Skip to main content
www.kallianpur.com | Email : kallianpur7@gmail.com | Mob : 9741001849

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮುಂಬಯಿ ಘಟಕದ 5 ವಲಯಗಳ ಕಾರ್ಯಕಾರಿ ಸಮಿತಿಯ ಜಂಟಿ ಸಭೆ.

By March 23, 2023Kannada News

Reported by : Tara Rons Bantwal.

ಮುಂಬಯಿ (ಆರ್‌ಬಿಐ), ಮಾ.22: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮುಂಬೈ ಘಟಕದ ಹಾಗೂ 5 ವಲಯಗಳ ಕಾರ್ಯಕಾರಿ ಸಮಿತಿಯ ಸದಸ್ಯರ ಜಂಟಿ ಸಭೆಯು ಕಳೆದ  ಬುಧವಾರ (ಮಾ.22) ಸಂಜೆ ಅಸಲ್ಪ ಶ್ರೀ ದತ್ತಾತ್ರೇಯ ದುರ್ಗಾಂಬಿಕ ಮಂದಿರದ ಸಭಾಗೃಹ ದಲ್ಲಿ ಮುಂಬಯಿ ಘಟಕದ ಅಧ್ಯಕ್ಷ ಧರ್ಮದರ್ಶಿ ದೇವು ಬಿ. ಪೂಜಾರಿ ಅಧ್ಯಕ್ಷತೆ ಯಲ್ಲಿ ಜರುಗಿತು.
ಅಧ್ಯಕ್ಷ ಧರ್ಮದರ್ಶಿ ದೇವು ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡುತ್ತ ಸಾಧಾರಣ 5,000 ಕ್ಕಿಂತ ಹೆಚ್ಚಿನ ಶಿಬಿರಾರ್ಥಿಗಳನ್ನು ಸೇರಿಸಿ ಸಮಾರಂಭ ವನ್ನು ಮಾಡುವ ಉದ್ದೇಶ ಹೊಂದಿದ್ದು, ಖಾವಂದರನ್ನು ಮುಂಬೈಗೆ ಬರಮಾಡಿಕೊಳ್ಳುವ ಇರಾದೆ ಇದ್ದು ನಿಮ್ಮೆಲ್ಲರ ಸಂಪೂರ್ಣ  ಸಹಕಾರದ ಅಗತ್ಯ ಇದೆ, ಎಲ್ಲರೂ ಈ ಸಮಾರಂಭ ಯಶಸ್ವಿಯಾಗುವಲ್ಲಿ ಉತ್ತಮ ರೀತಿಯಲ್ಲಿ ಸಹಕರಿಸಬೇಕು ಎಂದರು.
ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿ ಅವರು ಸ್ವಾಗತಿಸಿ ಪ್ರಸ್ತಾವಿಕ  ನುಡಿಗಳನ್ನಾಡುತ್ತಾ ಘಟಕ ಸ್ಥಾಪನೆಯಾಗಿ ಒಂದು ವರ್ಷವಾಗುತ್ತಿದ್ದು ವಾರ್ಷಿಕೋತ್ಸವ ಆಚರಣೆಯ ಪೂರ್ವ ಸಿದ್ಧತೆಗೆ ಸರ್ವರ ಅಭಿಪ್ರಾಯ ತಿಳಿಸಬೇಕಾಗಿ ಈ ಸಭೆಯನ್ನು ಕರೆಯಲಾಗಿದೆ ಎಂದರು. ಸಂಗೀತ ವಿಷಾರದೆ ಮಮತಾ ಶೆಟ್ಟಿ ಅವರು ಧರ್ಮಸ್ಥಳ ಪರಿಷತ್ತಿನ ಮುಂಬಯಿ ಘಟಕವು ಮಹಾನಗರದಲ್ಲಿ ಭಜನ ಕ್ಷೇತ್ರದಲ್ಲಿ ಧಾರ್ಮಿಕ ಚೌಕಟ್ಟಿನ ಭದ್ರತೆಗೆ  ಪಾದರ್ಪಣ ಮಾಡಿರುವುದು ಸಂತೋಷ ಆದರೆ ಭಜನಾ ತರಬೇತಿ ಶಿಬಿರಾರ್ಥಿಗಳಿಗೆ ಭಜನೆಯ ರಾಗ ತಾಳ ಲಯಗಳ ಬಗ್ಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರೆ ಘಟಕದ ಉದ್ದೇಶವು ಯಶಸ್ವಿ ಯಾಗುವುದರಲ್ಲಿ ಅನುಮಾನವಿಲ್ಲ, ತನ್ನಿಂದಾಗುವ ಸಹಕಾರ ವನ್ನು ನೀಡುತ್ತೇನೆ ಎಂಬ ಭರವಸೆಯನ್ನಿತ್ತರು.
ಮೀರಾ ರೋಡ್ ಲಕ್ಷ್ಮಿ ನಾರಾಯಣ ಭಜನಾ ಮಂಡಳಿಯ ಭುವಾಜಿ ರಮೇಶ್ ಅಮೀನ್  ಮಾತನಾಡಿ ನಮ್ಮ ಪರಿಸರದಲ್ಲಿ 70 ರಿಂದ 80 ಸಂಘ ಸಂಸ್ಥೆಗಳಿದ್ದು ಅವರೆಲ್ಲರ ಸಂಪೂರ್ಣ ಸಹಕಾರ  ನಮ್ಮ ಮೇಲಿರುವುದ ರಿಂದ ಅಧ್ಯಕ್ಷರ ಸಮಾರಂಭದ ಯೋಜನೆಯು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು. ಪದಾಧಿಕಾರಿ ಸುದರ್ಶನ್ ಅವರು ಶಿಬಿರಾರ್ಥಿ ಗಳಿಗೆ ಭಜನಾ ತರಬೇತಿ ಯೊಂದಿಗೆ ಭಜನೆಯ  ತತ್ವಾರ್ಥಗಳ ಸಂದೇಶ ವನ್ನು ನೀಡುವುದು ಅಗತ್ಯವಾಗಿದೆ ಎಂದರು.  ನವಿ ಮುಂಬಯಿ ನೆರೊಲ್ ವಲಯದ ಇಂದಿರಾ ಶೆಟ್ಟಿ ಮಾತನಾಡಿ ಪರಿಸರದ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಸರ್ವ ಧಾರ್ಮಿಕ ಚಿಂತಕರನ್ನು ನಮ್ಮ ವಲಯ ದೊಳಗೆ  ಸೇರಿಸಿಕೊಂಡಲ್ಲಿ ಜನಬಲದ ಜೊತೆಗೆ ಧನಬಲದ ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.
ದಹಿಸರ್ ಡಹಾಣು ವಲಯದ ಕಾರ್ಯದರ್ಶಿ ವಸಂತ ಶೆಟ್ಟಿ ಮಾತನಾಡಿ ಈಗಾಗಲೇ ಆರಂಭಗೊಂಡಿರುವ ಶಿಬಿರಾರ್ಥಿಗಳಲ್ಲಿ ಬಜನಾ ತರಬೇತಿ ನೀಡಿರುವ ಪ್ರಫುಲ್ ಶ್ರೇಯನ್ ಹಾಗೂ ಶಾಂತರಾಮ್ ಪುತ್ರನ್ ಅವರನ್ನು ಅಭಿನಂದಿಸಿ ನಾವೆಲ್ಲರೂ ಜಾತಿ ಮತ ಭೇದವೇಣಿಸದೆ ಘಟಕದ ಅಧ್ಯಕ್ಷರ ಮನೋಗತವು ಈಡೇರುವಂತೆ ಸಹಕರಿಸಬೇಕು ಎಂದು ವಿನಂತಿಸಿದರು.  ಮುಂಬಯಿ ಘಟಕದ ಉಪಾಧ್ಯಕ್ಷ ವಿ.ಕೆ ಸುವರ್ಣ ಹಾಗೂ ನಾಗೇಶ್  ಎಸ್. ಸುವರ್ಣ ಮಾತನಾಡುತ್ತಾ ಅಧ್ಯಕ್ಷರ ಅಭಿಪ್ರಾಯದಂತೆ ವಾರ್ಷಿಕೋತ್ಸವದ ಯೋಜನೆಯನ್ನು ಕಾರ್ಯಗತಗೊಳಿಸಲು ನಾವೆಲ್ಲರೂ ಕಟ್ಟಿಬದ್ಧರಾಗೋಣವೆಂದು ತಿಳಿಸಿದರು.
ಸರೋಜಿನಿ, ಜ್ಯೋತಿ ನಾಯಕ್, ಶಕುಂತಲಾ ಕೋಟ್ಯಾನ್, ಶ್ಯಾಮ ಪುತ್ರನ್, ಧನಂಜಯ ಶೆಟ್ಟಿ, ಪ್ರಿಯ ಶೆಟ್ಟಿ, ಕೃಷ್ಣ ಶೆಟ್ಟಿ ಇವರೆಲ್ಲರೂ ಸಮಯೋಚಿತವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಮುಂಬಯಿ ಘಟಕದ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಸಹಕರಿಸಿ ಶ್ರೀ ಕ್ಷೇತ್ರದ ಖಾವಂದರ ಮನೋಗತವು ಈಡೇರಿಸುವಂತೆ ಪ್ರಯತ್ನಿಸಬೇಕು ಎಂದರು. ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ಶ್ರೀಧರ್ ಶೆಟ್ಟಿ, ಕೋಶಾಧಿಕಾರಿ ಶಾಂತರಾಮ್ ಪುತ್ರನ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು 5 ವಲಯದ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜಂಟಿ ಸಭೆಯು ಯಶಸ್ವಿಯಾಗಿ ಜರುಗಿತು. ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.