kallianpurdotcom: 30/09/23
ಉಡುಪಿ : ಜೀವ ಸಂಕುಲ ಇರುವ ಗ್ರಹವೆಂದರೆ ಅದು ಭೂಮಿ. ಸೃಷ್ಟಿಕರ್ತ ಮಾನವನೊಂದಿಗೆ ಸಕಲ ಜೀವರಾಶಿ ಗಳನ್ನು ಭೂಮಿಯ ಹಿತಗೋಸ್ಕರ ಸೃಷ್ಟಿ ಮಾಡಿದ್ದಾನೆ. ಒಂದು ಜೀವಿ ಇನ್ನೊಂದಕ್ಕೆ ಪೂರಕ. ಪ್ರಾಕೃತಿಕ ಸಮತೋಲನಕ್ಕೆ ಮಾನವನಷ್ಟು ಹಾನಿ ಮಾಡುವ ಇನ್ನೊಂದು ಜೀವಿ ಇಲ್ಲ. ನಮ್ಮ ಬುದ್ಧಿವಂತಿಕೆಯನ್ನು ಪರಿಸರ ಸ್ನೇಹಿ ರೂಪವಾಗಿ ಉಪಯೋಗಿಸಬೇಕೆ ಹೊರತು ಪರಿಸರ ಹಾನಿ ರೂಪದಲ್ಲಿ ಅಲ್ಲ ಎಂದು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ರತ್ನ ಶ್ರೀ ಜೋಸೆಫ್ ರೆಬೆಲ್ಲೋ ಹೇಳಿದರು.
ಅವರು ಕಲ್ಯಾಣಪುರ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ “ಸ್ವಚ್ಛತೆಯೇ ಸೇವೆ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ನಡೆದ ಸ್ವಚ್ಛಭಾರತ್ ಮಿಷನ್ ಯೋಜನೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಡಾ | ರೋಕ್ ಡಿಸೋಜ ಮಾತನಾಡಿ ನಮ್ಮ ದೇಹ ಮತ್ತು ಮನಸ್ಸು ನೈರ್ಮಲ್ಯದಿಂದ ಕೂಡಿರಬೇಕು. ಅದು ಶುದ್ಧ ಮತ್ತು ಸ್ವಚ್ಛವಿದ್ದಲ್ಲಿ ನಾವು ವಾಸಿಸುವ ಸುತ್ತ ಮುತ್ತ ಸ್ವಚ್ಛತೆ ಸ್ವಾಭಾವಿಕವಾಗಿರುತ್ತದೆ, ಭೂಮಿತಾಯಿ ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು ಭೂಮಿಯನ್ನು ಕಾರ್ಯರೂಪದಲ್ಲಿ ಮಾತೆಯ ಹಾಗೆಯೇ ನೋಡಿಕೊಳ್ಳಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಮಾತನಾಡಿ ಶಿಸ್ತು ,ಶಿಕ್ಷಣ ಮತ್ತು ಸ್ವಚ್ಛತೆಗೆ ಮೌಂಟ್ ರೋಸರಿ ಶಿಕ್ಷಣ ಸಂಸ್ಥೆ ನಮ್ಮ ಗ್ರಾಮದ ಹೆಮ್ಮೆಯಾಗಿದೆ. ಈ ಸ್ವಚ್ಛತೆಯ ಪಾಠವನ್ನು ಮನೆ ಮನೆಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ಕರೆ ಕೊಟ್ಟರು.
ವಿದ್ಯಾರ್ಥಿನಿ ಅಧಿತಿ ಐತಾಳ್ “ಸ್ವಚ್ಛತೆಯೇ ಸೇವೆ” ಬಗ್ಗೆ ಭಾಷಣ ಮಾಡಿದಳು. ವಿದ್ಯಾರ್ಥಿಗಳಿಂದ ಪರಿಸರ ಗೀತೆಗಳು ಸ್ವಚ್ಛತೆಯ ಬಗ್ಗೆ ನೃತ್ಯ ರೂಪಕವನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು. ವೇದಿಕೆಯಲ್ಲಿ ಪಂಚಾಯಿತ್‌ನ ಮಾಜಿ ಅಧ್ಯಕ್ಷ ಸತೀಶ್ ನಾಯ್ಕ್ ನೂತನ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ ಇವರು ಹಾಜರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಧರ್ಮಭಗಿನಿ ಸಿ| ಆನ್ಸಿಲ್ಲಾ ಡಿಮೆಲ್ಲೋ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಘಟಿಸಿದ ಶಿಕ್ಷಕ ಆಲ್ವಿನ್ ದಾಂತಿ ನಿರೂಪಿಸಿ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.