
kallianpurdotcom: Mob 9741001849
Official release from Green Park Central School.
ಹಿರಿಯಡಕ: ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯಲ್ಲಿ 2025-26 ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಯವರಾದ ಪರಮೇಶ್ವರ್ ಎ. ಹೆಗ್ಡೆ ಯವರು ಉದ್ಘಾಟಿಸಿ ಮಾತನಾಡುತ್ತಾ ನಾಯಕತ್ವ, ಶಿಸ್ತು ಮತ್ತು ಬದ್ದತೆಯನ್ನು ಕಲಿಯಲು ವಿದ್ಯಾರ್ಥಿ ಸಂಸತ್ ಒಂದು ಉತ್ತಮ ವೇದಿಕೆ. ಈ ಮೂಲಕ ವ್ಯಕ್ತಿತ್ವ ವಿಕಸನವನ್ನು ಬೆಳೆಸಿಕೊಂಡರೆ ಮುಂದೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ.
ಪ್ರಸ್ತುತ ಕಾಲಮಾನದಲ್ಲಿ ನಾವು ಗಮನಿಸಬೇಕಾದ ವಿಚಾರವೇನೆಂದರೆ ಬಹಳಷ್ಟು ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆಯದೆ ತಮ್ಮ ಜೀವನವನ್ನು ತಾವೇ ವ್ಯರ್ಥ ಗೊಳಿಸುತ್ತಿದ್ದಾರೆ. ಇಂದು ಈ ಸಂಸತ್ ನಲ್ಲಿ ನಾನು ಗಮನಿಸಿದ್ದೇನೆಂದರೆ ಮಿನಿಸ್ಟರ್ ಆಪ್ ಹ್ಯಾಪಿನೆಸ್ ಎನ್ನುವ ಹುದ್ದೆಯನ್ನು ಕೂಡ ಸೃಷ್ಟಿಸಿ ಹೊಸತನವನ್ನು ಮೆರೆದಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಭಾರತೀಯ ಸೇನೆಯ ನಿವೃತ್ತ ಯೋಧರಾದ ಉಪೇಂದ್ರ ವಾಗ್ಲೆ ಯವರು ಅತಿಥಿಗಳಾಗಿ ಭಾಗವಹಿಸಿದ್ದು ವಿದ್ಯಾರ್ಥಿಗಳಿಗೆ ಬ್ಯಾಜ್ ತೊಡಿಸಿದರು. ಶಾಲಾ ಪ್ರಾಂಶುಪಾಲೆ ಕ್ಲಾರಿನ್ ನಿಖೋಲಸ್ ರವರು ಸಂಸತ್ ನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಶಾಲಾ ವಿದ್ಯಾರ್ಥಿನಿ ಧನುಶ್ರೀ ಸ್ವಾಗತಿಸಿ, ಉತ್ತಮ್ ಮತ್ತು ಸಾನ್ವಿ ಶೇರಿಗಾರ್ ರವರು ಪರಿಚಯಿಸಿ, ದೇವಿಕಾ ವಾಗ್ಲೆ ಮತ್ತು ಆಗಮ್ ಶೆಟ್ಟಿ ನಿರೂಪಿಸಿ, ಅಭಿನವ್ ಪ್ರಸನ್ನ ವಂದಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲೆ ಜಯಶ್ರೀ ತೆಂಡೂಲ್ಕರ್, ಆಡಳಿತಾಧಿಕಾರಿ ಶೇಕರ್ ಗುಜ್ಜರ್ ಬೆಟ್ಟು, ವ್ಯವಸ್ಥಾಪಕಿ ಅಮಿತಾ ಹೆಗ್ಡೆ, ಸಂಯೋಜಕರಾದ ಉಷಾ ರಾವ್, ಗೀತಾ ಭಟ್ ಮುಂತಾದವರು ಉಪಸ್ಥಿತರಿದ್ದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.