kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಆ.25: ಗಲ್ಫ್ ರಾಷ್ಟ್ರದಲ್ಲಿನ ತುಳುಕೂಟ ಬಹರೈನ್ ಇತ್ತೀಚಿಗೆ ಬಹರೇನ್‌ನ ಪ್ರಸಿದ್ಧ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಆಟಿದ ಒಂಜಿ ದಿನ ಕಾರ್ಯಕ್ರಮ ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಭಾರತೀಯ ರಾಯಭಾರಿಗಳಾದ ಗೌರವಾನ್ವಿತ ವಿನೋದ್ ಕೆ.ಜಾಕೋಬ್ ಹಾಗೂ ಅತಿಥಿಗಳಾಗಿ ನಮ್ಮ ಟಿವಿ ವಾಹಿನಿಯ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್, ಬಂಟ್ಸ್ ಕತಾರ್ ಸಂಸ್ಥೆಯ ಅಧ್ಯಕ್ಷ ನವೀನ ಶೆಟ್ಟಿ ಇರುವೈಲ್ ಹಾಗೂ ಗಗನ ಸುವರ್ಣ ಮುಲ್ಕಿ ಪಾಲ್ಗೊಂಡಿದ್ದರು.
ಕರಾವಳಿಯಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಸಿದ್ದಿ ಪಡೆದಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ್ ಸುವರ್ಣ ಮುಲ್ಕಿ ಇವರ ನಿರ್ದೇಶನದಲ್ಲಿ ಸದ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ತ್ತು. ಬಹರೈನ್ ದೇಶದಲ್ಲಿರುವ ತುಳು ಭಾಷಿಗರ ವಿವಿಧ ಸಮುದಾಯಗಳ ಸಂಘಟನೆಗಳು, ಕೊಂಕಣಿ ಹಾಗೂ ಮುಸ್ಲಿಂ ಸಂಘಟನೆಗಳು ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ನೀಡಿದ್ದು ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗ ಳು, ಸದಸ್ಯ ರನೇಕರು ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದು ದ್ವೀಪದಾದ್ಯಂತ ತುಳುವರಲ್ಲಿ ಹಾಗೂ ಕನ್ನಡಿಗರಲ್ಲಿ ಇದು ಸಂಚಲನ ಮೂಡಿಸಿತು.
ತುಳುನಾಡಿನ ಪ್ರಾಚೀನ ಆಟೋಟ ಸ್ಪರ್ಧೆಗಳನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಪ್ರಯತ್ನವಾಗಿಸಿ ಸಂಜೆ ತುಳುನಾಡಿನ ಜಾನಪದ ಕ್ರೀಡೆ ನಡೆಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡಿಸಲ್ಪಟ್ಟಿತು.
ತುಳುಕೂಟದ ಮುಖ್ಯಸ್ಥರಲ್ಲೊಬ್ಬರಾದ ರಾಜ್‌ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದು ಆಟಿದ ಒಂಜಿ ದಿನವನ್ನು ಪ್ರಪ್ರಥಮವಾಗಿ ಬಹರೈನ್‌ನಲ್ಲಿ ಹಮ್ಮಿಕೊಳ್ಳಲಾದ ಬಗ್ಗೆ ಮಾಹಿತಿಯನ್ನಿತ್ತು ಇದಕ್ಕೆ ಅಭೂತಪೂರ್ವ ಪ್ರತಿಕ್ರೀಯೆ ಸಿಕ್ಕಿದೆ ಎಂದರು.
ಇನ್ನೊಬ್ಬ ಮುಖ್ಯಸ್ಥರಾಗಿರುವ ಆಸ್ಟಿನ್ ಸಂತೋಷ್ ಅವರು ರಾಯಭಾರಿಗಳನ್ನು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರುಗಳನ್ನು ಕಾರ್ಯಕ್ರಮದ ವೇದಿಕೆಗೆ ಆಹ್ವಾನಿಸಿದರು. ಭಾರತೀಯ ರಾಯಭಾರಿಗಳು ದೀಪ ಬೆಳಗಿಸಿ, ಹಲಸಿನ ಹಣ್ಣನ್ನು ತುಂಡು ಮಾಡುವುದರ ಮೂಲಕ ಸಮಾರಂಭಕ್ಕೆ ಅದ್ದೂರಿಯ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲೇ ಗಣೇಶ್ ಸಾಲ್ಯಾನ್ ಹಾಗೂ ಚಿರಾಗ್ ಸುವರ್ಣ ಅವರ ಉಸ್ತುವಾರಿ ಯಲ್ಲಿ ಹಮ್ಮಿಕೊಳ್ಳಲಾದ ಹುಲಿವೇಷ ವೇಷಧಾರಿಗಳು ಅದ್ಬುತ ಹುಲಿ ಕುಣಿತವನ್ನು ಪ್ರದರ್ಶಿಸಿದರು.
ಹುಲಿಮರಿಯೊಂದು ಪಲ್ಲಕ್ಕಿಯಲ್ಲಿ ಸಭಾಂಗಣ ಪ್ರವೇಶಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ತುಳುನಾಡಿನ ಶೈಲಿಯಲ್ಲಿ ಯೇ ಬಣ್ಣಕ್ಕೆ ಮೈಯೊಡ್ಡಿದ್ದ ಹುಲಿ ವೇಷಧಾರಿಗಳ ವೇಷ ಭೂಷಣಗಳನ್ನು ವಿಶೇಷವಾಗಿ ಮಂಗಳೂರುನಿಂದ ತರಿಸ ಲಾಗಿತ್ತು. ಸುಮಾರು ನೂರಕ್ಕೂ ಮಿಕ್ಕಿದ ತುಳು ಕಲಾವಿದರು ತುಳು ಜಾನಪದ ಹಾಗೂ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. ತುಳುನಾಡಿನ ಸೌಹಾರ್ದತೆಯ ಸಂಕೇತವಾಗಿ ಮುಸ್ಲಿಂ ಯುವಕರು ದಫ್ ಪ್ರದರ್ಶನ ನೀಡಿದರೆ, ಕೊಂಕಣಿ ತಂಡವು ಕೊಂಕಣಿ ಭಾಷೆಯ ಜಾನಪದ ನೃತ್ಯವೊಂದನ್ನು ಪ್ರದರ್ಶಿಸಿತು. ತುಳುನಾಡಿನ ಉಡುಗೆ ತೊಡುಗೆ ಗಳನ್ನು ಬಿಂಬಿಸುವ ಮಿಸ್‌ತುಳು ನಾಡು ಹಾಗೂ ಮಿಸೆಸ್‌ತುಳು ನಾಡು ಸ್ಪರ್ಧೆಗಳನ್ನೂ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು ೨೦ಕ್ಕೂ ಮಿಕ್ಕಿದ ಯುವತಿಯರು, ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು.
ಅತಿಥಿಗಳಿಗೆ ತುಳು ಲಾಂಛನಗಳನ್ನೊಳಗೊಂಡ ಶಾಲುಗಳನ್ನು ಹಾಕಿ, ವೀಳ್ಯದೆಲೆ, ಅಡಿಕೆ ಮತ್ತು ಪಿಂಗಾರ ಇತ್ಯಾದಿ ಗಳನ್ನು ನೀಡಿ ಸ್ವಾಗತಿಸಲಾಯಿತು. ಓಲೆ ಬೆಲ್ಲದೊಂದಿಗೆ ನೀರನ್ನು ಹಾಗೂ ಪಾನಕಗಳನ್ನು ಅತಿಥಿಗಳಿಗೆ ನೀಡಲಾ ಗಿತ್ತು. ತುಳುನಾಡಿನಿಂದ ತಂದಿದ್ದ ಮಲ್ಲಿಗೆ, ಸೇವಂತಿಗೆ, ಗೊಂಡೆ ಹೂಗಳು, ಪಿಂಗಾರ, ತೆಂಗಿನ ಮರದ ಕೊಂಬು, ಬಾಳೆಗಿಡ, ಮಾವಿನ ಎಲೆಗಳು, ಹಲಸಿನ ಹಣ್ಣು ಇತ್ಯಾದಿಗಳಿಂದ ಮಾಡಿದ್ದ ಅಲಂಕಾರಗಳು ಸಮಾರಂಭದ ಸೌಂದರ್ಯವನ್ನು ಹೆಚ್ಚಿಸಿದ್ದವು. ತುಳುವರು ಬಹರೈನ್‌ನ ಸುಡು ಸೆಖೆಯನ್ನೂ ಲೆಕ್ಕಿಸದೆ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪ್ರಾರಂಭದುದ್ದಕ್ಕೂ ಹಿಂದೂ, ಕ್ರೈಸ್ತ ಹಾಗೂ ಇಸ್ಲಾಮ್ ಧಾರ್ಮಿಕ ಗುರುಗಳು ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದರು. ಸನ್ಮಾನ ಸ್ವೀಕರಿಸಿದ ನಂತರ ತುಳುವಲ್ಲೇ ತಮ್ಮತಮ್ಮ ಸಂದೇಶ ನೀಡಿದ್ದು, ಹೊರ ದೇಶದಲ್ಲಿ ಭಾರತೀಯ ರಾಯಭಾರಿಗಳು ತುಳು ಭಾಷಣವನ್ನು ಬರೆದು ತಂದು ಸುಲಲಿತವಾಗಿ ಮಾತನಾಡಿದರು. ನಿಮ್ಮ ಆತಿಥ್ಯಕ್ಕೆ ಚಿರಋಣಿಯಾಗಿದ್ದೇನೆ. ಈ ದ್ವೀಪದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ತುಳುವರು ಇದ್ದಾರೆಂದು ತಿಳಿದು ಸಂತೋಷವಾಗಿದೆ. ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಕಣ್ಣಾರೆ ಕಂಡು ಖುಷಿಪಟ್ಟಿದ್ದೇನೆ ಎಂದು ರಾಯಭಾರಿಗಳು ತಿಳಿಸಿದರು. ಇಡೀ ಕಾರ್ಯಕ್ರಮವು ಬಹರೈನ್‌ನ ತುಳುವರಿಗೆ ಸಂತೋಷ ತಂದಿತ್ತು. ಕಿಕ್ಕಿರಿದ ಸಂಖ್ಯೆಯಲ್ಲಿ ನೆರೆದಿದ್ದ ತುಳುವರು ಕಿವಿಗಡ ಚಿಕ್ಕುವ ಕರತಾಡನದೊಂದಿಗೆ ಸ್ವೀಕರಿಸಿದರು.
ಅತಿಥಿಗಳಾದ ಚಂದ್ರಶೇಖರ ಸುವರ್ಣ, ನವೀನ ಶೆಟ್ಟಿ ಎಡ್ಮೆಮಾರ್, ನವೀನ ಶೆಟ್ಟಿ ಇರುವೈಲ್ ಹಾಗೂ ಗಗನ ಸುವರ್ಣ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಹರೈನ್‌ನ ರಾಯಭಾರಿ ಕಚೇರಿಯಲ್ಲಿ ಸೇವೆ ಸಲ್ಲಿಸು ತ್ತಿರುವ ಹಾಗೂ ಹಲವು ದಶಕಗಳಿಂದ ವಿವಿಧ ರೀತಿಯಲ್ಲಿ ತುಳುವರಿಗೆ ಹಾಗೂ ಕನ್ನಡಿಗರಿಗೆ ಸಹಾಯ ಹಸ್ತ ನೀಡು ತ್ತಿರುವ ಸಂಧ್ಯಾ ಪೈ ಅವರನ್ನು ಗೌರವಿಸಲಾಯಿತು. ಬಹರೈನ್ ದೇಶವನ್ನು ಬಿಟ್ಟು ತೆರಳುತ್ತಿರುವ ಹಿರಿಯ ತುಳುವ ಹಾಗೂ ಕೊಂಕಣಿ ಸಮುದಾಯದ ಪ್ರಮುಖ ವ್ಯಕ್ತಿ ಜೋಯೆಲ್ ಡೆಸಾ ಅವರನ್ನು ಗೌರವವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಆಟಿ ತಿಂಗಳ ಖಾದ್ಯಗಳನ್ನು ಸವಿಯುವ ಏರ್ಪಾಡು ಮಾಡಲಾಗಿತ್ತು. ಸುಮಾರು ಅರ್‍ವತ್ತಕ್ಕೂ ಹೆಚ್ಚಿನ ಮನೆಗಳಲ್ಲಿ ಮಂಗಳೂರಿನಿಂದ ತರಿಸಲಾಗಿ ತಯಾರಿಸಿದ ಹಲಸಿನಗಟ್ಟಿ, ಹಳದಿ ಎಲೆಯಗಟ್ಟಿ, ತಿಮರೆ ಹಾಗೂ ಇತರ ಚಟ್ನಿಗಳು, ಕೆಸುವಿನ ಎಲೆಗಳಿಂದ ತಯಾರಿಸಿದ ಖಾದ್ಯಗಳು, ಪತ್ರೊಡೆ, ಹಲಸಿನ ಕಾಯಿಯ ಪದಾರ್ಥಗಳು ಹೀಗೆ ಹತ್ತು ಹಲವು ತುಳುನಾಡಿನ ಖಾದ್ಯಗಳನ್ನು ಸವಿಯುವ ಅವಕಾಶವನ್ನು ಬಹರೈನ್ ನ ತುಳು ವರಿಗೆ ತುಳುಕೂಟ ಏರ್ಪಡಿಸಿಕೊಟ್ಟಿತ್ತು.
ಕು| ನಮಿತಾ ಸಾಲ್ಯಾನ್ ಮತ್ತು ಪ್ರೀತಮ್ ಆಚಾರ್ಯ ಅವರ ಸಾರಥ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸ ಲ್ಪಟ್ಟವು. ಲೋಲಾಕ್ಷಿ ರಾಜಾರಾಮ್ ನೇತೃತ್ವದಲ್ಲಿ ಆಟಿಯ ವಿವಿಧ ಖಾದ್ಯಗಳನ್ನು ಮಹಿಳೆಯರು ತಯಾರಿಸಿ ಪ್ರದರ್ಶಿ ಸಿದ್ದರು. ತುಳುಕೂಟದ ಸದಸ್ಯ ಸದಸ್ಯೆಯರು ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.