
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.೦೬: ಉಪನಗರ ಅಂಧೇರಿ ಮರೋಲ್ ಇಲ್ಲಿನ ಸೈಂಟ್ ಜೋನ್ ಎವಂಜಲಿಸ್ಟ್ ಚರ್ಚ್ನಲ್ಲಿ ಸೇವಾ ನಿರತ ಸೈಂಟ್ ಜೋನ್ ಕೊಂಕಣಿ ಸಮುದಾಯ್ (ಎಸ್‌ಜೆಕೆಎಸ್) ಬಡವರ ಆರೋಗ್ಯನಿಧಿ ಸಹಾಯರ್ಥ ಇಂದಿಲ್ಲಿ ಬೆಳಿಗ್ಗೆ ಅಂಧೇರಿ ಪೂರ್ವದ ಚಕಲಾ ಇಲ್ಲಿನ ಪಿವಿಆರ್ ಸಿನಿಮಾ ಪ್ರಸಿದ್ಧ ಸಂಗಮ್ ಚಿತ್ರಮಂದಿರದಲ್ಲಿ `ಫೊಂಡಾಚೊ ಮಿಸ್ತೆರ್’ ಕೊಂಕಣಿ ಚಲನಚಿತ್ರ (ಸಿನಿಮಾ) ಪ್ರದರ್ಶಿಸಿತು.
ಕಾರ್ಯಕ್ರಮದಲ್ಲಿ ಅಂಧೇರಿ ಪೂರ್ವದ ಮರೋಲ್ ವಿಜಯನಗರದಲ್ಲಿನ ವಿನ್ಸೆಂಟ್ ದೆ ಪಲ್ಲೋಟ್ಟಿ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ವಿಕ್ಟರ್ ಮಾರ್ಟಿಸ್, ಫಾ|ಆ್ಯಂಡ್ರೂ ಆಳ್ವ, ಗ್ಯಾಬ್ರಿಯಲ್ ಇಲೆಕ್ಟ್ರಿಕಲ್ ಪ್ರೆೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಗ್ಯಾಬ್ರಿಯಲ್ ಮೆಂಡೋನ್ಸಾ ಬೆಳ್ಮಣ್, ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್‌ನ ಅಧ್ಯಕ್ಷ ವಾಲ್ಟರ್ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ), ಗ್ಲೆನ್ ಇಲೆಕ್ಟ್ರಿಕಲ್ ಪ್ರೆೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಜೆರಿ ಲೂಯಿಸ್ ಬೆಳ್ಮಣ್, ಡೆನ್‌ರಾಯ್ ಎಸ್ಟೇಟ್ ನಿರ್ದೇಶಕ ಪಾವ್ಲ್ ಡಿಸೋಜಾ, ವಲೇರಿಯನ್ ಲೋಬೊ ನಕ್ರೆ (ಚಕಲಾ) ಮತ್ತಿತರ ಗಣ್ಯರು ಉಪಸ್ಥಿತರಿದ್ದು ಆರೋಗ್ಯನಿಧಿಯ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರದ ಪ್ರಧಾನ ನಿರ್ಮಾಕತ್ವ, ನಿರ್ದೇಶನ ರಾಯನ್ ಫೆರ್ನಾಂಡಿಸ್ (ಮ್ಯಾಗ್ನೆಟೋ), ನಟ ಲಾಸ್ಟರ್ ಜೋನ್ ನಜ್ರೇತ್, ವಿಲ್ಸನ್ ಪಿಂಟೋ ಕಟೀಲ್, ಸಂಘಟಕ ವಿಲ್ಸನ್ ಪಿಂಟೋ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದು ಎಸ್‌ಜೆಕೆಎಸ್ ಅಧ್ಯಕ್ಷೆ ಸುನೀತಾ ಸುವಾರೆಸ್ ಪುಷ್ಪಗುಚ್ಫಗಳನ್ನಿತ್ತು ಗೌರವಿಸಿದರು.
ರಾಯನ್ (ಫೆರ್ನಾಂಡಿಸ್) ಮ್ಯಾಗ್ನೆಟೋ ಅವರ ಸಂಪಾದನೆ, ರಚನೆ, ನಿರ್ದೇಶನ ಮತ್ತು ಪ್ರಧಾನ ನಿರ್ಮಾಕತ್ವ, ಡಾ| ಮೆಲ್ವಿನ್ ಪೆರ್ನಲ್ ಅವರ ಸಹ ಬರಹವಣಿಗೆ ಹಾಗೂ ಉತ್ಪಾದನಾ ವ್ಯವಸ್ಥಾಪಕತ್ವದಲ್ಲಿ ಆಲ್ವಿನ್ ಸಿಕ್ವೇರಾ ಅವರ ಛಾಯಾಗ್ರಹಣ ನಿರ್ದೇಶಕತ್ವ, ಪ್ರಜೋತ್ ಡೆಸಾ ಅವರ ಸಂಗೀತ ಮತ್ತು ಹಿನ್ನೆಲೆ ಗೆರೆಯೆಳೆಯೊಂದಿಗೆ ರೋಶ್ ಫೆರ್ನಾಂಡಿಸ್ ಧ್ವನಿ ವಿನ್ಯಾಸ ಮತ್ತು ಲೆಕ್ಸ್ಸಾ ಲೈಟಿಂಗ್ಸ್ ಸಹಯೋಗದೊಂದಿಗೆ ರಾಯನ್ ಮ್ಯಾಗ್ನೆಟೋ ಫಿಲ್ಮ್ಸ್ಸ ಪ್ರಸ್ತುತಿಯಲ್ಲಿ ಮೂಡಿ ಬಂದಿರುವ `ಫೊಂಡಾಚೊ ಮಿಸ್ತೆರ್’ ಕೊಂಕಣಿ ಸಿನಿಮಾ ಪ್ರದರ್ಶಿಸಲ್ಪಟ್ಟಿತು.
ಕಾರ್ಯಕ್ರಮದಲ್ಲಿ ಎಸ್‌ಜೆಕೆಎಸ್ ಉಪಾಧ್ಯಕ್ಷೆಯರುಗಳಾದ ಹಿಲ್ಡಾ ಪಿರೇರಾ ಮತ್ತು ಜೆಸ್ಸಿ ಫೆರ್ನಾಂಡಿಸ್, ಗೌರವ ಕಾರ್ಯದರ್ಶಿ ಲವಿನಾ ಪಡಿಂಜರತಲ, ಜತೆ ಕಾರ್ಯದರ್ಶಿ ಜಾನ್ ಲೋಬೋ, ಕಾನೂನು ಸಲಹೆಗಾರ ಲಾರೆನ್ಸ್ ಡಿಸೋಜಾ ಕೆಮ್ಮಣ್ಣು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಡ್ವಿನ್ ಆಗಸ್ಟಿನ್ ಸುವಾರೆಸ್, ಥೋಮಸ್ ಪಿರೇರಾ, ಜೇಮ್ಸ್ ಪ್ರಕಾಶ್ ಡೆಸಾ, ಆಲಿಸ್ ಬ್ಯಾಪ್ಟಿಸ್ಟ್ ಡಿ’ಸೋಜಾ, ಪ್ರೇಮಾ ಪ್ರಮೀಳಾ ಯಾಳಂಗಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು. ಗ್ಲೆನ್ ಡಾಯಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕ್ಲಾಡಿ ಫ್ರಾನ್ಸಿಸ್ ಮೊಂತೆರೋ ವಂದಿಸಿದರು.
Thank you for the Article 🙂