Skip to main content
www.kallianpur.com | Email : kallianpur7@gmail.com | Mob : 9741001849

ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ನಲ್ಲಸೋಫರಾ ; ಕನ್ಯಾಮರಿಯಮ್ಮ ಜನ್ಮೋತ್ಸವ.

By September 9, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

 ಮುಂಬಯಿ, ಸೆ.೦೯: ನಲ್ಲಸೋಫರಾ ಪೂರ್ವದ ಸೆಂಟ್ರಲ್ ಪಾರ್ಕ್‌ನಲ್ಲಿನ ಸೈಂಟ್ ಫ್ರಾನ್ಸಿಸ್ ದೆ’ಸಾಲ್ಸ್ ಇಗರ್ಜಿ ಯಲ್ಲಿನ ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ೨೦೨೪ನೇ ವಾರ್ಷಿಕ ಕನ್ಯಾ ಮಾತೆ ಮರಿಯಮ್ಮ ಅವರ ಹುಟ್ಟುಹಬ್ಬ ‘ಮೋಂತಿ ಫೆಸ್ತ್’ನ್ನು ಕಳೆದ ಆದಿತ್ಯವಾರ ಪ್ರಕೃತಿಮಾತೆಯ ಸ್ಮರಣೆಯೊಂದಿಗೆ ವಿಜೃಂಭನೆಯಿಂದ ಆಚರಿಸಿತು.

ಧರ್ಮಗುರು ರೆ| ಫಾ| ಸಂತೋಷ್ ಸಾಲ್ವಿ  ಅವರು ದವಸ-ಧಾನ್ಯ, ತರಕಾರಿಗಳನ್ನು ಆಶೀರ್ವಾದಿಸಿ ನೆರೆದ ಭಕ್ತಾದಿ ಗಳಿಗೆ ವಿತರಿಸಿ ಹೊಸ ಫಸಲಿನಿಂದ ಸಿದ್ಧಪಡಿಸಿದ ಶುದ್ಧ ಶಾಖಾಹಾರಿ ಭೋಜನ ಆಶೀರ್ವದಿಸಿದರು.

ಅಸೋಸಿಯೇಶನ್‌ನ ಅಧ್ಯಕ್ಷ  ಹ್ಯಾರಿ ಬಿ.ಕುಟಿನ್ಹೋ ಕಾರ್ಯಕ್ರಮ ನಿರೂಪಿಸಿ ಹಬ್ಬದ ಆಚರಣೆ ಕುರಿತು ತಿಳಿಸಿದರು. ಸಮಿತಿ ಸದಸ್ಯರುಗಳಾದ ರೊನಿ ಪಾಯ್ಸ್, ರೋಯ್ಗ್‌ಟನ್ ಕಾಖ,  ಡೈನಾ ಮೊರಾಯಸ್, ಲವಿನಾ ಡಿಸೋಜಾ, ಹಿಲ್ಡಾ  ಡಿಸೋಜಾ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದು ದೇವಮಾತೆಯ ಜನ್ಮೋತ್ಸವದ ಯಶಸ್ಸಿಗೆ ಶ್ರಮಿಸಿದರು. ಶುದ್ಧೀಕೃತ ಭತ್ತದ ತೆನೆಯ ಸಂಪ್ರಾದಾಯಿಕ ಹೊಸ ಊಟದೊಂದಿಗೆ ಹಬ್ಬವು ಸಮಾಪನ ಗೊಂಡಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.