Skip to main content

ಪ್ರಸಿದ್ಧ ಕೊಂಕಣಿ ಸಂಗೀತ ಸಂಯೋಜಕ ಲಾರೇನ್ಸ್ ಸಲ್ಡಾನ್ಹಾ ಮುಂಬಯಿ ಇವರಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಶ್ರೇಷ್ಠತಾ ಪ್ರಶಸ್ತಿ ಪ್ರದಾನ.

By November 11, 2026Mumbai News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್) 

ಮುಂಬಯಿ, ನ.೧೦: ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಸಿದ್ದಕಟ್ಟೆ ಮೂಲತಃ  ಮುಂಬಯಿ ನೆಲೆವಾಸಿ ಪ್ರಸಿದ್ಧ ಕೊಂಕಣಿ ಸಂಗೀತ ಸಂಯೋಜಕ, ಗಾಯಕ ಹಾಗೂ ಸಾಂಸ್ಕೃತಿಕ ಸಾಧಕ ಲಾರೇನ್ಸ್ ಸಲ್ಡ್ದಾನ್ಹಾ ಅವರಿಗೆ ಕೊಂಕಣಿ ಸಂಗೀತ ಕ್ಷೇತ್ರದಲ್ಲಿನ ಅಪಾರ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ಪ್ರಥಮ ವಿಶ್ವ ಕೊಂಕಣಿ ಸಂಗೀತ ಶ್ರೇಷ್ಠತಾ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಮಂಗಳೂರುನಲ್ಲಿನ ಕುದ್ಮುಲ್ ರಂಗರಾವ್ ಸ್ಮಾರಕ ಪುರಭವನದಲ್ಲಿ ‘ಮಾಂಡ್ ಸೊಭಾಣ್’ ಸಂಸ್ಥೆಯು ‘ಮಾಂಡ್ ಸೊಭಾಣ್’ ಸಂಸ್ಥಾಪಕ, ಕೊಂಕಣಿ ಹೋರಾಟಗಾರ ಸ್ವರ್ಗೀಯ ಎರಿಕ್ ಒಜಾರಿಯೊ ಅವರಿಗೆ ವಿಶೇಷ ಗೌರವಾಗಿ ಸಮರ್ಪಿತ (ನ.೦೩ರಿಂದ ನ.೧೫ರ ವರೆಗೆ ೧೨ ದಿನಗಳು, ೧೨ ಗಂಟೆಗಳು,೧೨ ನಿಮಿಷಗಳ ನಿರಂತರ ಗಾಯನ ಮ್ಯಾರಥಾನ್) ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ ಐತಿಹಾಸಿಕ ಗಿನ್ನೆಸ್ ವಿಶ್ವ ದಾಖಲೆ ಕಾರ್ಯಕ್ರಮದ ಗೌರವ ಪ್ರದಾನ ಸಮಾರಂಭದಲ್ಲಿ (ಕಳೆದ ಶನಿವಾರ ನ.೦೭) ಕರ್ನಾಟಕ ವಿಧಾನ ಪರಿಷತ್ತ್ತ್‌ನ ಸದಸ್ಯ (ಎಂಎಲ್‌ಸಿ) ಐವನ್ ಡಿಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾ ನಿ ಆಲ್ವಾರಿಸ್, ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ.ಪಿಂಟೊ, ಮಾಂಡ್ ಸೊಭಾಣ್ ಕಲಾಂಗಣ್‌ನ ಪಿರ್ಜೆಂತ್ ರೋಯ್ ಕ್ಯಾಸ್ತೆಲಿನೋ, ಸಮಾವೇಶದ ಸಂಚಾಲಕಿ ಐರಿನ್ ರೆಬೆಲ್ಲೊ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಲಾರೇನ್ಸ್ ಸಲ್ಡ್ದಾನ್ಹಾ ಅವರಿಗೆ ಶಾಲು ಹೊದಿಸಿ, ಫಲಪುಷ್ಫ, ಪ್ರಶಸ್ತಿ ಪತ್ರ, ಸ್ನಮಣಿಕೆ ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

೧೯೬೯ರಲ್ಲಿ ಆಕಾಶವಾಣಿಯ ಸಂಗೀತ ಕಾರ್ಯಕ್ರಮದ ಮೂಲಕ ಲಾರೇನ್ಸ್ ಸಲ್ಡ್ದಾನ್ಹಾ ತನ್ನ ಸಂಗೀತ ಪಯಣ ಆರಂಭಿಸಿದ ಅವರು ೧೯೭೮, ೧೯೭೯ ಹಾಗೂ ೧೯೮೪ರಲ್ಲಿ ದೂರದರ್ಶನದ ಕಾರ್ಯಕ್ರಮಗಳಲ್ಲಿಯೂ ಭಾಗವ ಹಿಸಿ ಕೊಂಕಣಿ ಸಂಗೀತವನ್ನು ವಿಶಾಲ ಪ್ರೇಕ್ಷಕ ವಲಯಕ್ಕೆ ಪರಿಚಯಿಸಿದ್ದಾರೆ. ಭಾರತ ಹಾಗೂ ವಿದೇಶಗಳಲ್ಲಿ ೩೫ಕ್ಕೂ ಹೆಚ್ಚು ‘ಲಾರೆನ್ಸ್ ಸಾಲ್ದಾನ್ಹ ನೈಟ್’ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಅವರು, ೮೦೦ಕ್ಕೂ ಹೆಚ್ಚು ಕೊಂಕಣಿ ಗೀತೆಗಳು ಹಾಗೂ ತುಳು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ೧೦೦ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಲ್ಲದೆ,೧೪ ಸಂಗೀತ ಆಲ್ಬಂಗಳನ್ನು ಬಿಡುಗಡೆ ಗೊಳಿಸಿದ್ದು, ಪೊದಾಂಚೊ ಶಿವೋರ್ ಕೃತಿಯ ಮೂಲಕವೂ ತಮ್ಮ ಸಾಹಿತ್ಯಿಕ ಅಭಿರುಚಿಯನ್ನು ಮೆರೆದಿದ್ದಾರೆ ಎಂದು ಕೊಂಕಣಿ ಸಂಗೀತದ ಬೆಳವಣಿಗೆ, ಸಂರಕ್ಷಣೆ ಹಾಗೂ ಪ್ರಚಾರಕ್ಕಾಗಿ ಹಲವು ದಶಕಗಳಿಂದ ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರಿಗೆ ಈ ಗೌರವ ಸಂದಿರುವುದು ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಘಟಕರು ತಿಳಿಸಿದರು.

ಮಾಂಡ್ ಸೊಭಾಣ್ ಕಲಾಂಗಣ್‌ನ ಮುಂಯಿ ಪ್ರಾದೇಶಿಕ ಪ್ರತಿನಿಧಿ ಲಿಯೋ ಫೆರ್ನಾಂಡಿಸ್ ಜೆರಿಮೆರಿ (ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ) ತಂಡಗಳ ಸಂಯೋಜಕರಾಗಿದ್ದು, ಗಾಯನ ಮ್ಯಾರಥಾನ್‌ನಲ್ಲಿ ಮಹಾರಾಷ್ಟ್ರದದ್ಯಾಂತ ಪುಣೆ, ಮುಂಬಯಿಯ ಸಮೂಹಗಳು ಭಾಗವಹಿಸಿದ್ದವು. ಕೊಂಕಣಿ ಸಭಾ ಮುಲುಂಡ್ ಮುಂಬಯಿ, ಮಾಣಿಕ್ ಗಾವ್ಪಿ ವಿರಾರೋಡ್, ಮೆಲೋಡೀಸ್ ಆಫ್ ಸಿ.ಅಲ್ವಾರೆಸ್ ಬಾಂದ್ರಾ (ಮುಂಬಯಿ), ಸ್ವರಾಂಜಲಿ ಮಾಲ್ವಾನಿ ಮಲಾಡ್, ಪೊರ್ಜೊಲ್ಚಿಂ ತಾರಾಂ ಮರೊಲ್, ಕೊಂಕಣ್ ತಾರಾಂ ಜೆರಿಮೆರಿ, ಕೊಂಕಣಿ ಕಾಳ್ಜಾಂ ಸಾಕಿನಾಕಾ, ವಸಾಯಿ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್, ಸ್ವರ್’ಮೇಳ್ ಸೇಕ್ರೆಡ್ ಹಾರ್ಟ್ ಅಂಧೇರಿ ಪೂರ್ವ, ಕೊಂಕಣ್ ಅಸೋಸಿಯೇಶನ್ ಟ್ರಸ್ಟ್ ಮುಂಬಯಿ, ಉರ್ಭೇಸ್ತ್ ಕಲಾಕಾರ್ ಬೋರಿವಿಲಿ, ವಾಕೋಲಾಚೊ ತಾಳೊ ಮತ್ತು ಮಂಗ್ಳೂರಿಯನ್ ಕ್ಯಾಥೋಲಿಕ್ ಅಸೋಸಿಯೇಶನ್ ಪುಣೆ ತಂಡಗಳು ಭಾಗವಹಿಸಿ ಸಂಗೀತವನ್ನು ಪ್ರಸ್ತುತ ಪಡಿಸಿದವು.

Mumbai Teams List:  

052 Konkani Sabha, Mulund, Mumbai

070 Manik Gavpi, Mira Road, Mumbai

083 Melodies of C Alvares, Mumbai

119 Swaranjali Malwani, Mumbai

147 Porzollchim Taram Marol Mumbai

151 Konkan Taram Jerimeri, Mumbai

153 Konkani Kallzam Sakinaka, Mumbai

155 Vasai Konkani Welfare Association, Mumbai

174 Manglorean Catholic Assciation, Pune

186 Swar Me’ll –Sacred Heart Andheri Mumbai

206 Konkan Association Mumbai

215 Vakalacho Tallo Mumbai

241 Urbhesth Kalakar Borivili Mumbai

 

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.