
kallianpurdotcom: Mob 9741001849
Official release from Mount Rosary School, Santhekatte.
ಸಂತೆಕಟ್ಟೆ: ೨೦೨೬-೨೭ ನೇ ಶೈಕ್ಷಣಿಕ ಸಾಲಿಗೆ ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯಲ್ಲಿ ಶಾಲಾ ಸಂಸತ್ತಿಗೆ ಪ್ರಪ್ರಥಮ ಬಾರಿಗೆ ಇ-ಮತದಾನ ನಡೆಯಿತು. ಶಾಲಾ ನಾಯಕ ಹುದ್ದೆಗೆ ಎಂಟು ಮಂದಿ ಅಭ್ಯರ್ಥಿಗಳು ನಾಮಪತ್ರವನ್ನು ತುಂಬಿ ಮುಖ್ಯ ಚುನಾವಣಧಿಕಾರಿ ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಡಿ’ಮೆಲ್ಲೊ ಪರಿಶೀಲಿಸಿದರು. ಈ ಬಾರಿ ಯಾವ ಅಭ್ಯರ್ಥಿಯ ನಾಮ ಪತ್ರ ತಿರಸ್ಕಾರಗೊಳ್ಳಲಿಲ್ಲ.
ಎರಡು ದಿವಸಗಳ ಕಾಲ ಮತಪ್ರಚಾರಕ್ಕೆ ಮುಕ್ತ ಅವಕಾಶವಿತ್ತು. ಅಭ್ಯರ್ಥಿಗಳ ಹಿಂಬಾಲಕರು ಅವರವರ ಅಭ್ಯರ್ಥಿಗಳಿಗೆ ಮತಹಾಕಲು ಬಿರುಸಿನ ಪ್ರಚಾರ ಮಾಡಿದರು. ಮತದಾನದ ಮುಂಚಿನ ದಿವಸ ಇ- ಮತದಾನದ ಅಣಕು ಪ್ರಕ್ರೀಯೆ ನಡೆದು ಚುನಾವಣಾಧಿಕಾರಿಗಳಾದ ಶಿಕ್ಷಕಿ ಸಬಿತಾ ಮತ್ತು ಸಾರಾ ಸವಿವರ ನೀಡಿದರು. ಇ-ಮತದಾನ ಮಾಡಲು ಎರಡು ಮುಖ್ಯ ಕಾರಣ; ಕಾಗದದ ಮತ ಪತ್ರಗಳನ್ನು ಕಡಿಮೆ ಗೊಳಿಸುವುದು ಹಾಗು ಯಾವುದೇ ಅಸಿಂಧು ಮತಗಳಾಗದಂತೆ ನೋಡಿಕೊಳ್ಳುವುದು.
ಚುನಾವಣೆಯ ದಿವಸ ಅಭ್ಯರ್ಥಿಗಳ ಎಜೆಂಟರು ಎಲ್ಲ ಮತದಾರರು ಗುರುತಿನ ಚೀಟಿ ನೊಂದಿಗೆ ಮತದಾನ ಕೇಂದ್ರಕ್ಕೆ ಬರುವಲ್ಲಿ ಸಹಕರಿಸಿ ದರು. ವೋಟಿಂಗ್ ಯಂತ್ರದಲ್ಲಿ ಅಭ್ಯರ್ಥಿಗಳ ಹೆಸರು ಮತ್ತು ಅವರ ಬಾವಚಿತ್ರವಿದ್ದು ಯಾವುದೇ ಚಿಹ್ನೆಗೆ ಅವಕಾಶವಿರಲಿಲ್ಲ.
ಮತದಾರ ಶಿಕ್ಷಿತನಾಗಬೇಕು ಹೆಸರು ಮತ್ತು ಬಾವಚಿತ್ರ ನೋಡಿ ತನ್ನ ಅಮೂಲ್ಯ ಮತ ಹಾಕುವಂತೆ ಇದರ ಉದ್ದೇಶವಾಗಿತ್ತು. ಬಾಲಕಿಯರಿಗೆ ೫೦% ಸ್ಥಾನ ಮೀಸಲ್ಲಿದ್ದು ಚುನಾವಣಾ ಫಲಿತಾಂಶ ಮತದಾನ ಮುಗಿದ ಹತ್ತು ನಿಮಿಷದಲ್ಲಿ ಶಾಲಾ ಮುಖ್ಯಶಿಕ್ಷಕಿ ಘೋಷಣೆ ಮಾಡಿದರು.
ಶಾಲಾ ನಾಯಕ ಉಪನಾಯಕನ ಎರಡೂ ಹುದ್ದೆಗಳನ್ನು ಈ ಬಾರಿ ಬಾಲಕಿಯರೇ ಗೆದ್ದು ಬಂದಿರುವುದು ವಿಶೇಷವಾಗಿತ್ತು.ಲಿಯೋನಾ ಶಾಲಾ ನಾಯಕಿಯಾಗಿ, ಆಕ್ಷಯಾ ಗಾಣಿಗ ಉಪನಾಯಕಿಯಾಗಿ ಪ್ರಚಂಡ ಮತಗಳಿಂದ ವಿಜೇತರಾದರು. ಈ ಚುನಾವಣಿಯಿಂದ ಭಾರತದ ಸಂವಿದಾನ, ಪ್ರಜಾಪ್ರಭುತ್ವದ ಮಹತ್ವ ಮತ್ತು ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಉದ್ಧೇಶವಾಗಿತ್ತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.