
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.೦೬: ನೂರು ವರುಷಗಳ ಬಾಳಿಗಾಗಿ ಈ ಸಮುದಾಯದೊಳಗಿನ ಓರ್ವವ್ಯಕ್ತಿ, ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿದ್ದು ಸ್ವಸಮಾಜದ ನೂರರ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಅದೃಷ್ಟಶಾಲಿ ಯೇ ಸರಿ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಭಾರತವನ್ನು ಜಯಿಸಿದರು. ಆದರೆ ಕರ್ನಾಟಕವನ್ನು ಯಾಕೆ ಗೆದ್ದಿಲ್ಲ ಯಾಕೆ ಅನ್ನೋದು ಈಗ ನನಗೆ ಅರ್ಥವಾಯಿತು. ಕಾರ್ಯಕ್ರಮ ಆಯೋಜಿಸಲು ಅಷ್ಟು ಕಷ್ಟವಾಗದು ಆದರೆ ಸಭಾಗೃಹವನ್ನು ಸಭಿಕರಿಂದ ತುಂಬಿಸಿಕೊಳ್ಳುವುದು ತುಂಬಾ ಕಷ್ಟಕರ. ಆದರೆ ಇಲ್ಲಿ ಇಡೀ ಸಭಾಗೃಹವು ತುಂಬಿ ತುಳುಕುತ್ತಿರುವುದಕ್ಕೆ ನಿಮ್ಮೆಲ್ಲರಿಗೂ ಪಂಜುರ್ಲಿಯ ಕೃಪೆಯಿದೆ ಅನ್ನುವುದು ಸಾಬೀತಾಗಿದೆ. ಭಗವಂತನ ಕೃಪೆ ಇರುವವರ ಜೀವನದಲ್ಲಿ ಆನಂದವೋ ಆನಂದ ಇರುತ್ತದೆ. ಮುಂಬಯಿನಲ್ಲಿ ಬಾಳಿದವರಲ್ಲಿ ಸಂತೋಷವೇ ಜಾಸ್ತಿ ಇರುತ್ತದೆ. ಆದ್ದರಿಂದ ಮುಂಬಯಿಗರೆಲ್ಲರೂ ಸದಾ ಖುಷಿಯಲ್ಲಿರುತ್ತಾರೆ. ಇಂದು ವೀರಪ್ಪ ಮೊಲಿ ಅವರನ್ನು ಗೌರವಿಸಿ ಸಮಾಜವನ್ನು ಪ್ರಭಾವಿತರಾಗಿಸಿದ್ದೀರಿ. ನಿಮ್ಮ ಗೌರವವನ್ನು ಸ್ವೀಕರಿಸಿದ ಈ ಸಮಾಜದ ಮೌಲ್ಯವೂ ಮತ್ತಷ್ಟು ಹೆಚ್ಚಿದಂತಾಗಿದೆ. ಇಂತಹ ದೇವಾಡಿಗರಿಂದ ಮುಂಬಯಿ ಮಹಾನಗರದ ಗೌರವ ಹೆಚ್ಚಿದೆ. ದೇವಾಡಿಗ ಸಂಘವು ೧೦೧ ವರ್ಷ ಪೂರೈಸುವ ಮುನ್ನ ಭಾರತ ಸರಕಾರದಿಂದ ವಿಶೇಷ ಪೋಸ್ಟ್ ಕಾರ್ಡ್ (ಸ್ಟಾoಪ್) ಮತ್ತು ಪೋಸ್ಟಲ್ ಲಕೋಟೆ (ಎನ್‌ವಲಪ್) ನಿಮ್ಮ ಸಮಾಜಕ್ಕೆ ತೆಗೆದುಕೊಳ್ಳುವ ಜವಾಬ್ದಾರಿ ವಹಿಸುವೆ ಎಂದು ಮಹಾರಾಷ್ಟ್ರ ಸರಕಾರದ ಪ್ರವಾಸೋದ್ಯಮ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಸಚಿವ, ಮುಂಬಯಿ ಪ್ರದೇಶ ಬಿಜೆಪಿ ಮಾಜಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ ತಿಳಿಸಿದರು.
ಇಂದಿಲ್ಲಿ ರವಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ದೇವಾಡಿಗ ಸಂಘ ಮುಂಬಯಿ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ ಅವರಿಗೆ ‘ದೇವಾಡಿಗ ಕುಲಶ್ರೇಷ್ಠ’ ಬಿರುದು ಪ್ರದಾನಿಸಿ ಮಂಗಲ್ ಲೋಧಾ ಮಾತನಾಡಿ ದರು.
ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ನಾರಾಯಣ್ ದೇವಾಡಿಗ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂ ಭದಲ್ಲಿ ಗೌರವ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರವಿ ಎಸ್.ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಕೆ.ಶೆಟ್ಟಿ, ಮೊಸಾಕೋ ಶಿಪ್ಪಿಂಗ್ ಆಂಡ್ ಫಾರ್‌ವರ್ಡಿಂಗ್ ದುಬಾಯಿ ಇದರ ಕಾರ್ಯಾಧ್ಯಕ್ಷ ಲೆ| ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ದುಬಾಯಿ ಕಾರ್ಯಾಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೆವೇಟ್ ಲಿಮಿಟೆಡ್‌ನ ಸಂಸ್ಥಾಪಕ, ಕಾರ್ಯಾಧ್ಯಕ್ಷ ಕುಸುಮೋದರ ಡಿ. ಶೆಟ್ಟಿ ಚೆಲ್ಲಡ್ಕ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಎಸ್.ಸದಾಶಿವ ಆಂಡ್ ಕಂಪೆನಿ ಚಾರ್ಟಡ್ ಅಕೌಂಟೆಂಟ್ಸ್ ಮುಂಬಯಿ ಇದರ ಪ್ರವರ್ತಕ ಸಿಎ| ಸದಾಶಿವ ಎಸ್.ಶೆಟ್ಟಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಡ್ ಅಧ್ಯಕ್ಷ ವಿಶ್ವಾಸ್ ಎಂ.ಅತ್ತಾವರ, ಅಭಿಷೇಕ್ ಜನಶಕ್ತಿ ಫೌಂಡೇಶನ್ ನವದೆಹಲಿ ಇದರ ಕಾಯಾಧ್ಯಕ್ಷ ಅನಿಲ್ ಜೈನ್ ದೆಹಲಿ ಉಪಸ್ಥಿತರಿದ್ದು ವೇದಿಕೆಯನ್ನಲಂಕರಿಸಿದ್ದರು. ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.
ಸಮಾರಂಭದಲ್ಲಿ ದುಬಾಯಿ ಅಲ್ಲಿನ ಉದ್ಯಮಿಗಳಾದ ನಾರಾಯಣ ಎಂ.ದೇವಾಡಿಗ, ಹರೀಶ್ ಶೇರಿಗಾರ್, ಭಾಸ್ಕರ್ ಶೇರಿಗಾರ್, ಸಂಘದ ಉಪಾಧ್ಯಕ್ಷರಾದ ನರೇಶ್ ಎಸ್.ದೇವಾಡಿಗ, ಮಾಲತಿ ಜೆ.ಮೊಲಿ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಿ.ದೇವಾಡಿಗ, ಗೌರವ ಜತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಪ್ರಭಾಕರ ಡಿ.ದೇವಾಡಿಗ, ನಿತೇಶ್ ದೇವಾಡಿಗ, ಗೌರವ ಜತೆ ಕೋಶಾಧಿಕಾರಿಗಳಾದ ಸುರೇಖಾ ಹೆಚ್.ದೇವಾಡಿಗ, ಸುರೇಶ್ ಆರ್.ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಜೆ.ಕೆ ಮೊಯಿಲಿ, ಎಸ್.ಪಿ ಕರ್ಮರನ್, ಕೆ.ಕೆ ಮೋಹನ್‌ದಾಸ್, ವಾಸು ಎಸ್.ದೇವಾಡಿಗ ರವಿ ಎಸ್.ದೇವಾಡಿಗ, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ಎಂ.ದೇವಾಡಿಗ, ಯುವ ವಿಭಾಗಧ್ಯಕ್ಷ ನ್ಯಾ| ಬ್ರಿಜೇಶ್ ನಿಟ್ಟೇಕರ್ ಸೇರಿದಂತೆ ವಿವಿಧ ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಕಾರ್ಯಕಾರಿ ಸಮಿತಿ, ವಿವಿಧ ಉಪಸಮಿತಿಗಳು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.
ಕುಲದೇವತೆ ಶ್ರೀ ಏಕನಾಥೇಶ್ವರಿ ಮಾತೆಗೆ ನಮಿಸಿ ಸಮಾರಂಭ ಆದಿಗೊಳಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದೇವಾಡಿಗ ಸಂಘ ಮುಂಬಯಿ ಇದರ ಪ್ರಾದೇಶಿಕ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಕಲಾವಿದರು ವೈವಿಧ್ಯ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ದೀಕ್ಷಿತಾ ದೇವಾಡಿಗ, ಶ್ರದ್ಧಾ ಮೊಲಿ, ಸ್ಪೂರ್ತಿ ಮೊಲಿ, ತನ್ವಿ ದೇವಾಡಿಗ, ಹರ್ಷ ದೇವಾಡಿಗ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಪ್ರವೀಣ್ ಎನ್.ದೇವಾಡಿಗ, ಧರ್ಮಪಾಲ್ ದೇವಾಡಿಗ ಮತ್ತು ಹಿರಿಯಡ್ಕ ಮೋಹನ್‌ದಾಸ್ ಅತಿಥಿಗಳಿಗೆ ಶಾಲು ಹೊದಿಸಿ ಪುಷ್ಪಗುಚ್ಫ ನೀಡಿ ಗೌರವಿಸಿದರು ಹಾಗೂ ಯುವ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಿದರು. ಅಶ್ವಿನಿ ಕೆ.ದೇವಾಡಿಗ ಮತ್ತು ಸೋನಾಲಿ ಶೇರಿಗಾರ್ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಬಿ.ದೇವಾಡಿಗ ಧನ್ಯವದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.