Skip to main content
www.kallianpur.com | Email : kallianpur7@gmail.com | Mob : 9741001849

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ.

By May 22, 2024News
kallianpurdotcom: 9741001849
(ವರದಿ : ರೋನ್ಸ್ ಬಂಟ್ವಾಳ್

ಚಿತ್ರ: ಮಂಗಳವಾರ ಪೂರ್ವಾಹ್ನ ತೋರಣಮುಹೂರ್ತ ಕಾರ್ಯಕ್ರಮದೊಂದಿಗೆ ವಾರ್ಷಿಕೋತ್ಸವ ಶುಭಾರಂಭ ಗೊಂಡಿತು.

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮಂಗಳ ವಾರ ತೋರಣಮುಹೂರ್ತ, ವಿಮಾನಶುದ್ಧಿ, ಆರಾಧನಾಪೂರ್ವಕ ಕ್ಷೇತ್ರಪಾಲ ಪ್ರತಿಷ್ಠೆ, ನವಕಲಶ ಅಭಿಷೇಕ ಮತ್ತು ನಾಂದಿಮಂಗಲ ಪೂಜಾವಿಧಾನ ಮೊದಲಾದ ಧಾರ್ಮಿಕ ವಿಧಿ- ವಿಧಾನಗಳು ನಡೆದವು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಮತ್ತು ಊರಿನ ಶ್ರಾವಕರು- ಶ್ರಾವಕಿ ಯರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ: ಇಂದು ಬುಧವಾರ ವಾಸ್ತುಪೂಜಾ ವಿಧಾನ, ಜಿನಸಹಸ್ರನಾಮ ಪುಷ್ಪಾರ್ಚನೆ, ಷೋಡಶ ಕಲಶಾ ಭಿಷೇಕ, ನವಗ್ರಹ ಮಹಾಶಾಂತಿ, ಮಹಾಮಂಗಳಾರತಿ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ.

ನಾಳೆ ಗುರುವಾರ ಅಪರಾಹ್ನ ಗಂಟೆ ೨.೩೦ ರಿಂದ ಮಹಾಮಾತೆ ಶ್ರೀಪದ್ಮಾವತಿ ಅಮ್ಮನವರ ಆರಾಧನೆ, ಸಹಸ್ರ ನಾಮ ಕುಂಕು ಮಾರ್ಚನೆ, ಪದ್ಮಾವತಿದೇವಿ ಪ್ರತಿಷ್ಠೆ, ಭವ್ಯ ಅಗ್ರೋದಕ ಮೆರವಣಿಗೆ ಮತ್ತು ಉತ್ಸವ ಸಹಿತ ಭಗವಾನ್ ಚಂದ್ರನಾಥ ಸ್ವಾಮಿಗೆ ೧೦೮ ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.

ಚರ್ಮರೋಗ: ಉಚಿತ ತಪಾಸಣಾ ಶಿಬಿರ.

ಉಜಿರೆ: ಇದೇ ೨೬ ರಂದು ಭಾನುವಾರ ಬೆಳಿಗ್ಯೆ ಗಂಟೆ ೯ ರಿಂದ ಅಪರಾಹ್ನ ಒಂದು ಗಂಟೆ ವರೆಗೆ ಉಜಿರೆಯಲ್ಲಿರುವ ಎಸ್.ಡಿ. ಎಂ. ಆಸ್ಪತ್ರೆಯಲ್ಲಿ ಚರ್ಮರೋಗ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ಸಂಪರ್ಕಿಸಿ: ಸಂಚಾರಿ ದೂರವಾಣಿ:
೮೦೭೩೩೪೯೨೧೬ / ೭೭೬೦೩೯೭೮೭೮

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.