kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ:ಮುಂಬಯಿಯ ನೆಬ್ ಮೀಡಿಯಾ ಔಟ್ ಲುಕ್ ಪ್ರಸ್ತುತಿಯ ಬೆಸ್ಟ್ ಡಾಕ್ಟರ್ಸ್ ಮುಂಬಯಿ-2025ರ ಗೌರವ ಪ್ರಕಟಿಸಿದ್ದು, ಮುಂಬಯಿ ಇಲ್ಲಿನ ಬೆಸ್ಟ್ ಡಾಕ್ಟರ್ ಗೌರವಕ್ಕೆ ಡಾ। ಸದಾನಂದ ಆರ್.ಶೆಟ್ಟಿ ಪಾತ್ರರಾಗಿದ್ದಾರೆ.
ಭಾರತದ ಖ್ಯಾತ ಹೃದಯ ತಜ್ಞ ಎಂದು ಗುರುತಿಸಿಕೊಂಡಿರುವ ಡಾ। ಸದಾನಂದ್ ಶೆಟ್ಟಿ ಇವರು ಸ್ವಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಏರಿದವರು. ನಿಸ್ವಾರ್ಥ ವ್ಯಕ್ತಿತ್ವದ ಡಾ| ಸದಾನಂದ ಶೆಟ್ಟಿ ಇವರು ಸದಾ ಹಸನ್ಮುಖಿಯಾಗಿ, ಸಮಾಜಮುಖಿಯಾಗಿ ಸಮಾಜದ ಎಲ್ಲಾ ವರ್ಗದವರಿಗೆ ಆಪದ್ಭಾಂದವ, ಹಿತೈಷಿಗಳಾಗಿ ಕಾರ್ಯನಿರ್ವಹಣೆ ಮಾಡಿದವರು. ಹೃದ್ರೋಗಕ್ಕೆ ಸಂಬಂಧಪಟ್ಟಂತೆ ಅವರು ಅನೇಕ ಮಹತ್ವದ ಪುಸ್ತಕಗಳನ್ನು ಬರೆದಿದ್ದು ಅವುಗಳು ಜಾಗತಿಕ ಮನ್ನಣೆಯನ್ನು ಪಡೆದಿದೆ. ಸದಾ ಕಾರ್ಯಪ್ರವೃತ್ತರಾದ ಅವರು ಪರೋಪಕಾರ ಮನೋಭಾವದಿಂದ ಬಡವರ ಬಂಧು ಎನ್ನಿಸಿಕೊಂಡಿದ್ದು, ತುಳು ಕನ್ನಡಿಗರ ಹೆಮ್ಮೆ ಎನ್ನಿಸಿಕೊಂಡು, ಭಾರತಮಾತೆಯ ಹಿರಿಮೆಯ, ಗರಿಮೆಯ ಪುತ್ರರಾಗಿದ್ದಾರೆ.
‘ಬೆಸ್ಟ್ ಡಾಕ್ಸ್ ಮುಂಬಯಿ- 2024’ರ ವಾರ್ಷಿಕ ವೈಶಿಷ್ಟ್ಯತೆಗಳನ್ನು ಪ್ರಸ್ತುತಪಡಿಸಿದ್ದು, ಬೃಹನ್ಮುಂಬಯಿ ನಗರದ ಅತ್ಯುತ್ತಮ ಆಯ್ದ ವೈದ್ಯಾಧಿಕಾರಿಗಳ ಹೆಸರುಗಳನ್ನು ಪ್ರಕಟಿಸಿದೆ. ಮುಂಬಯಿನ ವೈದ್ಯರ ಸಲಹೆಗಾರ ತಂಡದ ಹಾಗೂ ನೆಬ್ ಮೀಡಿಯಾ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಪಟ್ಟಿ ಸಿದ್ದಗೊಂಡಿದ್ದು ಆ ಪೈಕಿ ಸದಾನಂದ ಶೆಟ್ಟಿ ಅವರನ್ನು ಬೃಹನ್ಮುಂಬಯಿಯ ಪ್ರಸಿದ್ದ ವೈದ್ಯಾಧಿಕಾರಿ ಆಗಿ ಆಯ್ಕೆಗೊಳಿಸಲಾಗಿದೆ. ಡಾ ಶೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಡಾಕ್ಟರೇಟ್ ಇನ್ ಮೆಡಿಕಲ್ (ಹೃದ್ರೋಗ), ಎಂ.ಡಿ (ಮೆಡಿಕಲ್), ಎಫ್‌ಎಸಿಸಿ, ಎಫ್‌ಎಸ್ಸಿಎಐ (ಅಮೆರಿಕ), ಎಪ್ಪಿಪಿಎಸ್, ಎಫ್‌ಐಎಸ್‌ಇ, ಎಸ್‌ಐ, ಎಫ್‌ಇಎಸ್ಸಿ ಪದವೀಧರರಾಗಿದ್ದು, ದೇಶ- ವಿದೇಶಗಳಲ್ಲಿ ಜನಾನುರಾಗಿಯಾಗಿ ದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.