kallianpurdotcom: 07/12/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.೦೪: ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಉಡುಪಿ ಶ್ರೀ ಪೇಜಾ ವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರನ್ನು ಮಹಾರಾಷ್ಟ್ರ ಸರ್ಕಾರದ ಕಂದಾಯ,ಪಶುಸಂಗೋಪನೆ, ಹೈನುಗಾರಿಕೆ ಅಭಿವೃದ್ಧಿ ಖಾತೆ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಇಂದಿಲ್ಲಿ ಸೋಮವಾರ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದಲ್ಲಿ ಭೇಟಿಗೈದು ಆಶೀರ್ವಾದ ಪಡೆದರು. ಈ ಶುಭಾವಸ ರದಲ್ಲಿ ಸಚಿವ ರಾಧಾಕೃಷ್ಣ ಪಾಟೀಲ್ ಅವರು ಆಯೋಧ್ಯೆ ಶ್ರೀ ರಾಮ ಮಂದಿರದ ಮಂಡಲೋತ್ಸವ ಆ್ಯಪ್ನ್ನು ಬಿಡುಗಡೆಗೊಳಿಸಿ ಶುಭಾರೈಸಿದರು.
ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್ ಇದರ ಪ್ರಧಾನ ಅರ್ಚಕ, ಪೇಜಾವರಶ್ರೀ ಷಷ್ಟ ್ಯಬ್ದಿ ಶಾಂತಿ ಮಹೋತ್ಸವ ಸಮಿತಿ ಮುಂಬಯಿ ಕಾರ್ಯಾಧ್ಯಕ್ಷ ಡಾ| ಎಂ.ಎಸ್ ಆಳ್ವ, ಕಾರ್ಯದರ್ಶಿ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ವಿದ್ವಾನ್ ಎಲ್ಲೂರು ಗೋವಿಂದ ಭಟ್, ಶ್ರೀಗಳವರ ಆಪ್ತ ಸಹಾಯಕರಾದ ವಿಷ್ಣುಮೂರ್ತಿ ಭಟ್, ಕೃಷ್ಣಮೂರ್ತಿ ಭಟ್, ಪೇಜಾವರ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ ಸೇರಿದಂತೆ ಪುರೋಹಿತರು ಉಪಸ್ಥಿತರಿದ್ದು ಸಚಿವರನ್ನು ಬರ ಮಾಡಿಕೊಂಡರು. ಬಳಿಕ ಸಚಿವರು ಶ್ರೀ ಪೇಜಾವರ ಮಠದ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಾನ ದಲ್ಲಿ ಶ್ರೀಕೃಷ್ಣನ ದರ್ಶನ ಪಡೆದರು.
ಸಚಿವ ಪಾಟೀಲ್, ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ (ಪಣಕಜೆ ಬೆಳ್ತಂಗಡಿ) ಇವರು ಶ್ರೀಪಾದಂಗಳವರಿಂದ ಮಂತ್ರಾಕ್ಷತೆ ಸ್ವೀಕರಿಸಿ ಆಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತು ಸಮಾಲೋಚನೆಗೈದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.