
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.31: ಬ್ಯಾಂಕ್‌ನ ಶಾಖೆಯನ್ನು ಸ್ಥಳಾಂತರಿಸುವುದು ಅತ್ಯಂತ ಕಷ್ಟಕರ ಹಾಗೂ ಜವಾಬ್ದಾರಿಯುತ ಕೆಲಸವಾಗಿದೆ. ಸ್ಥಳಾಂತರ ಪ್ರಕ್ರಿಯೆಯು ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳಿಂದ ಕೂಡಿ ಜಾಗರೂಕತೆಯಿಂದ ನೆರವೇರಿಸ ಬೇಕಾಗುತ್ತದೆ. ಬ್ಯಾಂಕಿಂಗ್ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಯಾವುದೇ ಅಡಚಣೆ ಉಂಟಾಗದಂತೆ ಶಾಖೆ ಸ್ಥಳಾಂತರ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಯೋಚಿಸಿಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಅತ್ಯಂತ ಗೌರವ, ವಿಶ್ವಾಸಕ್ಕೆ ಪಾತ್ರವಾದ ಮಾಡೆಲ್ ಬ್ಯಾಂಕ್ ಸುಸಂಘಟಿತ ಹಾಗೂ ಗ್ರಾಹಕ ಸೇವೆಗೆ ಧ್ವನಿಯಾದ ಬ್ಯಾಂಕ್ ಆಗಿದ್ದು, ಘಾಟ್ಕೋಪರ್ ಶಾಖೆ ಬ್ಯಾಂಕ್‌ನ ಅಗ್ರಗಣ್ಯ ಶಾಖೆಗಳಲ್ಲಿ ಒಂದಾಗಿದೆ. ದೈನಂದಿನ ವ್ಯವಹಾರ ಹಾಗೂ ಗ್ರಾಹಕರ ಸೇವೆಯಲ್ಲಿ ಮಹತ್ವದ ಪಾತ್ರವಹಿಸಿದ ಮಾಡೆಲ್ ಬ್ಯಾಂಕ್ ಜನಸ್ನೇಹಿ ಹಣಕಾಸು ಸಂಸ್ಥೆಯಾಗಿದೆ ಎಂದು ಮಾಡೆಲ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಡೆಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ (ಶೆಡ್ಯೂಲ್ಡ್ ಬ್ಯಾಂಕ್) ತನ್ನ ಸ್ಥಳಾಂತರಿತ ಘಾಟ್ಕೋಪರ್ ಪೂರ್ವದ ಶಾಖೆಯನ್ನು ಇಂದಿಲ್ಲಿ ಸೋಮವಾರ ಪೂರ್ವಾಹ್ನ ಸ್ಥಾನೀಯ ಪಂತ್ ನಗರದ ಮ್ಹಾಡಾ ಲೇಔಟ್‌ನ ಶುಭಂ ಅವೆನ್ಯೂ ಕಟ್ಟಡದಲ್ಲಿ ಶುಭಾರಂಭಗೊಳಿಸಿದ್ದು, ಆಲ್ಬರ್ಟ್ ಡಿ’ಸೋಜಾ ರಿಬ್ಬನ್ ಕತ್ತರಿಸಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಶಾಖೆ ಸ್ಥಳಾಂತರದ ವೇಳೆ ಗ್ರಾಹಕರಿಗೆ ಯಾವುದೇ ಅಸೌಕರ್ಯ ವಾಗದಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಗ್ರಾಹಕರಿಗೆ ಸುಧಾರಿತ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಶಾಖೆ ಸ್ಥಳಾಂತರದ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಗಮ ಮತ್ತು ಪರಿಣಾಮಕಾರಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದ್ದು, ಬ್ಯಾಂಕ್ ಪರಿವಾರದ ಸಮನ್ವಯದ ಪ್ರಯತ್ನದಿಂದ ತ್ವರಿತ ಮತ್ತು ಅನುಕೂಲಕರ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಘಾಟ್ಕೋಪರ್ ಪೂರ್ವದ ಬಾಲಯೇಸು ಸಮರ್ಪಿತ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಸವಿಯೋ ಡಿ’ಸೋಜಾ ದೀಪ ಬೆಳಗಿಸಿ ವಿಧ್ಯುಕ್ತವಾಗಿ ಚಾಲನೆಯನ್ನಿತ್ತು ಶಾಖೆಯನ್ನು ಆಶೀರ್ವಾದಿಸಿ ಶುಭಶಂಸನೆ ಗೈದರು. ಬ್ಯಾಂಕ್‌ನ ಉಪಾಧ್ಯಕ್ಷ ಮ್ಯಾಕ್ಸಿಮ್ ಐ.ಪಿಂಟೋ, ಪ್ರಧಾನ ಪ್ರಬಂಧಕ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೆನ್ರಿ ಬಿ.ಕ್ವಾಡ್ರಸ್, ನಿರ್ದೇಶಕರು, ಉನ್ನತಾಧಿಕಾರಿಗಳು, ಗ್ರಾಹಕರೂ ದೀಪಹಚ್ಚಿ ಶುಭಾರೈಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ನಿರ್ದೇಶಕರುಗಳಾದ ಸಿಎ| ಪೌಲ್ ನಝರೆತ್, ಅಬ್ರಹಾಂ ಕ್ಲೇಮೆಂಟ್ ಲೊಬೋ, ನ್ಯಾಯವಾದಿ ಪಿಯುಸ್ ವಾಸ್, ತೋಮಸ್ ಡಿ.ಲೋಬೊ, ಜೆರಾಲ್ಡ್ ಕರ್ಡೋಜಾ, ಸಂಜಯ್ ಶಿಂಧೆ, ಹಿಲಾರಿ ಎಲ್.ಮೆಂಡೋನ್ಸಾ, ನ್ಯಾಯವಾದಿ ಫಿಯೋನಾ ಎಂ.ನಝರೆತ್, ಆಶಾ ಎಸ್. ಡಿ’ಸೋಜಾ ಮತ್ತು ಆಡಳಿತ ಮಂಡಳಿ ಸದಸ್ಯ ಜೂಡ್ ಪಿ.ಲೋಬೊ, ಉಪ ಪ್ರಧಾನ ಪ್ರಬಂಧಕ ವಿನ್ಸೆಂಟ್ ಡಿಕುನ್ಹಾ, ಸಹಾಯಕ ಪ್ರಧಾನ ಪ್ರಬಂಧಕರುಗಳಾದ ಝೆನೊನ್ ಡಿಕ್ರೂಜ್, ರತ್ನಾಕರ್ ಶೆಟ್ಟಿ, ಮುಖ್ಯ ಪಾಲನಾ ಅಧಿಕಾರಿ ದಿಗಂಬರ್ ಪ್ರಭು ತೆಂಡೂಲ್ಕರ್ ಮತ್ತು ಉನ್ನತಾಧಿಕಾರಿಗಳು, ಇತರ ಶಾಖೆಗಳ ಮುಖ್ಯಸ್ಥರು ಹಾಜರಿದ್ದು ಬಿಲ್ಡರ್ ಪ್ರತಿನಿಧಿ ಆಶ್ವಿನ್ ಮಾಲ್ದೆ ಅವರನ್ನು ಗೌರವಿಸಲಾಯಿತು.
ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಮುಂದಾಳುಗಳಿಂದ ದಿ. ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದಾಗಿಸಿ ಸ್ಥಾಪಿಸಿ ಸದ್ಯ ಬೃಹನ್ಮುಂಬಯಿಯಲ್ಲಿ ಮಾಡೆಲ್ ಬ್ಯಾಂಕ್ ಎಂದೆಣಿಸಿ 110ನೇ ವರ್ಷದ ಸೇವೆಯಲ್ಲಿರುವ ಅತ್ಯಂತ ಪ್ರಾಚೀನ ಹಣಕಾಸು ಸಂಸ್ಥೆಯಾಗಿದೆ. ಗ್ರೇಶಿ ಡಿ’ಸೋಜಾ, ಮೋನಿಕಾ ಡಿ’ಕೋಸ್ಟಾ, ಐಡಾ ರೋಚ್, ವಿನ್ಸೆಂಟ್ ಕಾಸ್ತೇಲಿನೋ, ಸದಾನಂದ ಶೆಟ್ಟಿ (ಸಾಯಿಲೀಲಾ ಹೊಟೇಲ್), ಸದಾಶಿವ ಶೆಟ್ಟಿ (ಕುನಾಲ್ ರೆಸ್ಟೋರೆಂಟ್), ಪ್ರವೀಣ್ ನಾಡಾರ್, ರೆನಿಟಾ ಡಿ’ಸೋಜಾ ಸೇರಿದಂತೆ ಅನೇಕ ಗ್ರಾಹಕರು ಉಪಸ್ಥಿತರಿದ್ದು, ಜೋಶ್ಲಿನ್ ಡಿ’ಸೋಜಾ ಬೈಬಲ್ ವಾಚಿಸಿದರು. ಸಿಂತಿಯಾ ಸಿಕ್ವೇರಾ ವಿಶ್ವಾಸ್ಥ ಪ್ರಾರ್ಥನೆಗೈದರು. ಹೆಚ್‌ಆರ್ ಪ್ರಬಂಧಕಿ ಕ್ಯಾಂಡಿ ಫೆರ್ನಾಂಡಿಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಕ್ಲೇವ್ ಸಿಕ್ವೇರಾ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.