
kallianpurdotcom: Mob 9741001849
Official release from Mount Rosary School, Santhekatte.
ಸಂತೆಕಟ್ಟೆ: ಶಾಲಾ ಸಂಸತ್ತು ಬಾಲ್ಯಜೀವನದಲ್ಲಿ ಪ್ರಜಾಪ್ರಭುತ್ವ ಮತ್ತು ನಮ್ಮದೇಶದ ಸಂವಿಧಾನವನ್ನು ನೇರವಾಗಿ ತಿಳಿಯುವ ವೇದಿಕೆಯಾಗಿದೆ. ನಾಯಕಇಂದರೆ ಕೆಲಸವನ್ನು ಮಾಡಿಸುವವನಲ್ಲ ಬದಲಿಗೆ ಕೆಲಸªಗಳನ್ನು ಸ್ವತಃ ಮಂಡಣಿಯಲ್ಲಿ ನಿಂತು ಬೇರೆಯವರಿಗೆ ಮಾದರಿಯಾಗಿ ಮನ್ನಡೆಸುವವನೇ ನಿಜವಾದ ನಾಯಕ ಎಂದು ಮಿಲಾಗ್ರಿಸ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಫಾ| ಮೆಲ್ವಿನ್ ಮೆಂಡೋನ್ಸಾ ಎಸ್. ಜೆ ಅವರು ಹೇಳಿದರು.
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ೨೦೨೬-೨೭ ನೇ ಶಾಲಾ ಸಂಸತ್ತು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ನಾಯಕಿಯಾಗಿ ಲಿಯೋನಾ ರೂತ್ ಡಿ’ಸೋಜ ಹಾಗು ಉಪನಾಯಕಿಯಾಗಿ ಆಕ್ಷಯಾ ಗಾಣಿಗ ಇವರಿಗೆ ಶಾಲಾ ಸಂಚಾಲಕ ಫಾ| ಡಾ| ರೋಕ್ ಡಿಸೋಜ ಪ್ರತಿಜ್ಞಾವಿಧಿ ಬೋಧಿಸಿದರು.
ಮಂತ್ರಿ ಮಂಡಲದ ೪೩ ಸದಸ್ಯರಿಗೆ ಶಾಲಾ ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಡಿಮೆಲ್ಲೊ ಬೋಧಿಸಿದರು. ಸಹಾಯಕ ಧರ್ಮಗುರುಗಳಾದ ಫಾ| ರೋಹನ್ ಮಸ್ಕರೇನಸ್ ಮಾತನಾಡಿ ಚುನಾಯಿತ ನಾಯಕರುತಮ್ಮನ್ನು ಬೆಂಬಲಿಸಿದವರ ಮಾತ್ರ ನಾಯಕರಲ್ಲ ತಮ್ಮನ್ನು ವಿರೋಧಿಸಿದವರದ್ದೂ ನಾಯಕನಾಗಬೇಕು ಎಲ್ಲರನ್ನು ಸಮಾನರನ್ನಾಗಿ ನೋಡಿಕೊಳ್ಳ ಬೇಕು ಇದೇ ಪ್ರಜಾಪ್ರಭುತ್ವದ ಸೊಗಸು ಎಂದು ಹೇಳಿದರು. ಶಿಕ್ಷಕಿ ಆಮೃತಾ ಅತಿಥಿಗಳನ್ನು ಪರಿಚಯಿಸಿದರು. ಆಲ್ವಿನ್ ದಾಂತಿ ಮಂತ್ರಿಮಂಡಲದ ರಚನೆಯಲ್ಲಿ ಸಹಕರಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಸಂಚಾಲಕರಾದ ಸಬಿತಾ ಮತ್ತು ಶ್ರೀಲಕ್ಷ್ಮೀ ಉಪಸ್ಥಿತರಿದ್ದರು. ಹುದ್ದೆ ಸ್ವೀಕರಿಸಿ ಮಾತನಾಡಿದ ಶಾಲಾ ನಾಯಕಿ ಲಿಯೋನಾ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ವಿದ್ಯಾರ್ಥಿನಿ ಪ್ರಿನ್ಸಿಟಾ ಸ್ವಾಗತಿಸಿದರೆ, ಪ್ರೀತಂ ಮತ್ತು ಶನಲ್ ನಿರೂಪಿಸಿದರು. ಉಪನಾಯಕಿ ಆಕ್ಷಯಾ ಗಾಣಿಗ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.