Skip to main content
www.kallianpur.com | Email : kallianpur7@gmail.com | Mob : 9741001849

ಗೋಕುಲದಲ್ಲಿನ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಡೊಗ್ಗಾಲು ಶ್ರೀ ಕೃಷ್ಣನಿಗೆ ರಜತ ಕಲಶಾಭಿಷೇಕ -ಉಡುಪಿ ಸಂಪ್ರದಾಯದಂತೆ ಮೊಸರು ಕುಡಿಕೆ.

By August 28, 2024Mumbai News
kallianpurdotcom: 9741001849
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.೨೭: ಮಹಾರಾಷ್ಟ್ರದ ಮಥುರಾ ನಾಮಾಂಕಿತ ಶ್ರೀಕೃಷ್ಣನ ಆರಾಧನಾ ಕೇಂದ್ರ ಎಂದೇ ಜನಜನಿತ ಬೃಹನ್ಮುಂಬಯಿ ಸಯಾನ್ ಪಶ್ಚಿಮದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಸಂಸ್ಥೆಗಳು ಒಟ್ಟಾಗಿ ಗೋಕುಲ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀ ಗೋಪಾಲಕೃಷ್ಣನ ಸಾನಿಧ್ಯದಲ್ಲಿ ಇಂದಿಲ್ಲಿ ಮಂಗಳವಾರ ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವಗಳೊಂದಿಗೆ ಶ್ರದ್ಧಾಪೂರ್ವಕವಾಗಿ ಸಂಭ್ರಮಿಸಿದವು.

ಶ್ರೀಕೃಷ್ಣನ ೫೨೫೨ನೇ ಜನ್ಮೋತ್ಸವ ಸಡಗರಕ್ಕೆ ೧೦೮ ರಜತ ಕಲಶ ಪ್ರತಿಷ್ಠೆಗೈದು ಪ್ರಾರ್ಥನೆ, ಮಂಗಳಾರತಿ, ಪೂಜಾಧಿಗಳೊಂದಿಗೆ ವಿಧಿವತ್ತಾಗಿ ಚಾಲನೆಯನ್ನೀಡಲಾಯಿತು. ಬಳಿಕ ನಿತ್ಯ ಪೂಜೆ, ಷಷ್ಟಾಂಗ ಭಜನೆ. ಸೂರ್ಯೋಸ್ತಮದಿಂದ ರಾತ್ರಿ ತನಕ ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ, ಗೋಕುಲದ ಆರ್ಚಕ ಗಣೇಶ್ ಭಟ್, ಹಿರಿಯ ಪುರೋಹಿತ ಹರಿಭಟ್ ಮುಂಡ್ಕೂರು, ಆರ್ಚಕ ರಾಮ ವಿಠಲ ಕಲ್ಲೂರಾಯ, ಆರ್ಚಕ ಅಕ್ಷಯ ಬಲ್ಲಾಳ್ ವಿವಿಧ ಪೂಜಾಧಿಗಳೊಂದಿಗೆ ಸಂಕಲ್ಪ ಸಹಿತ ಸಾಂಪ್ರದಾಯಿಕ ರಜತ ಕಲಶಾಭಿಷೇಕ ನೆರವೇರಿಸಿದರು. ಭಕ್ತಾದಿಗಳು ಕುಟುಂಬ ಸಹಿತ ಶ್ರೀ ಕೃಷ್ಣನಿಗೆ ಸ್ವತಃ ಕಲಶಾಭಿಷೇಕಗೈದರು. ಆರ್ಚಕರು ರಜತಕಲಶವನ್ನು ಪ್ರಸಾದ ರೂಪವಾಗಿ ನೀಡಿ ಹರಸಿದರು.

ಸೋಮವಾರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರೀಶ್ ಪೂಜಾರಿ ಮತ್ತು ತಂಡವು  ಸೆಕ್ಸೋಪೋನ್ ವಾದನ, ಆಚಾರ್ಯ ಪರಿವಾರ ಆರ್ತ್‌ಮತ್ತು ತಂಡವು ಗೋಕುಲ ಮೇ ಭಜತ್ ಭಜನೆ, ಗೋಕುಲ ಭಜನಾ ಮಂಡಳಿಯು ಭಜನೆ, ವಕ್ರತುಂಡ ಸಂಗೀತ ತಂಡದಿಂದ ಸಂಗೀತ ಕಛೇರಿ ನಡೆಸಿದರು. ತಡರಾತ್ರಿ ವಿಷ್ಣು ಸಹಸ್ರನಾಮ, ಶ್ರೀ ಕೃಷ್ಣಾಷ್ಟೋತ್ತರ ಪಠನೆ ಇತ್ಯಾದಿ ಧಾರ್ಮಿಕ ವಿಧಿಗಳು ನಡೆಸಲಾಗಿ ಮಧ್ಯರಾತ್ರಿ ಜನ್ಮಾಷ್ಟಮಿ ಪೂಜೆ, ಅರ್ಘ್ಯ ಪ್ರದಾನ ನೆರವೇರಿಸಲ್ಪಟ್ಟಿತು.

ಮಂಗಳವಾರ ಗೋಕುಲ ದೇವಾಲಯದಲ್ಲಿ ಶ್ರೀಕೃಷ್ಣನ ಜನ್ಮೋತ್ಸವದ ಪ್ರಯುಕ್ತ ಉಡುಪಿ ಸಂಪ್ರದಾಯದ ಂತೆ ಮೊಸರು ಕುಡಿಕೆ ಆಚರಿಸಲಾಯಿತು. ಬೆಳಿಗ್ಗೆ ಡೊಗ್ಗಾಲು ಶ್ರೀ ಕೃಷ್ಣನಿಗೆ ೧೦೮ ರಜತ ಕಲಶಾಭಿಷೇಕ, ಮಧ್ಯಾಹ್ನ ಮಹಾ ಪೂಜೆ, ಬಳಿಕ ಮಹಾ ಅನ್ನಪ್ರಸಾದ ನಡೆಸಲ್ಪಟ್ಟಿತು.

ಅಪರಾಹ್ನ ಗೋಕುಲದ ಪ್ರಾಂಗಣದಲ್ಲಿ ಅಶೋಕ್ ಕೊಡ್ಯಡ್ಕ ತಂಡದ ಹುಲಿ ವೇಷಧಾರಿಗಳು ಕುಣಿತ, ಕರಿವೇಷ, ಯಕ್ಷಗಾನ ವೇಷ, ವಾದ್ಯ, ಚೆಂಡೆವಾದನಗಳ ನೀನಾದ ವೈಭವ, ಕುಣಿತ ಭಜನೆ ಸಹಿತ ಉಡುಪಿಯ ಶ್ರೀಕೃಷ್ಣನ ವೈಭವೋಪೇತ ಪಲ್ಲಕ್ಕಿ ಉತ್ಸವ ಇತ್ಯಾದಿಗಳೊಂದಿಗೆ ಮೊಸರು ಕುಡಿಕೆ ಉತ್ಸವ ಆಚರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೀತಾ ಆರ್.ಎಲ್ ಭಟ್ ನಿರ್ದೇಶನದಲ್ಲಿ ಗೋಕುಲ ಸದಸ್ಯರು ಪಂಚಜನ್ಯ ಯಕ್ಷಗಾನ ಪ್ರದರ್ಶಿಸಿದರು. ರಾತ್ರಿ ಪೂಜೆ, ಮಹಾ ಮಂಗಳಾರತಿ, ತೀರ್ಥಪ್ರಸಾದ, ಲಘು ಉಪಾಹಾರದೊಂದಿಗೆ ವಾರ್ಷಿಕ ಶ್ರೀ ಕೃಷ್ಣಾಷ್ಟಮಿ ಸಂಪನ್ನಗೊಂಡಿತು.

ಪುರೋಹಿತರಾದ ಚಂದ್ರಶೇಖರ್ ಭಟ್, ಪ್ರಕಾಶ್ ಭಟ್ ಗೋರೆಗಾಂ, ಭವಾನಿ ಶಂಕರ್ ಭಟ್, ನಾಗರಾಜ್ ಐತಾಳ, ವಾಸುದೇವ ಭಟ್ ಇವರು ಪೂಜಾಧಿಗಳನ್ನು ನೆರವೇರಿಸಿದರು. ಬಿಎಸ್‌ಕೆಬಿಎ ಮತ್ತು ಜಿಪಿಟಿ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ಹಾಗೂ ಎ.ಪಿ.ಕೆ ಪೋತಿ ಮತ್ತು ಸಹನಾ ಎ.ಪೋತಿ ದಂಪತಿಗಳು ಪೂಜೆಯ ಯಜಮಾನತ್ವ ವಹಿಸಿದ್ದರು.

ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಶಾಂತ್ ಹೆರ್ಲೆ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಕಲಾ ವೃಂದ ವಿಭಾಗಧ್ಯಕ್ಷೆ ವಿನೋದಿನಿ ರಾವ್, ಕೃಷ್ಣ ವೇಷ ಸ್ಪರ್ಧಾ ಸಮಿತಿ ಕಾರ್ಯಾಧ್ಯಕ್ಷ ದೀಪಕ್ ಶಿವತ್ತಾಯ, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್, ಜಿಪಿಟಿ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಆಶ್ರಯ ಸಮಿತಿ ಕಾರ್ಯಾಧ್ಯಕ್ಷ ಕೆ.ರಘುರಾಮ ಆಚಾರ್ಯ, ಪುರೋಹಿತ ಆರ್.ಎಲ್ ಭಟ್, ಉಭಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಧೇಕಿಶನ್ ದಮಾನಿ ದಂಪತಿ ಮತ್ತು ಬಿ.ಆರ್ ಶೆಟ್ಟಿ (ವಳಕಾಡು) ಪಾಲ್ಗೊಂಡು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.