Skip to main content

ಮುಂಬಯಿಯಲ್ಲಿ ತೆರೆಕಂಡ ‘ಬಾಪಾಚೆ ಪುತಾಚೆ ನಾಂವಿಂ’ ಕೊಂಕಣಿ ಚಲನಚಿತ್ರ ಸಿನಿರಸಿಕರ ಉತ್ಸಹ ಕೊಂಕಣಿ ಭಾಷಾ ವೈವಭಕ್ಕೆ ಪೂರಕ : ಅಡ್ವೊಕೇಟ್ ಜೆನೆವೀವ್ ವಾಸ್.

By August 24, 2026Mumbai News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಆ.೨೩: ಮಾಯಾನಗರಿ ಮುಂಬಯಿಯಲ್ಲಿ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿಹಿಡಿಯುವಲ್ಲಿ ಬಿಪಿಎನ್ ಚಲನಚಿತ್ರವು ಯಶಕಂಡಿದೆ. ಸಿನೆಮಾಗಳು ಭಾಷಾಭಿಮಾನದ ಜಾಗೃತಿಗೆ  ಪೂರಕವಾಗಿದ್ದು, ಕೊಂಕಣಿ ಸಿನಿರಸಿಕರನ್ನು ಸೇರಿಸಿ ಭಾಷಾಭಿಮಾನ ಮೆರೆಯುತ್ತಿರುವುದು ಸ್ತುತ್ಯಾರ್ಹ. ಇದು ಕೊಂಕಣಿ ಭಾಷಾ ವೈವಭ, ಸಾಂಸ್ಕೃತಿಕ ಹಿರಿಮೆಯಾಗಿದೆ. ಮಾತೃಭಾಷೆಯ ಪರಂಪರೆ ಜೀವಂತವಾಗಿರಿಸಲು ಹಾಗೂ ಕೊಂಕಣಿ ಚಿತ್ರರಂಗದ ಬೆಳವಣಿಗೆಗೆ ಪ್ರೋತ್ಸಾಹ ನೀಡಲು ಮತ್ತು ಚಿತ್ರ ಪ್ರದರ್ಶನವು ಸೇತುವೆ ಯಾಗಿದ್ದು, ಈ ಚಲನ ಚಿತ್ರವು ಪ್ರೇಕ್ಷಕರ ಮಹತ್ಪೂರ್ಣ ಮೆಚ್ಚುಗೆಗೆ ಪಾತ್ರವಾಗಿ ಇತಿಹಾಸದ ಪುಟ ಸೇರುವಂತಾಗಲಿ ಎಂದು ಬೋಂಬೆ ಹೈಕೋರ್ಟ್ ವಕೀಲೆ ಮತ್ತು ಮೆ| ಪಿ.ವಾಸ್ ಏಂಡ್ ಕಂಪನಿಯ ಪಾಲುದಾರೆ ಅಡ್ವೊಕೇಟ್ ಜೆನೆವೀವ್ ಪಿ. ವಾಸ್ ನುಡಿದರು.

ಕಳೆದ ಶನಿವಾರ ಸಂಜೆ ಅಂಧೇರಿ ಪೂರ್ವದ ಸಾಕಿನಾಕದಲ್ಲಿನ ಶುಕ್ರಾನ್ ಲಾಂಜ್ ಬ್ಯಾಂಕ್ವೆಟ್‌ನ ಸ್ವರ್ಗೀಯ  ‘ಸಂಗೀತ ಸಾಮ್ರಾಟ್’ ಹೆನ್ರಿ ಡಿ’ಸೋಜಾ ವೇದಿಕೆಯಲ್ಲಿ ಆಯೋಜಿಸಿದ್ದ ೩೪ನೇ ಕೊಂಕಣಿ ಮಾನ್ಯತಾ ದಿವಸ್ ಆಗಿಸಿ ‘ಸ್ಫೂರ್ತಿದಾಯಕ ಸ್ವಾಭಿಮಾನದ ಕೊಂಕಣಿ ಸಂಜೆ’ ಕಾರ್ಯಕ್ರಮದಲ್ಲಿ ಡೈಜಿವರ್ಲ್ಡ್ ಫಿಲ್ಮ್‌ಸ್ ಹಾಗೂ ವಿಷನ್ ಕೊಂಕಣಿ ಸಂಸ್ಥೆಗಳ ಸಯೋಜನೆಯಲ್ಲಿ, ಯುವ ಲೇಖಕ-ಕಲಾ ನಿರ್ದೇಶಕ ಸ್ಟ್ಯಾನಿ ಬೇಳಾ ನಿರ್ದೇಶನದಲ್ಲಿ ಮೂಡಿ ಬಂದಿರುವ, ಮೈಕಲ್ ಡಿ’ಸೋಜ (ದುಬಾಯಿ) ನಿರ್ಮಾಣದ ‘ಬಾಪಾಚೆ ಪುತಾಚೆ ನಾಂವಿಂ’ ಕೊಂಕಣಿ ಸಿನೆಮಾದ ಮುಂಬಯಿ ಪ್ರದರ್ಶನಕ್ಕೆ ಚಾಲನೆಯನ್ನಿತ್ತು ಜೆನೆವೀವ್ ವಾಸ್ ಮಾತನಾಡಿದರು.

ವಿಶ್ವ ಪ್ರಸಿದ್ಧ ಕೊಂಕಣಿ ಸಂಗೀತಗಾರರಾಗಿದ್ದ ಸ್ವರ್ಗೀಯ ಶ್ರೀ ವಿಲ್ಫಿ ರೆಬಿoಬಸ್ ಮತ್ತು ಶ್ರೀ ಎರಿಕ್ ಒಝೆರಿಯೋ ಅವರಿಗೆ ಸಮರ್ಪಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ (ಮಂಗಳೂರು) ಕಾರ್ಯಾಧ್ಯಕ್ಷ ‘ಸಹಕಾರ ರತ್ನ’ ಅನಿಲ್ ಲೋಬೊ ಫೆರ್ಮಾಯಿ, ಗೌರವ್ವಾನಿತ ಅತಿಥಿಗಳಾಗಿ ಬಾಲಿವುಡ್‌ನ ಸಾಜನ್ ನಾಮಾಂಕಿತ ಚಿತ್ರ ನಿರ್ಮಾಪಕ ಲಾರೇನ್ಸ್ ಬಿ.ಡಿ’ಸೋಜಾ, ಎಜೆಎಸ್ ಗ್ರೂಪ್ ಆಫ್ ಬಿಸಿನೆಸ್‌ನ ಆಡಳಿತ ನಿರ್ದೇಶಕ ಆಲ್ವಿನ್ ಸಿಕ್ವೇರಾ ಗಾರ್ಡಾಡಿ, ಫಾಲ್ಕನ್ ಆಫ್‌ಶೋರ್ ಸರ್ವೀಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೊನಾಲ್ಡ್ ಜೆ.ಬ್ಯಾಪ್ಟಿಸ್ಟ್, ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ಡಿ’ಸೋಜ ನಂದಳಿಕೆ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟಾ ನಿ ಅಲ್ವಾರೆಸ್, ಫಿಲ್ಮ್‌ಫೇರ್ ಪ್ರಶಸ್ತಿ ಪುರಸ್ಕೃತ ಸ್ಟಂಟ್ ಸಾಹಸ ನಿರ್ದೇಶಕ ಸುನಿಲ್ ರೋಡ್ರಿಗಸ್ ಹಾಗೂ ಲೋಬೊ ಫೌಂಡೇಶನ್‌ನ ಕಾರ್ಯಾಧ್ಯಕ್ಷ ಜೋನ್ ವಿಲ್ಸನ್ ಲೋಬೊ ವೇದಿಕೆಯಲ್ಲಿ ಹಾಜರಿದ್ದರು.

ಕಾಲ ಬದಲಾಗಿದೆ ಆದ್ದರಿಂದ ನಮ್ಮ ಮನೋಭಾವ, ಜೀವನಶೈಲಿಯೂ ಬದಲಾಗಬೇಕು. ಪ್ರಸಕ್ತ ಜೆನ್‌ಝೀ ಮತ್ತು ಆಲ್ಫಾ ಜನಕಾಲದಲ್ಲಿದ್ದು ಇವರಿಗೆ ಹೊಂದುವ ಆಕರ್ಷಣೆಯ ಚಲನಚಿತ್ರಗಳ ಅಗತ್ಯವಿದೆ. ಅದಕ್ಕಾಗಿ ವಿಭಿನ್ನ ರೀತಿಯ ಹೊಸ ಶೈಲಿಯ ಚಲನಚಿತ್ರಗಳ ರಚನೆಯಾಗ ಬೇಕು. ಸ್ಥಾನೀಯ ಭಾಷೀಯ ಚಲನಚಿತ್ರಗಳಲ್ಲಿ ಹೂಡಿಕೆ ಮಾಡುವುದು ಭಾಷಾಭಿಮಾನದ ದೊಡ್ಡತನದಿಂದ ಹೊರತು ಆದಾಯದ ಚಿಂತನೆ ಯದ್ದಲ್ಲ. ಮೊದಲ ಚಲನಚಿತ್ರಗಳಲ್ಲಿ ಹೂಡಿಕೆ ಮಾಡಿದ್ದ ಲಾಭಾಂಶದಿಂದ ಇನ್ನೊಂದು ಚಲನಚಿತ್ರ ಸೃಷ್ಠಿಸುವ ಉದ್ದೇಶವಿರಿಸಿದಾಗ ಯೋಜನೆ ಫಲದಾಯಕವಾಗುವುದು. ಈ ಮೂಲಕ ಮಾತೃಭಾಷೆ ಬೆಳವಣಿಗೆ ಸಾಧ್ಯವಾಗುತ್ತದೆ. ನಾವು ಮಾತೃಭಾಷೆ ಸಾಯಲು ಬಿಡಬಾರದು. ನಮ್ಮ ಭಾಷೆ ನಮ್ಮ ಹೆಮ್ಮೆ, ನಮ್ಮ ಅಸ್ಮಿತೆ ಎಂದ ವಾಲ್ಟರ್ ನಂದಳಿಕೆ ಹೇಳಿದರು.

ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ಹಿರಿಯ ಸಂಗೀತಗಾರ ಲಾರೇನ್ಸ್ ಸಲ್ಡಾನ್ಹಾ, ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಅಡ್ವೊಕೇಟ್ ಪಿಯೂಸ್ ವಾಸ್, ಸಿಸಿಸಿಐ ಸ್ಥಾಪಕ  ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಸಿನೆಮಾ ನಿರ್ದೇಶಕರುಗಳಾದ ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು, ಗ್ರೆಗರಿ ಡಿ’ಅಲ್ಮೇಡಾ, ಉದ್ಯಮಿಗಳಾದ ಜೋನ್ ವಿಲ್ಸನ್ ಲೋಬೊ ಥಾಣೆ, ಪ್ರೆಮೀಳಾ ವಿ.ಮಥಾಯಸ್, ಗಿಲ್ಬರ್ಟ್ ಸೈಮನ್ ಡಿಸೋಜಾ (ಜುವಾನಿಟಾ), ಕ್ಲೋಡಿ ಮೊಂತೆರೋ ಮರೋಳ್, ಜ್ಯೂಲಿಯೆಟ್ ಪಿರೇರಾ, ವೈಲೆಟ್ ವಿಲ್ಸನ್ ಲೋಬೋ, ರುಥ್ ವಿಲ್ಸನ್ ಫೆರ್ನಾಂಡಿಸ್, ಫಿಲಿಪ್ ಮಾರ್ಕ್ ಫ್ರಾಂಕ್ ಆಗ್ರಾರ್, ರೋಶನ್ ನೆಲ್ಲಿಗುಡ್ಡೆ, ನವೀನ್ ಲೋಬೋ ಮೊಡಂಕಾಪು, ತಾರಾ ಆರ್.ಬಂಟ್ವಾಳ್, ಲ್ಯಾನ್ಸಿ ಬಾರ್ಬೋಜಾ (ಲೋರೆಟ್ಟೊ), ಸುಸಾನ್ ಲಾರೇನ್ಸ್ ಕುವೆಲ್ಲೋ, ಆಂಟನಿ ಸಿಕ್ವೇರಾ (ಆರ್ಕೇಡಿಯಾ), ಡಾಯಾನ್ ಡಿ’ಸೋಜಾ ವಿರಾರ್, ಐವಾನ್ ರೆಬೆಲ್ಲೋ ಬಾರ್ಕೂರು, ರೆಜಿನಾಲ್ಡ್ ಸಾಂತ್‌ಮಾಯೆರ್ ವಸಾಯಿ ಪ್ರಧಾನವಾಗಿ ಉಪಸ್ಥಿತರಿದ್ದರು.

ಜೋಸ್ಫಿನ್ ಗಿಲ್ಬರ್ಟ್ ರೋಡ್ರಿಗಸ್, ರೀಮಾ ರಸ್ಕೀನ್ಹಾ ಮತ್ತು  ರೇಶ್ಮಾ ಅನಿಲ್ ಡಿಅಲ್ಮೇಡಾ ಭಕ್ತಿಗೀತೆಯನ್ನಾಡಿದ ರು. ‘ಬಾಪಾಚೆ ಪುತಾಚೆ ನಾಂವಿಂ’ ಲೇಖಕ ಹಾಗೂ ನಿರ್ದೇಶಕ ಸ್ಟಾ ನಿ ಡಿ’ಸೋಜಾ ಬೇಳಾ ಪ್ರಸ್ತ್ತಾವನೆಗೈದರು.  ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಲಿಯೋ ಫೆರ್ನಾಂಡಿಸಿ ಜೆರಿಮೆರಿ ಧನ್ಯವದಿಸಿದರು.

ಮುಂಬಯಿಯಲ್ಲಿನ ಕಾರ್ಯಕ್ರಮ ಸಂಘಟಕರಾದ ಲಿಯೋ ಫೆರ್ನಾಂಡಿಸ್ (ಜೆರಿಮೇರಿ) ಮತ್ತು ಕ್ಲಾಡಿ ಫ್ರಾನ್ಸಿಸ್ ಮೊಂತೆರೋ ಮರೋಲ್ ಮುಂದಾಳುತ್ವದಲ್ಲಿ ‘ಬಿಪಿಎನ್’ ಚಲನಚಿತ್ರವು ಇಂದಿಲ್ಲಿ ಭಾನುವಾರ ಬೆಳಿಗ್ಗೆ ಬೃಹನ್ಮುಂಬಯಿಯಲ್ಲಿನ ವಿವಿಧ ಸಿನೆಮಾಗೃಹಗಳಲ್ಲಿ ಏಕಕಾಲಕ್ಕೆ ಹೌಸ್‌ಫುಲ್‌ವಾಗಿ ಪ್ರದರ್ಶಿಸಲ್ಪಟ್ಟಿತು.

ಸಿನೆಮಾ ಆಯೋಕರುಗಳಾದ ವಿಲಿಯಂ ಡಿಸೋಜಾ ವಕೋಲ,  ಜಾನೇಟ್ ಡಿಸೋಜಾ, ವಿಜಯ್ ಲೂಯಿಸ್, ಎವರೆಸ್ಟ್ ಪಾಯ್ಸ್, ವಿನೋದ್ ಪಿಂಟೋ, (ವಕೋಲಾ),  ರಿಚಾರ್ಡ್ ಫೆರ್ನಾಂಡಿಸ್ (ವಾಶಿ ನವಿ ಮುಂಬಯಿ), ಸುನೀತಾ ಎ.ಸುವಾರೆಸ್, ಹಿಲ್ಡಾ ವಿಕ್ಟರ್ ಮಥಾಯಾಸ್,  ಜೇಮ್ಸ್ ಪ್ರಕಾಶ್ ಡೆಸಾ, ಜೋನ್ ರೋಡ್ರಿಗಸ್, ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದು ಉಪಸ್ಥಿತ ವಾಲ್ಟರ್  ನಂದಳಿಕೆ, ಸ್ಟ್ಯಾನಿ ಬೇಳಾ ಅಭಿವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.