Skip to main content

ಕನ್ನಡ ವೆಲ್ಫೇರ್ ಸೊಸೈಟಿ (ರಿ.) ಘಾಟ್ಕೋಪರ್-ವಜ್ರಸಂಪದ ಮಹೋತ್ಸವ ಆಚರಣೆ ಸೇವೆ-ಸಂಬಂಧಗಳ ಸಂಗಮವೇ ಸಂಸ್ಥೆಯಾಗಿದೆ : ಪ್ರವೀಣ್ ಭೋಜಾ ಶೆಟ್ಟಿ

By February 3, 2026Mumbai News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಫೆ.೦೧: ವಿಭಿನ್ನ ಚಿಂತನೆಯ ಮನುಷ್ಯರ ಒಂದು ಅಪೂರ್ವ ಸಂಗಮವೇ ಸಂಸ್ಥೆಯಾಗಿದೆ. ತಮ್ಮಲ್ಲಿನ ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಿ ಸಮಾಜಕ್ಕೆ ಅನುಕೂಲ ಮಾಡುವ ಕಾಯಕ ಸಂಸ್ಥೆಗಳು ಮಾಡುತ್ತಿರುತ್ತವೆ. ಅದನ್ನೇ ಕನ್ನಡ ವೆಲ್ಫೇರ್ ಸೊಸೈಟಿ ಮಾಡಿ ಈ ಮಟ್ಟಕ್ಕೆ ಬೆಳೆದಿದೆ. ಸಂಸ್ಥೆಯ ಇಂತಹ ಸೇವಾ ಸಾಧನೆ ಪ್ರಶಂಸನೀಯ ಮತ್ತು ಅಭಿನಂದನೀಯ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜಾ ಶೆಟ್ಟಿ ನುಡಿದರು.

ಬೃಹನ್ಮುಂಬಯಿಯಲ್ಲಿನ ಹೆಸರಾಂತ ಸಾಮಾಜಿಕ ಸಂಸ್ಥೆಯಾಗಿದ್ದು ಕಳೆದ ಸುಮಾರು ಅರ್‍ವತ್ತು ವರ್ಷಗಳಿಂದ ಸೇವಾ ನಿರತ ಕನ್ನಡ ವೆಲ್ಫೇರ್ ಸೊಸೈಟಿ (ರಿ.) ಘಾಟ್ಕೋಪರ್ ಇದರ ವಜ್ರಸಂಪದ ಮಹೋತ್ಸವ ಕಳೆದ ಭಾನುವಾರ ದಿನಪೂರ್ತಿಯಾಗಿಸಿ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿನ ಮಧ್ಯಗುತ್ತು ಶ್ರೀಮತಿ ಲೀಲಾವತಿ ಶ್ಯಾಮ ಶೆಟ್ಟಿ ಸ್ಮಾರಕ ವೇದಿಕೆಯಲ್ಲಿ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅಧ್ಯಕ್ಷತೆಯಲ್ಲಿ ಆಚರಿಸಲ್ಪಟ್ಟಿದ್ದು  ಸಂಜೆ ನಡೆಸಲಾದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಬೆಳೆಗಿಸಿ ಸಭಾಕಾರ್ಯಕ್ರಮ ಉದ್ಘಾಟಿಸಿ ಪ್ರವೀಣ್ ಶೆಟ್ಟಿ ನುಡಿದರು.

ಈ ಸಂದರ್ಭದಲ್ಲಿ ಉಡುಪಿ ಟು ಮುಂಬಯಿ ಸಂಸ್ಥೆಯ ಕಾರ್ಯಾಧ್ಯಕ್ಷ ಶಿವಚಂದ್ರ ಶೆಟ್ಟಿ ಉಪಸ್ಥಿತರಿದ್ದು  ವಜ್ರಸಂಪದ ಸ್ಮರಣಿಕೆ ಬಿಡುಗಡೆ ಗೊಳಿಸಿದರು. ಗೌರವಾನ್ವಿತ ಅತಿಥಿಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿನ್, ಸ್ಕೈಟೆಕ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಪನ್ವೇಲ್‌ನ ಕಾರ್ಪೊರೇಟರ್ ಸಂತೋಷ್ ಜಿ.ಶೆಟ್ಟಿ, ಬಿಎಂಸಿ (ಧಾರಾವಿ)  ಕಾರ್ಪೊರೇಟರ್ ಭಾಸ್ಕರ್ ಆರ್.ಶೆಟ್ಟಿ, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ವಜ್ರಸಂಪದ ಸಂಪಾದಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಉಪಸ್ಥಿತರಿದ್ದು ಸಂಘಕ್ಕೆ ಶ್ರೇಯಸ್ಸು ಆಶಿಸಿದರು.

ಉಡುಪಿ ಟು ಮುಂಬಯಿ ಸಂಸ್ಥೆಯ ಕಾರ್ಯಾಧ್ಯಕ್ಷ ಶಿವಚಂದ್ರ ಶೆಟ್ಟಿ (ಪತ್ನಿ ತ್ರಿವೇಣಿ ಶೆಟ್ಟಿ) ಇವರಿಗೆ ವಜ್ರಸಂಪದ ಪ್ರಶಸ್ತಿಯನ್ನಿತ್ತು ಸನ್ಮಾನಿಸ ಲಾಯಿತು. ಹಾಗೂ ಸಿಎ| ವಿಶ್ವನಾಥ ಶೆಟ್ಟಿ (ಪತ್ನಿ ರಮ್ಯ ಶೆಟ್ಟಿ, ಸುಪುತ್ರ ಪಾಥಿವ್ ಶೆಟ್ಟಿ), ನಾರಾಯಣ ಶೆಟ್ಟ ನಂದಳಿಕೆ (ಪತ್ನಿ ಶಾಂತಾ ಶೆಟ್ಟಿ ಜೊತೆಗೂಡಿ) ಸನ್ಮಾನಿಸಿ ಗೌರವಿಸಿದರು ಹಾಗೂ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಸಂಯೋಜಕರುಗಳಾದ ರವೀಂದ್ರನಾಥ್ ಎಂ.ಭಂಡಾರಿ ಇವರಿಗೆ ವಜ್ರ ಸಂಪದ ಗೌರವ ಅರ್ಪಿಸಿ ಅಭಿನಂದಿಸಿದರು.

ವೆಲ್ಫೇರ್ ಸೊಸೈಟಿ ಗೌರವಾಧ್ಯಕ್ಷ ಬಾಬಾ’ಸ್ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ ಬೆಳಿಗ್ಗೆ ಧ್ವಜಾರೋಹಣಗೈದು ನಂತರ ದೀಪ ಪ್ರಜ್ವಲಿಸಿ ಕಲ್ಪವೃಕ್ಷಪುಷ್ಪವನ್ನು ಅರಳಿಸಿ ಕಳಸೆಯಲ್ಲಿಟ್ಟು ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು. ವೆಲ್‌ಕಮ್ ಪ್ಯಾಕೇಜಿಂಗ್ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಗಣೇಶ್ ಕಾಂಚನ್ ಅವರು ಸಂಕೀರ್ತನ ಸತ್ಸಂಗಕ್ಕೆ ಚಾಲನೆಯನ್ನಿತ್ತು ಶುಭಾರೈಸಿದ್ದು ಸಾಂಸ್ಕೃತಿಕ ಸಿಂಚನದೊಂದಿಗೆ ಅದ್ದೂರಿಯಾಗಿ ಚಾಲನೆಗೊಂಡಿತು.

ಅಧ್ಯಕ್ಷ ನವೀನ್ ವಿ.ಶೆಟ್ಟಿ ಇನ್ನಬಾಳಿಕೆ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ನಡೆಸಲ್ಪಟ್ಟ ಸಾಮರಸ್ಯ ಸಭಾ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀರಥ್ ಫೈನಾನ್ಶಿಯಲ್ ಸರ್ವೀಸಸ್‌ನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ದೀಪ ಪ್ರಜ್ವಲಿಸಿ ಸಭಾ ಸಂಭ್ರಮಕ್ಕೆ ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಗಳಾಗಿ ಬಂಟ್ಸ್ ಸಂಘ ಮುಂಬಯಿ ಉನ್ನತ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಸಿಎ| ವಿಶ್ವನಾಥ ಶೆಟ್ಟಿ, ಮುಲುಂಡ್ ಬಂಟ್ಸ್ ಮಾಜಿ ಅಧ್ಯಕ್ಷ ಶಾಂತರಾಮ್ ಬಿ.ಶೆಟ್ಟಿ, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್.ದೇವಾಡಿಗ, ಬೊಂಬೇ ಬಂಟ್ಸ್ ಅಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಉಪಸ್ಥಿತರಿದ್ದು ಶುಭ ಕೋರಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಸೊಸೈಟಿಯ ಉಪಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ತಿಮ್ಮ ಎಸ್.ದೇವಾಡಿಗ, ಗೌ| ಕೋಶಾಧಿ ಕಾರಿ ಹರೀಶ್ ಎಂ.ಶೆಟ್ಟಿ, ಜೊತೆ ಕಾರ್ಯದರ್ಶಿ ರಾಮಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಶಂಕರ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಸುಜಲಾ ಎ.ಶೆಟ್ಟಿ, ಯುವ ವಿಭಾಗಧ್ಯಕ್ಷ ಕಾರ್ತಿಕ್ ಪಿ.ಶೆಟ್ಟಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರನೇಕರು, ಡಾ| ಜಿ.ಪಿ ಕುಸುಮಾ, ಕೊಡುಗೈದಾನಿಗಳು ಸೇರಿದಂತೆ ಹಾಜರಿದ್ದು ಸಂಘದ ಪರವಾಗಿ ಗೌರವಿಸಲಾಯಿತು.

ವಜ್ರಮಹೋತ್ಸವದ ಅಂಗವಾಗಿ ಸಂಕೀರ್ತನ ಸತ್ಸಂಗ, ಧಾರ್ಮಿಕ ಧನ್ಯತೆ ನಡೆಸಲಾಗಿದ್ದು, ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಗಾನಗೈದು ಪೂಜಾ ನೃತ್ಯ, ಸ್ವಾಗತ ಪುಷ್ಪಾರ್ಪಣೆ, ಸಾಂಪ್ರದಾಯಿಕ ಸಂಪನ್ನತೆ ನಡೆಸಲಾಗಿ ಕಾರ್ಯಕ್ರಮ ಆದಿಗೊಳಿಲಾಯಿತು. ಸೊಸೈಟಿಯ ಸಾಧನೆಯನ್ನು ಸಾಕ್ಷ ಚಿತ್ರದ ಮೂಲಕ ಭಿತ್ತರಿಸಲಾಯಿತು. ವಿದುಷಿ ಮಾನಸಿ ಸುಧೀರ್ ಕೊಡೆವೂರು ತಂಡವು ನಾರಸಿಂಹ ನೃತ್ಯ ರೂಪಕ ಅಪರೂಪದ ಅಪರಂಜಿ, ಸೌಂದರ್ಯ ಪ್ರದರ್ಶನ, ಶೃಂಗಾರ ರಸಿಕತೆ, ನಾರಾಯಣ ಶೆಟ್ಟ ನಂದಳಿಕೆ ರಚಿಸಿ ನಿರ್ದೇಶಿಸಲ್ಪಟ್ಟ ‘ಮದ್ಮೆದ ಕಾಕಜಿ’, ಅಶೋಕ ಪಕ್ಕಳ ರಚಿಸಿದ ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶಿತ ‘ಕಥೆನಾ-ವ್ಯಥೆನಾ’ ಹಾಸ್ಯ ಪ್ರಹಸನ ನಡೆಸಲ್ಪಟ್ಟಿತು. ಕರ್ನೂರು ಮೋಹನ್ ರೈ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಮಲ್ಲಿಕಾ ಶೆಟ್ಟಿ ಮತ್ತು ತಾರಾ ರೈ ಪ್ರಾರ್ಥನೆಯನ್ನಾಡಿದರು. ನವೀನ್ ಶೆಟ್ಟಿ ಇನ್ನಬಾಳಿಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ತಿಮ್ಮ ಎಸ್. ದೇವಾಡಿಗ ಸಂಘದ ವರದಿ ವಾಚಿಸಿದರು. ಸುಜಲಾ ಎ.ಶೆಟ್ಟಿ ಮಹಿಳಾ ವಿಭಾಗದ ಬಗ್ಗೆ ತಿಳಿಸಿದರು. ಅಶೋಕ ಪಕ್ಕಳ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.