
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.೦೫: ಕಥಾ ಬಿಂದು ಪ್ರಕಾಶನ ತನ್ನ ಹತ್ತನೇ ಆವೃತ್ತಿಯ ಕನ್ನಡ ಕಂಪು ಕಾರ್ಯಕ್ರಮವನ್ನು ಕಳೆದ ಭಾನುವಾರ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ಆಯೋಜಿಸಿದ್ದು, ಮಂಗಳೂರು ಮೂಲತಃ ಯುವ ಗಾಯಕಿ ಕು| ರಿಶಾಲ್ ಮೆಲ್ಬಾ ಕ್ರಾಸ್ತಾ ಅವರಿಗೆ ಪ್ರತಿಷ್ಠಿತ ‘ಸಾಧನಶ್ರೀ ರಾಷ್ಟ್ರ ಪ್ರಶಸ್ತಿ’ ಪ್ರದಾನಿಸಿ ಅಭಿನಂದಿಸಲಾಯಿತು.
ಕಥಾ ಬಿಂದು ಪ್ರಕಾಶನ ಮಂಗಳೂರು ಇದರ ಸಂಚಾಲಕ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಅತಿಥಿ ಅಭ್ಯಾಗತರುಗಳಾಗಿ ಬಾಂಬೇ ಬಂಟ್ಸ್ ಎಸೋಸಿಯೇಶನ್ನಿಕಟಪೂರ್ವ ಅಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ಆರ್ಯಭಟ ಪ್ರಶಸ್ತಿ ವಿಜೇತ ಶಂಭು ಸನಿಲ್ ಮತ್ತಿತ ಗಣ್ಯರು ೧೮ನೇ ವಯಸ್ಸಿನಲ್ಲೇ ರಾಷ್ಟ್ರೀಯ ಗೌರವಕ್ಕೆ ಭಾಜನರಾಗಿರುವ ಕು| ರಿಶಾಲ್ ಮೆಲ್ಬಾ ಕ್ರಾಸ್ತಾ ಅವರ ಸಂಗೀತ ಕ್ಷೇತ್ರದ ಅಪ್ರತಿಮ ಸಾಧನೆಯನ್ನು ಪರಿಗಣಿಸಿ ಗೌರವಿಸಿದರು.
ಪ್ರವೀಣ ಬೋಜ ಶೆಟ್ಟಿ ಮಾತನಾಡಿ, ಪ್ರತಿ ವ್ಯಕ್ತಿಯೊಳಗೆ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸಿ, ಪೋಷಿಸಿ, ಜನರಿಗೆ ಸಮರ್ಪಿಸುವುದು ಕನ್ನಡ ಕಂಪು ಕಾರ್ಯಕ್ರಮದ ಉದ್ದೇಶ. ಈ ಬಾರಿ ರಿಶೆಲ್ ಮೆಲ್ಬಾ ಕ್ರಾಸ್ತ ಅವರನ್ನು ಇಂತಹ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಇವರನ್ನು ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ ಗೆ ಆಯ್ಕೆ ಮಾಡಿದ್ದರಿಂದ ಕನ್ನಡದ ಕಂಪು ಇಡೀ ರಾಷ್ಟ್ರಕ್ಕೆ ತಲುಪಿದೆ.” ಎಂದು ಹೇಳಿದರು. “ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೆದ್ದು ಮೆರೆದಿರುವ ೧೮ ವರ್ಷದ ಯುವ ಗಾಯಕಿ ರಿಶಾಲ್ ಅವರ ಸಾಧನೆ ಎಲ್ಲರಲ್ಲೂ ಹೆಮ್ಮೆ ಮತ್ತು ಸಂತೋಷವನ್ನು ಉಂಟುಮಾಡಿದೆ. ವೇದಿಕೆಯಲ್ಲಿ ಮಾತನಾಡಿದ ಗಣ್ಯರು, ಅವರ ಧ್ವನಿಯ ಸೌಂದರ್ಯ, ಸ್ವರದ ನಿಖರತೆ ಮತ್ತು ಭಾವ ವ್ಯಕ್ತಪಡಿಸುವ ಶೈಲಿಯನ್ನು ಮೆಚ್ಚಿಕೊಂಡರು. ಅಷ್ಟು ಕಿರಿಯ ವಯಸ್ಸಿನಲ್ಲಿ ಈ ಮಟ್ಟದ ಸಾಧನೆ ಸಾಧಿಸಿರುವುದು ಅಪರೂಪವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವ ಸಾಮರ್ಥ್ಯ ಅವರಲ್ಲಿದೆ” ಎಂದು ಅಭಿಪ್ರಾಯಪಟ್ಟರು.
ಸಿಎ| ಸುರೇಂದ್ರ ಶೆಟ್ಟಿ ಮಾತನಾಡಿ, ರಿಶಲ್ ಅವರ ಸಾಧನೆ ಎಲ್ಲರಲ್ಲೂ ಹೆಮ್ಮೆ ಮತ್ತು ಸಂತೋಷವನ್ನು ಉಂಟುಮಾಡುವಂತಹದ್ದು, ಈಕೆಯ ಸಂಗೀತದ ಮೇಲಿನ ಆಸಕ್ತಿ ಮತ್ತು ಪರಿಶ್ರಮವೇ ಈ ಯಶಸ್ಸಿನ ಹಿನ್ನಲೆ” ಎಂದು ಹೇಳಿದರು. “ಪ್ರತಿಯೊಂದು ಹಾಡಿನಲ್ಲೂ ಅವರು ತೋರಿಸುವ ಸಮರ್ಪಣೆ ಮತ್ತು ಅಭ್ಯಾಸವು ಸ್ಪಷ್ಟವಾಗಿ ಕಾಣುತ್ತದೆ. ಈ ರಾಷ್ಟ್ರೀಯ ಪ್ರಶಸ್ತಿ ಕೇವಲ ಒಂದು ಆರಂಭ ಮಾತ್ರವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ವೇದಿಕೆಗಳಲ್ಲಿ ಅವರ ಪ್ರತಿಭೆ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಿಶಾಲ್ ಮೆಲ್ಬಾ ಕ್ರಾಸ್ತಾ ಅವರು ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಎಳೆಯ ವಯಸ್ಸಿನಲ್ಲೇ ಇಂತಹ ಸಾಧನೆ ಸಾಧಿಸಿರುವುದು ಇತರ ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ಅವರ ಪ್ರಯತ್ನ, ದೃಢಸಂಕಲ್ಪ ಮತ್ತು ಕಲೆಪ್ರೀತಿ ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಯಶಸ್ಸುಗಳನ್ನು ತಂದುಕೊಡಲಿ” ಎಂದು ಶಂಭು ಸನಿಲ್ ಹಾರೈಸಿದರು.
ರಿಶಲ್ ಮೆಲ್ಬಾ ಕ್ರಾಸ್ತಾ ಅವರ ಯಶಸ್ಸಿನ ಹಿಂದೆ ಅವರ ಕುಟುಂಬದ ಬೆಂಬಲವೂ ಮಹತ್ವದ ಪಾತ್ರವಹಿಸಿದೆ ಎಂಬುದು ಉಲ್ಲೇಖನೀಯ. ರಿಶಲ್ ತಂದೆ ನಾಡಿನ ಹೆಸರಾಂತ ಗಾಯಕ ರೊನಿ ಕ್ರಾಸ್ತಾ ಹಾಗೂ ತಾಯಿ ಮಾತಟಿಲ್ಡಾ ಜೆಸಿಂತಾ ಕ್ರಾಸ್ತಾ ಇವರಿಬ್ಬರೂ ಗಾಯಕರು ಆಗಿದ್ದು, ಬಾಲ್ಯದಿಂದಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸುವಲ್ಲಿ ಅಪಾರ ಪರಿಶ್ರಮ ವಹಿಸಿದ್ದಾರೆ. ತಮ್ಮ ಪುತ್ರಿಯನ್ನು ಈ ಮಟ್ಟದ ಸಾಧನೆಗೆ ತಲುಪಿಸಲು ಅವರು ನೀಡಿದ ಮಾರ್ಗದರ್ಶನ, ಅಭ್ಯಾಸ ಮತ್ತು ಪ್ರೋತ್ಸಾಹವೇ ಇಂದು ರಿಶಲ್ ಅವರ ಯಶಸ್ಸಿಗೆ ಪ್ರಮುಖ ಆಧಾರವಾಗಿದೆ ಎಂದು ಗಣ್ಯರು ಹಾಗೂ ಪಿ.ವಿ ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.
ಮಧುಸೂದನ ಟಿ.ಆರ್., ಡಾ| ಕೊಳ್ಚಪ್ಪೆ ಗೋವಿಂದ ಭಟ್, ಶ್ರೀದೇವಿ ರಾವ್, ಡಾ| ಸತೀಶ್ ಎನ್.ಬಂಗೇರ, ವಾಣಿ ಶೆಟ್ಟಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ರಿಶಾಲ್ ಹಾಡಿನ ಧ್ವನಿಯ ಸೌಂದರ್ಯ, ಸ್ವರದ ನಿಖರತೆ ಹಾಗೂ ಭಾವಾಭಿವ್ಯಕ್ತಿಯ ವಿಶಿಷ್ಟ ಶೈಲಿಯನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಅನಿತಾ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.