Skip to main content
www.kallianpur.com | Email : kallianpur7@gmail.com | Mob : 9741001849

ಮಂಗಳೂರು ವಿವಿ ಉಪಕುಲಪತಿ ಪ್ರೊ| ಪಿ.ಎಲ್.ಧರ್ಮ ಅವರಿಗೆ ಸನ್ಮಾನ.

By September 2, 2024News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, (ಆರ್‌ಬಿಐ), ಸೆ.೦೧: ಕಾಫಿ ತೋಟದಲ್ಲಿ ದಿನಗೂಲಿ ನೌಕರ ಪುತ್ರನೊಬ್ಬ ಮಂಗಳೂರು ವಿಶ್ವವಿದ್ಯಾ ಲಯದ ವಿಸಿ ಆಗುವ ಹಿಂದೆ ವಿದ್ಯೆ ಕಲಿಸಿದ ಗುರುಗಳ ಮಾರ್ಗದರ್ಶನ, ಬೆಂಬಲದಿಂದ  ಸಾಧ್ಯವಾಗಿದೆ ಎಂದು ಮಂಗಳೂರು ವಿವಿಯ ಉಪ ಕುಲಪತಿ ಪ್ರೊ| ಪಿ.ಎಲ್.ಧರ್ಮ ಹೇಳಿದರು.

ಅವರು ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕುಲಪತಿ ಹಾಗೂ ಅವರ ಶಿಕ್ಷಕರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯದಲ್ಲಿ ಶಿಕ್ಷಕರು ನೀಡಿದ ವಿದ್ಯೆ, ಮಾರ್ಗದರ್ಶನಗಳು ನನ್ನ ಬದುಕಿನ ದಾರಿ ಯನ್ನು ಬೆಳಗಿಸಿದೆ ಎಂದರು.

ಮಂಗಳೂರು ವಿವಿಯ ಕುಲಪತಿ ಪ್ರೊ| ಪಿ.ಎಲ್. ಧರ್ಮ ಅವರ ಹೆಸರು ಚಂದ್ರ ಎನ್ನುವುದಿತ್ತು ಎಂದು ಅವರು ಮರ್ಗೊಲಿಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಅವರ ತರಗತಿಯಲ್ಲಿ ನಾಲ್ಕು ಮಂದಿ ಚಂದ್ರ ಹೆಸರಿನ ವಿದ್ಯಾರ್ಥಿಗಳಿದ್ದರು. ಅದರಲ್ಲಿ ಚಂದ್ರ ಉಳಿದವರಿಗಿಂತ ಹೆಚ್ಚು ಅಂಕ ಪಡೆಯುತ್ತಿದ್ದ ಇದನ್ನು ಗಮನಿಸಿದ ಶಿಕ್ಷಕ ಕೃಷ್ಣ ಭಟ್ ತಾಯಿಯ ಬಳಿ ಬಂದು ಮುಂದೆ ಕಲಿಯುವ ಚಂದ್ರನ ಅಂಕ ಮತ್ತೆ ಯಾರಿಗೂ ಹೋಗುವ ಸಾಧ್ಯತೆ ಅವನ ಹೆಸರನ್ನು ಬದಲಾಯಿಸಬೇಕು ಎಂದು ಸೂಚನೆ ಕೊಟ್ಟಿದ್ದರು. ಇದನ್ನು ಒಪ್ಪಿದ ತಾಯಿ ಧರ್ಮಸ್ಥಳಕ್ಕೆ ಬಂದು ಚಂದ್ರನ ಹೆಸರಿಗೆ ಬದಲು ಧರ್ಮ ಎಂದು ಹೆಸರು ನೀಡಿದರು. ಮುಂದೆ ಅದುವೇ ಖಾಯಂ ಆಯಿತು ಎಂದು ಪ್ರೊ| ಪಿ.ಎಲ್. ಧರ್ಮ ತಮ್ಮ ಹೆಸರಿನ ಬದಲಾವಣೆಯ ಮಾಹಿತಿ ನೀಡಿದರು.

ಈ ಸಂದರ್ಭ ಪ್ರೊ| ಪಿ.ಎಲ್ ಧರ್ಮ ಅವರಿಗೆ ಪ್ರಾಥಮಿಕ ಶಾಲೆಯಲ್ಲಿ ಗುರುಗಳಾಗಿದ್ದ ಕೃಷ್ಣ ಭಟ್ ದಂಪತಿಗಳನ್ನು ಹಾಗೂ ಪಿಯುಸಿಯಲ್ಲಿ ಉಪನ್ಯಾಸಕರಾಗಿದ್ದ ಎಲ್ವಿರಾ ಫಿಲೋಮಿನಾ ಅವರನ್ನು  ವಿಸಿಗಳ ಜತೆಯಲ್ಲಿ ಸನ್ಮಾನಿಸ ಲಾಯಿತು. ಈ ಸಂದರ್ಭ ಮೀನುಗಾರಿಕಾ ವಿವಿಯ ಪ್ರಾಧ್ಯಾಪಕ ಡಾ| ಶಿವಕುಮಾರ್ ಮಗದ,  ನಿವೃತ್ತ ಪ್ರಾಧ್ಯಾಪಕ ಶಿವಪ್ರಕಾಶ್, ಕೆ.ಕೆ. ಪೇಜಾವರ ಸೇರಿದಂತೆ ನಾನಾ ಗಣ್ಯರು ಮಾತನಾಡಿದರು. ಪಿಯು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕರ ಮಕ್ಕಳ ಹೆತ್ತವರನ್ನು ಸನ್ಮಾನಿಸಲಾಯಿತು.  ಪ್ರಾಪ್ತಿ ಪುರುಷೋತ್ತಮ ಪ್ರಾರ್ಥಿಸಿದರು. ಕಿಟ್ಟೆಲ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ವಿಠಲ್ ಎ. ಕಾರ್ಯಕ್ರಮ ನಿರೂಪಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.