Skip to main content

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ ಆಚರಿಸಿದ ವಾರ್ಷಿಕ ಆಷಾಢೋತ್ಸವ, ಆಷಾಢದಲ್ಲಿ ಮನೆಯೇ ಔಷಧಾಲಯವಾಗಿತ್ತು : ಎಲ್. ವಿ ಅವಿನ್.

By July 23, 2026Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಜು.೨೫: ದುಷ್ಟಶಕ್ತಿಗಳ ನಿವಾರಣೆಯ ಸಂಕೇತವಾಗಿ ಆಚರಿಸುವ ಆಷಾಡವು ಸಾಂಪ್ರದಾಯಿಕ ಆಚರಣೆ ಆಗಿದೆ. ನಮ್ಮ ಬಾಲ್ಯಾವಸ್ಥೆಯ ದಿನಗಳನ್ನು ಸಾಂಘಿಕವಾಗಿ ಆಚರಿಸುವ ಅವಕಾಶ ಈ ಕನ್ನಡ ಸಂಘ ಮಾಡುತ್ತಿದೆ. ಕರಾವಳಿಯ ಜನಪದೀಯ ನಂಬಿಕೆ ನೆನಪಿಸಿಕೊಂಡು ಆಚರಿಸಿಕೊಳ್ಳಲು ಇದೊಂದು ಅವಕಾಶ ಆಗಿದೆ. ಆ ದಿನಗಳಲ್ಲಿ ನಮಗೆ ಮನೆಯೇ ಔಷಧಾಲಯವಾಗಿತ್ತು. ಆಹಾರ ವೈವಿಧ್ಯ, ಪಾಕಸಂಸ್ಕೃತಿ ಹಾಗೂ ಆರೋಗ್ಯಕರ ತಿನುಸುಗಳನ್ನು ಸವಿಯುವ ಕಾಲ ಅದಾಗಿತ್ತು. ಕರಾವಳಿಯ ವೈಜ್ಞಾನಿಕ ಆಹಾರ ಪದ್ಧತಿಯನ್ನು ಬಿಂಬಿಸುವ ಆ ದಿನಗಳನ್ನು ಸದ್ಯ ಸಂಘಸಂಸ್ಥೆಗಳ ಮೂಲಕವಾದರೂ ಆಚರಿಸಿಕೊಳ್ಳುವ ನಾವುಗಳು ಭಾಗ್ಯವಂತರು ಎಂದ ಕನ್ನಡ ಸಂಘ ಸಾಂತಾಕ್ರೂಜ್‌ನ ಗೌರವಾಧ್ಯಕ್ಷ ಎಲ್.ವಿ ಅವಿನ್ ನುಡಿದರು.

ಇಂದಿಲ್ಲಿ ಬುಧವಾರ ರಾತ್ರಿ ಬಾಂದ್ರಾ ಪೂರ್ವದ ಖೇರ್‌ವಾಡಿ ಅಲ್ಲಿನ ರಾಜಯೋಗ್ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ಸಂಘದ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ೨೦೨೬ನೇ ವಾರ್ಷಿಕ ಆಷಾಢೋತ್ಸಕ್ಕೆ  ಪದಾಧಿಕಾರಿಗಳು ದೀಪಹಚ್ಚಿ ಚಾಲನೆಯನ್ನೀಡಿದರು.

ಅತಿಥಿ ಅಭ್ಯಾಗತರುಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿನ್, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಎಸ್.ಕೋಟ್ಯಾನ್, ಮೋಹನ್ ಸಿ.ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ರತ್ನಾ ಪಿ.ಶೆಟ್ಟಿ, ಉದ್ಯಮಿಗಳಾದ ಜಯಶಂಕರ್ ಶೆಟ್ಟಿ, ಮಹೇಶ್ ಶೆಟ್ಟಿ, ಜಯಕೃಷ್ಣ ಶೆಟ್ಟಿ, ಡಾ|  ಸರಸ್ವತಿ ಶೆಟ್ಟಿ, ಡಾ| ಶಶಾಂಕ್ ಕಿಶೋರ್,  ಕನ್ನಡ ಸಂಘ ಸಾಂತಾಕ್ರೂಜ್‌ನ ಗೌರವಾಧ್ಯಕ್ಷ ಎಲ್.ವಿ ಅವಿನ್,  ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಸದಸ್ಯ ಮಹಿಳೆಯರೇ ತಿಂಡಿ ತಿನಿಸುಗಳ ತಯಾರಿ ಮಾಡಿದ್ದ ಕಾರಣ ಇದು ಮಹಿಳಾ ಪ್ರಧಾನ ಕಾರ್ಯಕ್ರಮ  ಅನ್ನಬಹುದು. ಸಂಸ್ಕೃತಿಯ ಜೋಪಾನ, ಶಿಕ್ಷಣದ ಕಾಳಜಿವನ್ನಿರಿಸಿ ಸ್ಥಾನೀಯವಾಗಿ ಈ ಕನ್ನಡ ಸಂಘ ತುಂಬಾ ಶ್ರಮಿಸುತ್ತಿದೆ ಎಂದು ಎನ್.ಟಿ ಪೂಜಾರಿ ತಿಳಿಸಿದರು.

ಸಂಘ-ಸಂಸ್ಥೆಗಳಲ್ಲಿ ‘ಆಟಿ ಕೂಟ’ ಆಚರಿಸುವುದರಿಂದ ಯುವಪೀಳಿಗೆಗೆ ಪ್ರೋತ್ಸಾಹ ನೀಡುವಂತಾಗುವುದು. ಶೈಕ್ಷಣಿಕ ಸಂಸ್ಥೆಗಳಲ್ಲೂ  ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ‘ಆಟಿಡೊಂಜಿ ದಿನ’ (ಆಟಿಯಲ್ಲೊಂದು ದಿನ) ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ, ಯುವಜನತೆಗೆ ಕರಾವಳಿ ಪಾಕವಿಧಾನ ಮತ್ತು ಜಾನಪದ ಕಲೆಗಳ ಪರಿಚಯ ಮಾಡಿಕೊಡುವುದು ಉತ್ತಮಕ್ರಮವಾಗಿದೆ. ಆದ್ದರಿಂದ ಆಟಿಯ ಸುಖದ ದಿನ ಬೇರೋಂದಿಲ್ಲ. ಇದು ಸಂಬಂಧಗಳನ್ನು ಕೂಡಿಸುವ ಭಾಗ್ಯದಾಯಕ ತಿಂಗಳೂ ಹೌದು ಎಂದು ಕನ್ನಡ ಸಂಘದ ಉಪಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್.ಶೆಟ್ಟಿ ತಿಳಿಸಿದರು.

ಕರಾವಳಿ ಜನತೆಗೆ ಆಟಿ (ಆಷಾಢ) ತಿಂಗಳು ಮಹತ್ವದ್ದಾಗಿದೆ. ಆದ್ದರಿಂದ ತುಳುನಾಡ ಕೃಷಿ ಸಂಸ್ಕೃತಿಯ ನೆನಪು ಮತ್ತು ಕೃತಜ್ಞತೆ ಸಲ್ಲಿಸುವ, ಪರಿಸರದ ಜಾಗೃತಿ, ಕರಾವಳಿಯ ಜಾನಪದ ಕೃಷಿ ಜೀವನ, ನಿಸರ್ಗದ ಮೇಲಿನ ಗೌರವ ಮತ್ತು ಭೂಮಿತಾಯಿಗೆ ಸಲ್ಲಿಸುವ ಧನ್ಯತಾಭಾವ ಈ ಆಚರಣೆಯನ್ನು ಸ್ಥಳಿಯ ಪರಿಸರದ ಜನತೆಯೊಂದಿಗೆ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ಆಚರಿಸಲು ಸಂತಸ ಪಡುತ್ತಿದೆ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಸುಜಾತಾ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರೋತ್ಸಹಕರುಗಳಾದ ಸೂರಜ್ ಸದಾನಂದ ಸಫಲಿಗ, ರತ್ನಾ ಪಿ.ಶೆಟ್ಟಿ, ವಜ್ರಾ ಪೂಂಜ, ಸುಚಿತಾ ಶೆಟ್ಟಿ,  ಸುಧಾ ಎಲ್.ಅವಿನ್, ಹರಿಣಿ ಶೆಟ್ಟಿ, ಸುಜತಾ ಶೆಟ್ಟಿ, ಉಷಾ ವಿ.ಶೆಟ್ಟಿ, ಪ್ರಸನ್ನ ಶೆಟ್ಟಿ, ದೇವೆಂದ್ರ ಬಂಗೇರಾ, ಕನ್ನಡ ಸಂಘದ ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಜತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅಮೀನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ.ಕೋಟ್ಯಾನ್, ಕಾರ್ಯದರ್ಶಿ ಶಕಿಲಾ ಪಿ.ಶೆಟ್ಟಿ, ಸಲಹಾ ಸಮಿತಿ ಸದಸ್ಯ ಭೋಜ ಎನ್.ಶೆಟ್ಟಿ ಸೇರಿದಂತೆ ಸಂಘದ ವಿಶೇಷ ಆಮಂತ್ರಿತರು,  ಸದಸ್ಯರುಗಳನೇಕರು ಹಾಜರಿದ್ದರು.

ಆರಂಭದಲ್ಲಿ  ಕಷಾಯ, ಬೆಲ್ಲ ನೀಡಿ ಸದಸ್ಯೆಯರು ಸಂಪ್ರದಾಯಿಕವಾಗಿ ಸುಖಾಗಮನ ಬಯಸಿದರು. ಪವಿತ್ರ ದೇವಾಡಿಗ ಪ್ರಾರ್ಥನೆಯನ್ನಾಡಿದರು.  ಸುಜತಾ ಶೆಟ್ಟಿ ಮತ್ತು ಎಲ್.ವಿ ಅವಿನ್ ಗಣ್ಯರಿಗೆ ಪುಷ್ಪಗುಪ್ಛ ನೀಡಿ ಗೌರವಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದಾ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ ಸ್ವಾಗತಿಸಿ ವಂದಿಸಿದರು. ಸಂಘದ ಮಹಿಳಾ ಸದಸ್ಯೆಯರು ಆಷಾಡ ಸಾಂಪ್ರದಾಯಿಕ ಶೈಲಿಯ ಖಾದ್ಯಗಳನ್ನು ಸಿದ್ಧಪಡಿಸಿ ನೆರೆದವರಿಗೆ ರಸದೌತಣದೊಂದಿಗೆ ಉಣಬಡಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.