Skip to main content
www.kallianpur.com | Email : kallianpur7@gmail.com | Mob : 9741001849

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿತ ಋಷಿ ಪರಂಪರೆ ವಿಚಾರ ಸಂಕಿರಣ ಭಾಷಾಪ್ರಜ್ಞೆ ಬಗ್ಗೆ ಜಾಗ್ರತವಾಗಿರಬೇಕು: ಆಗುಂಬೆ ನಟರಾಜ್.

By October 3, 2023Mumbai News
kallianpurdotcom: 03/10/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಅ.೦೧: ಭಾಷಾಪ್ರಜ್ಞೆ ಬಗ್ಗೆ ನಾವು ಜಾಗ್ರತವಾಗಿರಬೇಕು. ಜವಾಬ್ದಾರಿಯ ಪ್ರಜ್ಞೆ ಸಂಸ್ಕ್ರತಿಯನ್ನು  ಜೀವಾಳವಾಗಿ ಸುವುದು. ಜವಾಬ್ದಾರಿ ಇಲ್ಲದ ಸ್ವಾತಂತ್ರ‍್ಯ ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ದೇಶ ಸಮೃದ್ದವಾಗಿ ಇರಬೇಕಾದರೆ ಸಾಮಾಜಿಕಪ್ರಜ್ಞೆ ಹಾಗೂ ಜವಾಬ್ದಾರಿ ಅವಶ್ಯ. ಇಂತಹ ವಿಚಾರ ಸಂಕಿರಣಗಳು ಆಗಾಗ ಅಲ್ಲಲ್ಲಿ ನಡೆಯುವಂತಾಗಲಿ ಎಂದ ಪ್ರಜ್ಞೆ ಹಾಗೂ ಜವಾಬ್ದಾರಿ ಕುರಿತು ಇತಿಹಾಸ ಹಾಗೂ ಪ್ರವಾಸಿ ಲೇಖಕ ಆಗುಂಬೆ ಎಸ್.ನಟರಾಜ್ ಸಲಹಿದರು.

ಇಂದಿಲ್ಲಿ ಭಾನುವಾರ ಸಂಜೆ ಘಾಟ್ಕೋಪರ್ ಪೂರ್ವ ಪಂತ್‌ನಗರದಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿ ಸಭಾಗೃಹದ ಮಹೇಶ್ ಎಸ್.ಶೆಟ್ಟಿ (ಬಾಬಾ’ಸ್ ಸಮೂಹ) ವೇದಿಕೆಯಲ್ಲಿ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ `ಋಷಿ ಪರಂಪರೆ ಹಾಗೂ ಸನಾತನ ಧರ್ಮ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ನಟರಾಜ್  ಮಾತನಾಡಿದರು.

ಹಿರಿಯ ಸಂಘಟಕ ಜಿ.ಟಿ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅತಿಥಿ ಅಭ್ಯಾಗತರಾಗಿ ಕನ್ನಡ ವೆಲ್ಫೇರ್ ಸೊಸಾಯಿಟಿ ಇದರ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಹಾಜರಿದ್ದು ಶನೀಶ್ವರ ಮಂದಿರ ಮೌಲಾನಾ ಕಂಪೌಂಡ್ ಇದರ ಪ್ರಧಾನ ಅರ್ಚಕ ವಿದ್ವಾನ್ ಸಂತೋಷ ಭಟ್ ಬಕ್ರೆಮಠ, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ನ್ಯಾ| ಅಮಿತಾ ಭಾಗವತ್ ಸಂಪನ್ಮೂಲವ್ಯಕ್ತಿಗಳಾಗಿದ್ದು `ಋಷಿ ಪರಂಪರೆ- ಸನಾತನ ಧರ್ಮ’ ಬಗ್ಗೆ ವಿಚಾರ ಮಂಡಿಸಿದರು. ಡಾ| ಸತೀಶ್ ಎನ್.ಬಂಗೇರ, ಸಿಎ| ಸುಧೀರ್ ಆರ್.ಎಲ್ ಶೆಟ್ಟಿ ಹಾಗೂ ಆಗುಂಬೆ ನಟರಾಜ್ ಸಂವಾದ ಕಾರ್ಯಕ್ರಮ ನಡೆಸಿದರು. ಲಲಿತಾ ಪ್ರಭು ಅಂಗಡಿ ಅವರು ಆಗುಂಬೆ ನಟರಾಜ್‌ರ ‘ಗಾಂಧಿಜಿ ಜಾಡಿನಲ್ಲಿ ನೌಖಾಲಿ ಗೊಂದು ಮರು ಯಾತ್ರೆ’ ಕೃತಿಯ ವಿಶೇಷತೆಗಳನ್ನು ಪರಿಚಯಿಸಿದರು.

ಸಂತೋಷ ಭಟ್ ವಿಚಾರ ಮಂಡಿಸುತ್ತ ಸನಾತನ ಎನ್ನುವ ಶಬ್ಧ ತುಂಬಾ ಪ್ರಾಚೀನ ವಾದದ್ದು. ವೇದ ಹಾಗೂ ಋಷಿ ಚಿಂತನೆಗಳನ್ನು ತಿಳಿದುಕೊಳ್ಳುವಲ್ಲಿ ನಾವು ಸೋತಿದ್ದು ಇದನ್ನು ಮತ್ತೆ ರೂಢಿಸುವಲ್ಲಿ ಮಯೂರವರ್ಮದ ಅಪರೂಪದ ಕಾರ್ಯಕ್ರಮ ಸಾಕ್ಷಿಯಾಗಿರುವುದು ಹೆಮ್ಮೆಯ ವಿಚಾರ ಎಂದರು.

ಅಮಿತಾ ಭಾಗವತ ಯುವ ಜನತೆಗೆ ಇಂತ ವಿಷಯಗಳನ್ನು ಮನದಟ್ಟು ಮಾಡುವ ಅವಶ್ಯವಿದೆ ಋಷಿಗಳ ನಿಸ್ವಾರ್ಥ ಸಾದನೆಯೇ ಸನಾತನ ಧರ್ಮದ ಪಂಚಾಗ ಅದನ್ನು ಮರೆಯದೆ ಪುನಃ ಮನನ ಮಾಡುವುದು ಅವರಿಗೆ ಕೊಡುವ ಗೌರವ ಎಂದರು. ಸ್ವಚ್ಛ ಸಮಾಜ, ಸುಂದರ ಬದುಕಿಗೆ ಅರ್ಥಪೂರ್ಣ ಚೌಕಟ್ಟು, ಬದ್ರ ಬುನಾದಿ ಹಾಕಿದವರೇ ಋಷಿಗಳು. ವಿಷಯ ಒಂದರ ಸತ್ಯಾ-ಸತ್ಯತೆಗೆ ನಿರಂತರ ಅದ್ಯಯನ ಶೀಲರಾಗಿ ಯಾವುದೇ ಪಲಾಪೇಕ್ಷೆ ಇಲ್ಲದೆ ಸಮಾಜದ ಒಳಿತನ್ನು ಬಯಸಿದ ಋಷಿಗಳ ಕುರಿತು ಇನ್ನಷ್ಟು ವಿಚಾರ ಸಂಕಿರಣಗಳು ನಡೆಯ ಬೇಕು. ಈ ಪ್ರತಿಷ್ಠಾನ ತನ್ನ ಇತಿ-ಮಿತಿಯೊಳಗೆ ದೊಡ್ಡ ಪ್ರಯತ್ನ ಮಾಡಿದೆ. ಇದು ಅನುಕರಣೀಯ ಕಾರ್ಯಕ್ರಮ. ಋಷಿಗಳ ಕುರಿತು ನಾವು ಎಷ್ಟು ತಿಳಿದು ಕೊಂಡರೂ ಕಡಿಮೆ. ಸನಾತನ ಧರ್ಮ-ಋಷಿ ಪರಂಪರೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎ೦ದು ಅಧ್ಯಕ್ಷೀಯ ಭಾಷಣದಲ್ಲಿ ಜಿ.ಟಿ ಆಚಾರ್ಯ ತಿಳಿಸಿ ರಮೇಶ ಕುಂದರ ಶಿವಾಜಿನಗರ ಮತ್ತು ರೋಹಿಣಿ ರಮೇಶ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ನಾರಾಯಣ ರಾವ್, ಜಿ.ಎಸ್ ನಾಯಕ್, ಅರವಿಂದ ಇಟ್ಟಗಿ, ಗಣೇಶ್ ಕುಮಾರ್ ಮತ್ತಿತರರು ಪ್ರಧಾನವಾಗಿದ್ದು ಕನ್ನಡ ವೆಲ್ಫೇರ್ ಸೊಸೈಟಿ ಸಹಕಾರದಿಂದ ನಡೆಸಲ್ಪಟ್ಟ ಕಾರ್ಯಕ್ರಮದ ಆದಿಯಲ್ಲಿ ಶಾಂತ ಲಕ್ಷ್ಮಿ ಉಡುಪ ತಂಡ ಹಾಗೂ ಮಾಲತಿ ಪುತ್ರನ್ ಸಂಗಡಿಗರು ಗೀತಗಾಯನ ನಡೆಸಿದರು.

ವೀಣಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಪ್ರತಿಷ್ಠಾನದ ಗೌ|ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸುರೇಶ್ ಶೆಟ್ಟಿ ಕಣಂಜಾರು ಗಣ್ಯರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಸುರೇಶ್ ಶೆಟ್ಟಿ ವಂದನೆ ಸಲ್ಲಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.