
kallianpurdotcom: Mob 9741001849
Official release from Mount Rosary School, Santhekatte.
ಸಂತೆಕಟ್ಟೆ: ಲಭ್ಯವಿರುವ ಗ್ರಹಗಳಲ್ಲಿ ಕೇವಲ ಭೂಮಿಯಲ್ಲಿ ಮಾತ್ರ ಜೀವಿಗಳು ನೆಲೆಸಿವೆ. ಮನುಷ್ಯರಂತೆ ಪ್ರಾಣಿ, ಪಕ್ಷಿ, ಹಾವು, ಕೀಟ ಮರ ಗಿಡಗಳು ಪ್ರಾಕೃತಿಕ ಸಮತೋಲನದಲ್ಲಿ ಭಾಗಿಯಾಗಿವೆ. ಅಧುನಿಕರಣದ ನೆಪದಲ್ಲಿ, ಸ್ವಾರ್ಥಿ ಮನುಷ್ಯ ಮಾತ್ರ ಪರಿಸರದ ವಿರುದ್ಧ ಕೆಲಸ ಮಾಡುವನು. ಪ್ರಾಣಿಪಕ್ಷಿಗಳಿಂದ ಈ ಭೂಮಿಗೆ ಆಪಾಯವಿಲ್ಲ. ವಿದ್ಯೆ ಬುದ್ಧಿವಿರುವ ಮಾನವನೇ ಭೂಮಿಗೆ ಶತ್ರುವಾಗಿ ಪರಿಣಮಿಸಿದ್ದಾನೆ ಇದು ವಿಪರ್ಯಾಸ. ಮಕ್ಕಳು ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಮರ ಗಿಡಗಳನ್ನು ನೆಟ್ಟು ಬೆಳೆಸಿ, ಪ್ರಾಣಿ ಪಕ್ಷಿಗಳನ್ನು ಜೀವಿಸಲು ಬಿಡಿ ಎಂದು ಹಿರಿಯಡ್ಕದ ಅರಣ್ಯಧಿಕಾರಿ ಕೇಶವ ಪೂಜಾರಿ ಹೇಳಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರೋಫೆಸರ್ ಆರ್ಚಿಬಾಲ್ಡ್ ಪುರ್ಟಾಡೊ ಪರಿಸರ ರಕ್ಷಣೆ ಪ್ರತಿ ನಾಗರಿಕನ ಕರ್ತವ್ಯವಾಗಿದೆ. ಆದುದರಿಂದ ಪ್ರಧಾನ ಮಂತ್ರಿ “ಏಕ್ ಪೇಡ್ ಮಾ ಕೇ ನಾಮ್ ” ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ. ನಿಮ್ಮ ತಾಯಿಯ ಹಾಗೆ ಮರಗಿಡಗಳನ್ನೂ ನೆಟ್ಟು ಪ್ರೀತಿಸಿ ಎಂದು ಕರೆ ನೀಡಿದರು. ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಮಾತನಾಡಿ ಮಂತ್ರದಿಂದ ಫಲ ಉದುರುವುದಿಲ್ಲ ಹಾಗೆನೇ ಕೇವಲ ಪ್ರಾರ್ಥನೆ ಮಾಡಿದರೆ ಮಳೆ ಬರುವುದಿಲ್ಲ, ಬದಲಿಗೆ ಮರ ಗಿಡಗಳ ಪೋಷಣೆಯಲ್ಲಿ ನೆಲ ಜಲ ವಾಯುವನ್ನು ಶುದ್ಧವಾಗಿ ಪಡೆಯ ಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳಾದ ಮನ್ವೀತ್ ಹಾಗು ಮಾನ್ವಿ ಶುದ್ಧ ಪರಿಸರದ ಮಹತ್ವದ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳಿಂದ ಪರಿಸರ ಗೀತೆ, ನಾಟಕ, ನೃತ್ಯಗಳು ಪ್ರದರ್ಶನ ಗೊಂಡವು. ಆ್ಯಡೆಲ್ ಸ್ವಾಗತಿಸಿ, ಸ್ನೇಹಲ್ ವಂದಿಸಿದರು. ವಿದ್ಯಾರ್ಥಿಗಳಾದ ಆದ್ವಿತ್ ಮತ್ತು ಆಭೀಶಾ ನಿರೂಪಿಸಿದರು. ಸಂಸ್ಥೆಯ ಆವರಣದಲ್ಲಿ ಜೌಷಧೀಯ ಗಿಡಗಳನ್ನು ನೆಡಲಾಯಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.