋನ್ಸೆ ಗರೋಡಿಯಲ್ಲಿದೆ. ಆದರೆ ಆಧುನಿಕತೆಗೆ ಹೊಂದಿಕೊಂಡ ನವ ಪೀಳಿಗೆಯಿಂದ ಭಕ್ತಿ-ನಂಬಿಕೆಗಳ ಕೇಂದ್ರಗಳ ಅಸ್ತಿತ್ವವೂ ಬದಲಾಗು ತ್ತಿದೆ. ಇಂತಹ ಪುಣ್ಯಾಧಿ ತೋನ್ಸೆ ಗರೋಡಿ ನವೀಕರಣಗೊಂಡು ತೋನ್ಸೆಯ ಕೀರ್ತಿ ಜಾಗತಿಕವಾಗಿ ಪಸರಲಿ ಎಂದರು.

ತೋನ್ಸೆ ಪ್ರಕೃತಿ ರಮಣೀಯ ಸುಂದರ ಊರಾಗಿದ್ದು, ಅಲ್ಲಿನ ಜನರ ಮನಸ್ಸುಗಳೂ ಅಷ್ಟೇ ಮಹಿಮಾನ್ವಿತವಾಗಿದೆ. ಕಳೆದ ಅನೇಕ ವರ್ಷ ಗಳಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ತೋನ್ಸೆ ಗರೋಡಿಯ ನಿಕಟ ಸಂಬಂಧವಿದ್ದು, ಗರೋಡಿಯ ಕಾರಣಿಕೆ ಮುಂಬಯಿ ವಾಸಿ ಭಕ್ತರಲ್ಲೂ ಪರಿಣಮಿಸಿದೆ. ಇಂತಹ ಧಾರ್ಮಿಕ ಕೇಂದ್ರಕ್ಕೆ ನಮ್ಮ ಸಹಯೋಗ ಸದಾವಿದೆ ಎಂದ ಹರೀಶ್ ಅಮೀನ್ ನುಡಿದರು.

ಬಾಬು ಪೂಜಾರಿ ಮಾತನಾಡಿ ತೋನ್ಸೆ ಗರೋಡಿಯು ನನ್ನ ಅಜ್ಜಿಯ ಊರಲ್ಲಿ ನೆಲೆಯಾಗಿದೆ. ದೈವರಾಧನೆಯನ್ನು ಭಯಭಕ್ತಿಯಿಂದ ಆರಾಧಿಸುತ್ತಿರುವ ತುಳುನಾಡ ಜನತೆ  ಆರಾಧನೆಯನ್ನು ಆತ್ಮವಾಗಿಸಿರುವರು. ಸಾಂಪ್ರದಾಯಿಕ ಗರೋಡಿಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ತಿಳಿಸುತ್ತವೆ. ಆದ್ದರಿಂದ ಗರೋಡಿಯ ಜೀರ್ಣೋದ್ಧಾರಕ್ಕೆ ಎಲ್ಲರೂ ಸಹಕರಿಸೋಣ   ಎಂದರು.

ಗರೋಡಿಗಳೂ ಪವಿತ್ರ್ಯತೆವುಳ್ಳ ಆರಾಧನಾ ಕೇಂದ್ರಗಳಾಗಿವೆ. ಕೋಟಿ ಚೆನ್ನಯರೂ ಆರಾಧ್ಯ ದೈವಗಳಾಗಿದ್ದು ಅವರ ಪುಣ್ಯತೆಗೆ ಭಾಜನ ರಾಗುವರೇ ಗರೋಡಿಯ ಜೀರ್ಣೋದ್ಧಾರ ಎಲ್ಲರ ಹೊಣೆಯಾಗಿದೆ. ಈ ಪುಣ್ಯಾಧಿ ಕೆಲಸ ಶೀಘ್ರಗತಿಯಾಗಿ ರೂಪಿಕೊಳ್ಳಲಿ. ಇಂತಹ ಸತ್ಕರ್ಮದ ಸೇವೆ ನಮ್ಮಪಾಲಿಗೆ ಒದಗಿರುವುದು ನಮ್ಮ ಭಾಗ್ಯವಾಗಿದೆ ಎಂದ ಧರ್ಮಪಾಲ್ ದೇವಾಡಿಗ ತಿಳಿಸಿದರು.

ಚಂದ್ರಶೇಖರ ಬೆಳ್ಚಡ ಮಾತನಾಡಿ ತೋನ್ಸೆಯಲ್ಲಿನ ಜನತೆ ಧೀಮಂತ ಶ್ರೀಮಂತರು. ಹಣದಲ್ಲೂ ಗುಣಗಳಲ್ಲೂ ಶ್ರೀಮಂತರಾಗಿರುವರು. ರಾಷ್ಟ್ರಕ್ಕೆ ಮಾದರಿಯಾದ ಇಲ್ಲಿನ ಭಕ್ತರೆಲ್ಲರೂ ತನು ಮನ ಧನದ ದೇಣಿಗೆಯಿಂದ ಈ ಗರೋಡಿಯನ್ನು ಬೆಳಗಿಸುವ ಆಶಯ ನನ್ನದಾಗಿದೆ. ಕ್ಷೇತ್ರದ ಪುನಃನಿರ್ಮಾಣ ಜೀವಮಾನದಲ್ಲಿ ಸಿಗುವ ಶ್ರೇಷ್ಠವಾದ ಅವಕಾಶವಾಗಿರುತ್ತದೆ ಎಂದರು.

ವೀರ ಪುರುಷರಾಗಿ ಆರಾಧಿಸುವ ಕೋಟಿ ಚೆನ್ನಯರನ್ನು ಎಲ್ಲಾ ಸಮಾಜವು ಗೌರವಿಸುತ್ತಿದೆ. ಇದನ್ನು ಈ ವೇದಿಕೆಯಲ್ಲೂ ಕಾಣಬಹುದು. ಆರಾಧ್ಯ ದೈವಗಳ ಅನುಗ್ರಹದಿಂದ ಈ ಯೋಜನೆ ಆಶಯದಂತೆ ರೂಪುಗೊಳ್ಳಲಿ ಎಂದ ಲಕ್ಷ ಣ ಅಮೀನ್ ಹೇಳಿದರು.

ಸದಾನಂದ ಆಚಾರ್ಯ ಮಾತನಾಡಿ ಊರಿನ ಗರೋಡಿಯ ನವೀಕರಣದಿಂದ ನಾಡಿನ ಉದ್ಧಾರ ಸಾಧ್ಯ. ತೋನ್ಸೆಯಲ್ಲಿ ಸರಳ ಸಜ್ಜನಿಕೆ ಜನರಿದ್ದರೆ. ಆದ್ದರಿಂದ ಇಲ್ಲಿನ ಎಲ್ಲಾ ಯೋಜನೆಗಳು ಸುಲಭವಾಗಿ ಈಡೇರಿವುದು. ನಾವೂ ಗಳಿಕೆಯ, ಸಂಪತ್ತಿನ ಒಂದು ಭಾಗ ಇಂತಹ ಪುಣ್ಯಸೇವೆಗೆ ನೀಡಿ ಸಹಕರಿಸೋಣ ಎಂದರು.

ತುಳುನಾಡ ಆರಾಧ್ಯ ಸಂಸ್ಕೃತಿ ವೈಶಿಷ್ಟ್ಯಮಯವಾದದ್ದು. ಆದ್ದರಿಂದ ತುಳುನಾಡ ವೈಭವ ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿದೆ. ತೋನ್ಸೆ ಗರೋಡಿಯ ಅಭಿವೃದ್ಧಿಗೆ ಮುಂಬಯಿಗರ ಪಾಲು ಗಣನಾರ್ಹ. ಮುಂದೆಯೂ ಉದಾರತೆ ತೋರುವ ಭರವಸೆಯಿದೆ. ತೋನ್ಸೆ ಕ್ಷೇತ್ರದ ಜೀರ್ಣೋಭಿವೃದ್ಧಿ ಮುಂಬಯಿ ಭಕ್ತರಿಗೆ ನೆಮ್ಮದಿಯ ಶಕ್ತಿಯಾಗಿ ಒಳಿಯಲಿ ಎಂದ ಉಮೇಶ್ ಪೂಜಾರಿ ಆಶಯ ವ್ಯಕ್ತಪಡಿಸಿರು.

ಸಾಂಪ್ರದಾಯಿಕ ಗರೋಡಿಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ತಿಳಿಸುತ್ತವೆ. ಸಂಸ್ಕೃತಿ ಮತ್ತು ನಂಬಿಕೆಯ ಬೇರುಗಳಾಗಿವೆ. ದೈವಗಳನ್ನು ದೇವರುಗಳಂತೆಯೇ ಪೂಜಿಸಲಾಗುತ್ತದೆ, ಕೋಲ ಯಾ ನೇಮಗಳ ಮೂಲಕ ಆರಾಧಿಸಿ ಭಕ್ತಿ-ನಂಬಿಕೆಯಿಂದ ಸಂಕಷ್ಟಗಳಿಗೆ ಪರಿಹಾರವನ್ನು ಬೇಡಲಾಗುತ್ತದೆ. ಇದು ಜಾತಿ, ಮತಗಳನ್ನು ಮೀರಿದ, ಮಾನವೀಯತೆ ಮತ್ತು ಪ್ರಕೃತಿಯನ್ನು ಬೆಸೆಯುವ ಗರೋಡಿ ಯಾಗಿದೆ. ಈ ಪುಣ್ಯಕ್ಷೇತ್ರದ ಜೀರ್ಣೋದ್ಧಾರ ನಮ್ಮನಿಮ್ಮೆಲ್ಲರ ಸೇವೆಯಾಗಲಿ ಎಂದು ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಟ್ರಸ್ಟ್‌ನ ಉಪಾಧ್ಯಕ್ಷರುಗಳಾದ ಡಿ.ಬಿ ಅವಿನ್, ವಿಶ್ವನಾಥ ತೋನ್ಸೆ, ಗೌರವ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ಸನಿಲ್ ವೇದಿಕೆಯಲ್ಲಿದ್ದು ಪದಾಧಿಕಾರಿಗಳು ಅತಿಥಿಗಳಿಗೆ ಗಂಧ ಪ್ರಸಾದವನ್ನಿತ್ತು ಗೌರವಿಸಿದರು. ಮಹಿಳೆಯರು ಶ್ರೀಫಲ, ಪಿಂಗಾರದ ಜೊತೆಗೆ ಗಣ್ಯರಿಗೆ ಮನವಿ ಪತ್ರಗಳನ್ನರ್ಪಿಸಿದರು.

ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಎಂ.ಕೋಟ್ಯಾನ್, ರೂಪ್‌ಕುಮಾರ್ ಕಲ್ಯಾಣ್ಫುರ್, ಸುರೇಶ್ ಅಂಚನ್, ಉದಯ್ ಎನ್.ಪೂಜಾರಿ, ವಿಜಯ್ ಪಾಲನ್, ಸಲಹೆಗಾರರಾದ ವಿ.ಸಿ ಪೂಜಾರಿ, ಸೋಮ ಸುವರ್ಣ, ಮಹಿಳಾ ವೃಂದದ ಮೃದುಲಾ ಎ.ಕೋಟ್ಯಾನ್ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ಬಿಲ್ಲವರ ಭವನದಲ್ಲಿನ ಗುರು ನಾರಾಯಣ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪೂಜೆ ನೆರವೇರಿಸಿ, ಕೋಟಿ-ಚೆನ್ನಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆದಿಯಲ್ಲಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಆರಂಭದಲ್ಲಿ ಸಾಕ್ಷ್ಯಚಿತ್ರದೊಂದಿಗೆ ಗರೋಡಿಯ ಸೇವೆ, ಉದ್ದೇಶಗಳ ಚಿತ್ರಣ ಭಿತ್ತರಿಸಲಾಯಿತು. ಮಹಿಳಾ ವೃಂದದ ಸುಲೋಚನಾ ಆರ್.ಪೂಜಾರಿ, ಭಾರತಿ ಎಸ್.ಸುವರ್ಣ, ಕಸ್ತೂರಿ ಆರ್.ಕಲ್ಯಾಣ್ಫುರ್ ಪ್ರಾರ್ಥನೆ ಹಾಡಿದರು. ವಿಶ್ವನಾಥ ತೋನ್ಸೆ ಸ್ವಾಗತಿಸಿದರು. ಜಯಂತ್ ಎ.ಅವಿನ್ ಪ್ರಸ್ತಾವನೆಗೈದರು. ಶೇಖರ್ ಗುಜ್ಜರ್‌ಬೆಟ್ಟು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಪೂಜಾರಿ ತೋನ್ಸೆ ಆಭಾರ ಮನ್ನಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.