
kallianpurdotcom: Mob 9741001849
Official release from Mount Rosary School, Santhekatte.
ಸಂತೆಕಟ್ಟೆ: ಮಕ್ಕಳು ನಿಮ್ಮನ್ನೇ ಅನುಕರಿಸುತ್ತಾರೆ ನೆನಪಿಡಿ ಹೆತ್ತವರಾಗಲಿ, ಶಿಕ್ಷಕರಾಗಲಿ ಭೋದಿಸಿದ್ದನ್ನು, ಹಿತವಚನ ನೀಡಿದ್ದನ್ನು ಕೇಳಿ ಎಳೆಯ ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳದೆ ಹಿರಿಯರು ಮಾಡುವ ನಡೆ ನುಡಿಗಳನ್ನು ನೇರವಾಗಿ ಅನುಕರಿಸುತ್ತಾರೆ. ಆದುದರಿಂದ ಎಳೆಯ ಮಕ್ಕಳನ್ನು ಸೇರಿಸಿಕೊಂಡು ಪರಿಸರದ ಕಾಳಜಿ, ಶಿಸ್ತಿನ ವಿಚಾರ, ದೈವೀ ಕಾರ್ಯಗಳನ್ನು ಮಾಡಿರಿ ನೋಡಿ ಕಲಿಯುವ ಮತ್ತು ಅದನ್ನೇ ಅನುಕರಿಸುವುದು ಈಗಿನ ಮಕ್ಕಳ ಮನೋವಿಜ್ಞಾನವಾಗಿದೆ ಎಂದು ಮಣಿಪಾಲ ಮಾಹೆಯ ಔದ್ಯೋಗಿಕ ವಿಭಾಗದ ಸಹಾಯಾಕ ಪ್ರೋಫೆಸರ್ ಡಾ|ಶಾಲಿನಿ ಕ್ವಾಡ್ರಸ್ ಹೇಳಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯ ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ಪ್ರದಾನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಶಿಕ್ಷಕಿ ವನಿತಾ ಫೆರ್ನಾಂಡಿಸ್ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಶಾಲಾ ಸಂಚಾಲಕ ವಂದನೇಯ ಡಾ| ರೋಕ್ ಡಿಸೋಜ ಮಕ್ಕಳ ಕಲಿಕೆಗೆ ತಮ್ಮ ಸಂಸ್ಥೆಯನ್ನು ಆರಿಸಿದ್ದಕ್ಕೆ ಹೆತ್ತವರನ್ನು ಶ್ಲಾಘಿಸಿದರು. ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಡಿಮೆಲ್ಲೊ ಶಿಕ್ಷಣ ಸಂಸ್ಥೆಯಲ್ಲಿ ಆದ ಮಾರ್ಪಾಡುಗಳ ಬಗ್ಗೆ ನಿಯಾಮವಳಿಗಳ ಬಗ್ಗೆ ತಿಳಿ ಹೇಳಿದರು. ಸಂಘದ ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರೀಯೆಯನ್ನು ಶಿಕ್ಷಕಿ ಸಫೀನಾ ನಡೆಸಿಕೊಟ್ಟರು.
ಕಳೆದ ಸಾಲಿನ ಅಧ್ಯಕ್ಷ, ಉಪಾಧ್ಯಕ್ಷರಾದ ಇರ್ಶಾದ್ ಮತ್ತು ರಮೇಶ್ ಕುಂದರ್ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ವಿಲ್ಮಾ ಪರಿಚಯಿಸಿದರು. ಸುಮಂಗಲಾ ಸ್ವಾಗತಿಸಿದರು. ಲವೀನಾ ನಿರೂಪಿಸಿ ಮಾರ್ತಾ ವಂದಿಸಿದರು. ನೂತನವಾಗಿ ಆಯ್ಕೆಯಾದ ತರಗತಿವಾರು ಕಾರ್ಯಕಾರಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.