
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.೦೪: ಮಹಾನಗರದಲ್ಲಿನ ಹಿರಿಯ ಮತ್ತು ಪ್ರತಿಷ್ಠಿತ ಹೊಟೇಲು ಉದ್ಯಮಿ ಪದ್ಮಕರ್ ಗಂಭೀರ್ ಮುಂದಾಳುತ್ವದಲ್ಲಿ ಸ್ಥಾಪಿತ ಚರ್ಚಗೇಟ್ ಇಲ್ಲಿನ ಶಾಸಕರ ವಸತಿಯ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ತನ್ನ ೫೨ನೇ ವಾರ್ಷಿಕ ನವರಾತ್ರಿ ಮಹೋತ್ಸವ-೨೦೨೫ ವನ್ನು ಅಜಂತಾ ಕ್ಯಾಟರ‍್ಸ್ನ ಮಾಲೀಕ, ಭಜನಾ ಮಂಡಳಿ ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ ಇನ್ನ ಸಾರಥ್ಯದಲ್ಲಿ ಶ್ರದ್ಧಾಭಕ್ತಿ ಹಾಗೂ ಸಂಭ್ರಮೋಲ್ಲಾಸದಿಂದ ನೆರವೇರಿಸಿತು.
ವರ್ಷಂಪ್ರತಿಯಂತೆ ಈ ಬಾರಿಯೂ ನವರಾತ್ರಿ ಮಹೋತ್ಸವದ ಒಂಭತ್ತು ದಿನಗಳಲ್ಲಿ ಭಜನಾ ಮಂಡಳಿ ಯ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ಗಣಹೋಮ, ನಿತ್ಯಪೂಜೆ, ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪೂಜೆ, ಮಹಾಕಾಳಿ ಅಮ್ಮನವರ ಪೂಜೆ, ಭಜನೆ ಮತ್ತು ಮಂಗಳಾರತಿ ನೆರವೇರಿಸಲಾಯಿತು.
ವಿಜಯ ದಶಮಿದಿನ ಬೆಳಿಗ್ಗೆ ಕಳಸಪೂಜೆ, ಭಜನೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮೆರವಣಿಗೆಯೊಂದಿಗೆ ಚೌಪಾಟಿಯಲ್ಲಿ ಕಳಸ ವಿಸರ್ಜನೆ ನಡೆಸಲಾಗಿ ದಸರಾ ಮಹೋತ್ಸವದ ಆರಂಭೋತ್ಸವದ ದಿನ ಘಟಸ್ಥಾಪನೆಯೊಂದಿಗೆ ಆದಿಗೊಂಡ ನವರಾತ್ರಿ ಉತ್ಸವವು ವಿಜಯದಶಮಿದಿನ ಸಮಾಪನ ಗೊಂಡಿತು. ಈ ಶುಭಾವಸರದಲ್ಲಿ ದಸರಾ ಪೂಜೆಗೆ ಮಹಾರಾಷ್ಟ್ರ ವಿಧಾನಸಭೆಯ ಗೌರಹ್ವಾನಿತ ಸ್ಪೀಕರ್ ರಾಹುಲ್ ನಾರ್ವೇಕರ್ ಭೇಟಿ ನೀಡಿದ್ದು, ಅಧ್ಯಕ್ಷ ಜಯರಾಮ ಶೆಟ್ಟಿ ಅವರು ಮಾತೆಯ ಪ್ರಸಾದವನ್ನಿತ್ತು ಸನ್ಮಾನಿಸಿ ಗೌರವಿಸಿದರು.
ಕಳಸ ಪೂಜೆಯಲ್ಲಿ ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ ಇನ್ನ, ಅಧ್ಯಕ್ಷ ಹರೀಶ್ ಎಸ್.ಖೇಡೇಕರ್, ಉಪಾಧ್ಯಕ್ಷ ನವೀನ್ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜು ಪೂಜಾರಿ, ಕೋಶಾಧಿಕಾರಿ ಮಾಣಿಕ್ಯ ಕೋಟ್ಯಾನ್, ಜೊತೆ ಕಾರ್ಯದರ್ಶಿ ಗಳಾದ ಚಂದ್ರ ಮೋಗವೀರ, ಯೋಗೇಶ್ ಪುತ್ರನ್, ಮಾಧವ ಮೋಗವೀರ, ಯೋಗೇಶ್ ಬಂಗೇರ, ಮುಖ್ಯ ಸಲಹೆಗಾರ ವಿಠ್ಠಲ್ ಶೇರಿಗಾರ್ ಕಟಪಾಡಿ ಸೇರಿದಂತೆ ನಗರದ ನೂರಾರು ಗಣ್ಯರು, ಭಕ್ತರು ವಾರ್ಷಿಕ ದಸರೋತ್ಸವದಲ್ಲಿ ಪಾಲ್ಗೊಂಡು ಶ್ರೀ ದುರ್ಗಾಂಬಿಕೆ ಅಮ್ಮ, ಶ್ರೀ ಮಹಾಕಾಳಿ ಹಾಗೂ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾದರು.
ಈ ವರ್ಷ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ತನ್ನ ೫೨ನೇ ವಾರ್ಷಿಕ ನವರಾತ್ರಿ ಹಬ್ಬದೊಂದಿಗೆ ದಸರೋತ್ಸವ ಪೂರೈಸಿದ ಹಿರಿಮೆ ನಮಗಿದೆ ಇದು ಉದ್ಯಮಿ ಪದ್ಮಕರ್ ಗಂಭೀರ್ ಮತ್ತು ಸಂಗಡಿಗರ ದೂರದೃಷ್ಟಿತ್ವದ ಸಾಂಘಿಕ ಶಕ್ತಿಯಾಗಿದೆ. ನಮ್ಮೆಲ್ಲರ ನಂಬಿಕೆ ಮತ್ತು ಶ್ರದ್ಧೆಯ ಪ್ರತೀಕವಾಗಿ ಮುನ್ನಡೆದ ಫಲವಾಗಿದೆ. ಇದನ್ನು ಇನ್ನೂ ಬಲಾಢ್ಯ ಪಡಿಸಿ ಮುನ್ನಡೆಸುವೆವು ಎಂದು ಗೌರವಾಧ್ಯಕ್ಷ ಜಯರಾಮ ಶೆಟ್ಟಿ ಇನ್ನ ತಿಳಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.