Skip to main content
www.kallianpur.com | Email : kallianpur7@gmail.com | Mob : 9741001849

ಮಾಜಿ ಸಂಸದ ನಳೀನ್‌ಕುಮಾರ್ ಕಟೀಲ್ ಮುಂಬಯಿ ಭೇಟಿ ಶ್ರೀ ಸಿದ್ಧಿವಿನಾಯಕ ಗಣಪತಿ – ಕಿಂಗ್ ಸರ್ಕಲ್ ಜಿಎಸ್‌ಬಿ ಮಹಾಗಣಪತಿ ದರ್ಶನ.

By September 17, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.೧೭: ಬಿಜೆಪಿ ಕರ್ನಾಟಕ ನಿಕಟಪೂರ್ವ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳೀನ್‌ಕುಮಾರ್ ಕಟೀಲ್ ಅವರು ಮುಂಬಯಿ ಪ್ರವಾಸದಲ್ಲಿದ್ದು ಕಳೆದ  ಮಂಗಳವಾರ ವಿಮಾನ ನಿಲ್ದಾಣದಲ್ಲಿ ಹರ್ಯಾಣ ಛೋಟು ರಾಮ್ ನಗರದ ಕಾಳಿದಾಸ್ ಧಾಮ ಸಂಪ್ಲಾ ಆಶ್ರಮದ ಸಿದ್ಧಯೋಗಿ ಗುರುದೇವ್ ಬಾಬಾ ಶ್ರೀ ಕಾಳಿದಾಸ್ ಮಹಾರಾಜ್ ಶ್ರೀ ಶಿವಶಕ್ತಿ ಬಾಬಾ ಅವರನ್ನು ಭೇಟಿಗೈದು ಆಶೀರ್ವಾದ ಪಡೆದರು.

ಬಳಿಕ ಮುಂಬಯಿಯಲ್ಲಿನ ಅಂತ್ಯಂತ ಪ್ರಸಿದ್ಧ ದಾದರ್ ಪಶ್ಚಿಮ ಪ್ರಭಾದೇವಿ ಇಲ್ಲಿನ ಶ್ರೀ ಸಿದ್ಧಿವಿನಾಯಕ ಗಣಪತಿ ಮಂದಿರಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನಗೈದರು. ಮುಖ್ಯ ವಿಗ್ರಹದ ಎರಡೂ ಬದಿಗಳಲ್ಲಿ ದೇವತೆ ರಿದ್ಧಿ  ಮತ್ತು ದೇವತೆ ಸಿದ್ಧಿ ವಿಗ್ರಹಗಳ ಮಧ್ಯೆ ೨.೫ ಅಡಿ ಎತ್ತರದ ಕಪ್ಪುಕಲ್ಲಿನ ಏಕಶಿಲೆಯಯಲ್ಲಿ ಆಶ್ರಯ (ಗಾಭರ) ಆಕಾರದಲ್ಲಿ ಸುಂದರವಾಗಿ ಚಿನ್ನದ ಲೇಪನ ಅಷ್ಟಭುಜಾಕೃತಿಯ ವಿನ್ಯಾಸಗೊಳಿಸಲಾದ ಗಣೇಶ ವಿಗ್ರಹನ ದರ್ಶನದೊಂದಿಗೆ ಫೂಲ್ ಗಲಿ (ಪುಷ್ಪಪೂಜೆ), ಪ್ರಸಾದ್ ಪೂಜೆ, ಆರತಿಯೊಂದಿಗೆ ಗಣೇಶ ಭಗವಂತನ ಗೌರವ ಆಶೀರ್ವಾದ ಪಡೆದರು. ಈ ವೇಳೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್‌ನ ವಿಶ್ವಸ್ಥ ಸದಸ್ಯ ಭಾಸ್ಕರ್ ಶೆಟ್ಟಿ ಧಾರಾವಿ ಮತ್ತಿತರರು ಉಪಸ್ಥಿತರಿದ್ದು ಕಟೀಲ್ ಅವರನ್ನು ಗೌರವಿಸಿದರು.

ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರನ್ನೊಳಗೊಂಡು ಸಂಜೆ ವಿಶ್ವಪ್ರಸಿದ್ಧ, ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ಕಿಂಗ್ ಸರ್ಕಲ್‌ನ ಜಿ.ಎಸ್.ಬಿ ಸೇವಾ ಮಂಡಲದಲ್ಲಿ ಈ ಬಾರಿ ಪ್ರತಿಷ್ಠಾಪಿಸಿ ಪೂಜಿಸಲ್ಪಟ್ಟ ಜಿಎಸ್‌ಬಿ ಮಹಾಗಣಪತಿ ದರ್ಶನ ಪಡೆದರು. ಬಳಿಕ ನಳೀನ್‌ಕುಮಾರ್ ಮತ್ತು ವೇದವ್ಯಾಸ್ ಅವರ ತುಲಾಬಾರ ಸೇವಾ ನೆರವೇರಿಸಲ್ಪಟ್ಟಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಂಬಯಿ ಕಾರ್ಯದರ್ಶಿ ಮತ್ತು ವಕ್ತಾರ ವಿನೋದ್ ಶೇಲಾರ್, ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ, ಹರೀಶ್ ಕುಮಾರ್, ಗಣೇಶೋತ್ಸವ ಸಮಿತಿ ಸದಸ್ಯರುಗಳಾದ ಅಮಿತ್ ಶೆಣೈ, ಪ್ರಜ್ವಲ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.