
kallianpurdotcom: Mob 9741001849
Official release from Creative PU College.
ಉಡುಪಿ. ಕಲ್ಯಾಣಪುರದಲ್ಲಿ ಇರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಗಣನಾಥ್ ಶೆಟ್ಟಿಯವರು ಇಂದು ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು ಸ್ವಾತಂತ್ರ್ಯ ಕೇವಲ ಬರೀ ನಮ್ಮ ಹಕ್ಕು ಮಾತ್ರ ಅಲ್ಲ ನಮ್ಮ ಜವಾಬ್ದಾರಿ ಕೂಡ ನಮ್ಮ ಹಿರಿಯರು ತ್ಯಾಗ ಬಲಿದಾನದಿಂದ ದೊರಕಿಸಿ ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳದೆ ಭಾರತೀಯ ಪ್ರಜೆಗಳಾದ ನಾವು ಸದ್ಭಳಕೆ ಮಾಡಿಕೊಂಡು ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಕರೆನೀಡಿದರು.
ಅನಂತರ ಮಾತನಾಡಿದ ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ ಅವರು ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ, ರಾಷ್ಟ್ರ ಲಾಂಛನ ಈ ದೇಶದ ಸಂವಿಧಾನವನ್ನು ಗೌರವಿಸುವುದು ನಮ್ಮ ಕರ್ತವ್ಯ, ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ದೇಶದ ಭವಿಷ್ಯದ ರೂವಾರಿಗಳಾಗಿರುವ ಯುವಜನತೆ ದೇಶದ ಪ್ರಗತಿಗೆ ಸಹಕರಿಸುವ ಮನೋಭಾವ ಬೆಳಸಿಕೊಳ್ಳ ಬೇಕು ಎಂದರು. ಈ ಸಂದರ್ಭದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಕಾರ್ತಿಕ್ ಭಂಡಾರಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಭವ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಂತರ ಗೋಲ್ಡನ್ ಟ್ರ್ಯಾಕ್ಸ್ ಬ್ರಹ್ಮಾವರ ಲಿಂಗಪ್ಪ ಸರ್ ಮತ್ತು ತಂಡದವರಿಂದ “ಕ್ರಿಯೇಟಿವ್ ಸವಿಗಾನ” ಶೀರ್ಷಿಕೆ ಅಡಿಯಲ್ಲಿ ದೇಶಭಕ್ತಿ ಗೀತೆ ಮತ್ತು ಸದಭಿರುಚಿಯ ಗೀತಗಾಯನ ನೆರವೇರಿತು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಭೋದಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.