Skip to main content
www.kallianpur.com | Email : kallianpur7@gmail.com | Mob : 9741001849

ಹವ್ಯಕ ವೆಲ್ಫೇರ್ ಟ್ರಸ್ಟ್ ಪ್ರದಾನಿಸಿದ ೨೦೨೩ನೇ ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ’ ಹೊರನಾಡಲ್ಲಿ ಕರ್ಕಿ ಹೆಸರು ಅಜರಾಮರವಾಗಿದೆ : ತೋನ್ಸೆ ವಿಜಯಕುಮಾರ್ ಶೆಟ್ಟಿ.

By March 10, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.೧೦: ಹೊರನಾಡಲ್ಲಿ ಕರ್ಕಿ ವೆಂಕಟರಮಣ ಅವರ ಹೆಸರು ಅಜರಾಮರ ವಾಗಿದ್ದು ಶಾಸ್ವತಕ್ಕೆ ಸಾಕ್ಷಿಯಾಗಿದೆ. ಹವ್ಯಕರೆಂದಾಗ ಕರ್ಕಿ ಶಾಸ್ತ್ರಿ ಸೂರಿ ಅವರ ಹೆಸರು ಬರುತ್ತದೆ. ಇಂತಹ ಮಹಾನ್ ವ್ಯಕ್ತಿಯ ಹೆಸರಲ್ಲಿ ಪ್ರಶಸ್ತಿ ಕೊಡಮಾಡುವ ಹವ್ಯಕರು ಸೃಜನಶೀಲರು. ಅವರ ಹೆಸರು ಉಳಿಸಿಕೊಳ್ಳಲು ಕರ್ತವ್ಯ ಪಾಲನೆ ಮಾಡುವುದೇ ದೊಡ್ಡ ಸಾಧನೆಯಾಗಿದೆ. ಪ್ರಶಸ್ತಿ ಪಡಕೊಳ್ಳುವ ರಾಷ್ಟ್ರೀಯ ಮಟ್ಟದ ಮಹಾನ್ ಮಹಿಳೆಯೂ ಭಾಗ್ಯವಂತರು. ಇಂತಹ ಕಾರ್ಯಕ್ರಮಗಳಿಂದ ಭಾವನೆಗಳು ಗಟ್ಟಿಯಾಗುತ್ತವೆ ಎಂದು ಕಲಾಜಗತ್ತು ತಂಡದ ರೂವಾರಿ, ಲಿಮ್ಕಾ ರೆಕಾರ್ಡ್ ಪುರಸ್ಕ್ರತ ರಂಗತಜ್ಞ ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ ನುಡಿದರು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮುಲುಂಡ್ ಪಶ್ಚಿಮದ ಸಾರಸ್ವತ್‌ವಾಡಿ ಇಲ್ಲಿನ ಶ್ರೀ ಕಛ್ ದೇಶೀಯ ಸರಸ್ವತ್ ಬ್ರಾಹ್ಮೀಣ್ ಮಹಾಸ್ಥಾನ್ ಟ್ರಸ್ಟ್ನ ಸಭಾಗೃಹದಲ್ಲಿ ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿದ್ದು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ ಕತೆಗಾರ್ತಿ, ಕಾದಂಬರಿಕಾರೆ ಮಿತ್ರಾ ವೆಂಕಟ್ರಾಜ್ ಅವರಿಗೆ ಟ್ರಸ್ಟ್ನ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ ೨೦೨೩’ ಪ್ರದಾನಿಸಿ ಡಾ| ವಿಜಯಕುಮಾರ್ ಮಾತನಾಡಿದರು.

ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಹಯೋಗದಲ್ಲಿ ಆಯೋಜಿ ಸಿದ್ದ ಹವ್ಯಕ ಟ್ರಸ್ಟ್ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ಸಭಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾ ಪಕ ಡಾ| ಜಿ.ಎನ್ ಉಪಾಧ್ಯ ವಿಶೇಷ ಆಹ್ವಾನಿತರಾಗಿದ್ದು ಪ್ರಶಸ್ತಿ ವಿಜೇತೆ ಮಿತ್ರಾ ವೆಂಕಟ್ರಾಜ್ ಅವರಿಗೆ (ಪತಿ ಯು. ವೆಂಕಟ್ರಾಜ್ ಅವರನ್ನೊಳಗೊಂಡು) ಅಧ್ಯಕ್ಷ ಶಿವಕುಮಾರ್ ಗೌರವಿಸಿ ಅಭಿನಂದಿಸಿದರು.

ತಮ್ಮೊಳಗೆಯೇ ಇದ್ದ ಓದುಗನನ್ನು ಉದ್ದೇಶಿಸಿಯೇ ಲೇಖಕ ಬರೆಯುತ್ತಿರುತ್ತಾನೆ. ಸೃಜನ ಶೀಲತೆಯ ಮೂಲವೇ ಸಂವಾ ಹನಕ್ಕಾಗಿ ನಮ್ಮಲ್ಲಿರುವ ತುಡಿತ. ಅಂದರೆ ನಮ್ಮ ವಿಚಾರ, ಭಾವನೆಗಳನ್ನು ಇತರರೊಂದಿಗೆ ಹಂಚಿ ಕೊಳ್ಳಬೇಕು ಎನ್ನು ವಂತಹ ಕಾತರದಿಂದಾಗಿಯೇ ಕಾವ್ಯ, ಬರಹ, ನಟನೆ ಇತ್ಯಾದಿ ಗಳು ಹುಟ್ಟಿಕೊಳ್ಳುತ್ತವೆ. ಇತರರಿಗೆ ಅಂತರಂಗದ ಭಾವನೆ ಗಳನ್ನು ಮುಟ್ಟಿಸುವ ಮೊದಲು ಒಳಗಿನಿಂದ ಅವುಗಳ ಮಂಥನ ವಾಗಿ ಅದು ಇತರರಿಗೆ ಮುಟ್ಟಿಸಲು ಯೋಗ್ಯವೇ ಎಂದು ನಿರ್ಧರಿಸುವ ಒಬ್ಬ ಓದುಗನು ನಮ್ಮೊಳಗೆಯೇ ಇರ್ತಾರೆ ಅಂತ ನಾನು ಭಾವಿಸಿರುವೆ. ಕರ್ಕಿ ಶಾಸ್ತ್ರಿ ಅವರು ಮುಂಬಯಿ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು. ಇಂತಹ ಸಾಧಕರ ಸ್ಮಾರಣಾ ರ್ಥದ ಈ ಪ್ರಶಸ್ತಿಯನ್ನು ಅಂತ್ಯಂತ್ಯ ಗೌರವ ಮತ್ತು ಆತ್ಮೀಯ ತೆಯಿಂದ ಸ್ವೀಕರಿಸಿರುವೆ ಎಂದು ಪ್ರಶಸ್ತಿಗೆ ಉತ್ತರಿಸಿ ಮಿತ್ರಾ ವೆಂಕಟ್ರಾಜ್ ತಿಳಿಸಿದರು.

ಪ್ರಶಸ್ತಿ ಪ್ರದಾನ ಮತ್ತು ಹವ್ಯಕ ಸಂಸ್ಥೆಯ ಷಷ್ಟ್ಯಬ್ಧಿ ಸಂಭ್ರಮಕ್ಕೆ ಚಾಲನೆಯನ್ನೀಡುವ ಎರಡು ಅಸಾಧಾರಣ ಕಾರ್ಯಕ್ರಮಗಳ ಶುಭದಿನವಾಗಿದೆ. ಪೂರ್ವಜರ ದೂರದೃಷ್ಠಿತ್ವದಿಂದ ಹವ್ಯಕ ವೆಲ್ಫೇರ್ ಟ್ರಸ್ಟ್ ಈ ಮಟ್ಟಕ್ಕೆ ಬೆಳೆದಿದ್ದು ಇದು ಭಾವೀ ಜನಾಂಗಕ್ಕೆ ಅನುಕೂಲಕರ ಸೇವೆಯನ್ನೀಡಲಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶಿವಕುಮಾರ್ ತಿಳಿಸಿದರು.

ಟ್ರಸ್ಟ್ನ ಮುಖವಾಣಿ `ಹವ್ಯಕ ಸಂದೇಶ’ ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್. ಭಾಗ್ವತ್ ಪ್ರಸ್ತಾವನೆಗೈದ ಒಂದು ಅಕಾಡೆಮಿ ಮಾಡುವ ಕೆಲಸ ಹವ್ಯಕ ವೆಲ್ಫೇರ್ ಟ್ರಸ್ಟ್ ಮಾಡುತ್ತಿ ರುವುದು ಅಭಿವಂದನೀಯ ಎಂದರು.

ಟ್ರಸ್ಟ್ನ ಉಪಾಧ್ಯಕ್ಷ ವಿಷ್ಣು ಭಾಗ್ವತ್, ಜೊತೆ ಕಾರ್ಯದರ್ಶಿ ಜಿ.ವಿ ಹೆಗಡೆ ವೇದಿಕೆಯಲ್ಲಿ ಆಸೀನ ರಾಗಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಾರಾಯಣ ಆರ್.ಅಕದಾಸ, ಸಂಜಯ ಭಟ್, ರಾಮಣ್ಣ ಭಟ್, ಪ್ರಕಾಶ್ ಭಟ್ ಮುಡಿಪು, ಪ್ರಕಾಶ್ ಹೆಗಡೆ, ಚಂದ್ರಶೇಖರ್ ಜೋಶಿ, ಕರ್ನಾಟಕ ಮಲ್ಲ ದೈನಿಕದ ಶ್ಯಾಮ ಎಂ.ಹಂಧೆ, ಗುರುರಾಜ್ ಎನ್.ನಾಯಕ್ ಸೇರಿದಂತೆ ಟ್ರಸ್ಟ್ನ ಸದಸ್ಯರನೇಕರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕ್ರತರನ್ನು ಅಭಿನಂದಿಸಿದರು.

ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಇದರ ಸಂಸ್ಥಾಪಕ, ಹರಿಕಥಾ ವಿದ್ವಾನ್ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಸಾಂಸ್ಕ್ರತಿಕ ಕಾರ್ಯ ಕ್ರಮವಾಗಿಸಿ ಹರಿಕೀರ್ತನೆ ಪ್ರಸ್ತುತ ಪಡಿಸಿದರು. ಮಹೇಶ ಹೆಗಡೆ ಕಲಾವಿದರನ್ನು ಪರಿಚಯಿಸಿದರು.

ಅಮೃತಾ ಹೆಗಡೆ ಪ್ರಾರ್ಥನೆಯನ್ನಾಡಿದರು. ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ ಸುಖಾಗಮನ ಬಯಸಿದರು. ಹೇಮಾ ಹೆಗಡೆ ಸನ್ಮಾನಪತ್ರ ವಾಚಿಸಿದರು. ಶಶಿಕಲಾ ಹೆಗಡೆ ಅಭಿನಂದನಾ ನುಡಿಗಳನ್ನಾಡಿದ ರು. ಪೂರ್ಣಿಮಾ ಅಕದಾಸ ಅತಿಥಿ ಪರಿಚಯಗೈದರು. ಕಲಾ ಭಾಗ್ವತ್ ಕಾರ್ಯಕ್ರಮ ನಿರೂಪಿಸಿದರು. ವಿಷ್ಣು ಭಾಗ್ವತ್ ಧನ್ಯವದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.