Skip to main content
www.kallianpur.com | Email : kallianpur7@gmail.com | Mob : 9741001849

ಮುಂಬಯಿ ವಿವಿ ಕನ್ನಡ ವಿಭಾಗ-ಕಾರ್ನಾಡ್ ಪ್ರತಿಷ್ಠಾನದಿಂದ ಪ್ರೊ| ಕೆ.ಜಿ.ಕುಂದಣಗಾರ ಸಂಸ್ಮರಣೆ ಮುಂಬಯಿ ಕನಸುಗಳ ಸಂಸ್ಕ್ರತಿಯ ಮಹಾಸಾಗರವಾಗಿದೆ : ಯು. ವೆಂಕಟ್ರಾಜ್.

By March 19, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.೦೯: ನಮ್ಮ ಹಿರಿಯರು ಮುಂಬಯಿಗೆ ಹೊರಟಾಗ ಹುಟ್ಟೂರಿನಿಂದ ಬೀಜ ತಂದು ಇಲ್ಲಿ ಬಿತ್ತಿರ ಬೇಕು. ಹಾಗಾಗಿ ಇದೊಂದು ಮಾರ್ಷಲ್ ಕರ್ನಾಟಕವಾಗಿದ್ದು ಇಲ್ಲಿನ ಕನ್ನಡಿಗರಲ್ಲಿನ ಒಲವು ನಿಖರ ಮತ್ತು ಆಳವಾಗಿ ಸೇರಿಕೊಂಡು ಬಿಟ್ಟಿದೆ. ಮುಂಬಯಿ ಒಂದು ಕನಸುಗಳ ಮೇಲಿರುವ ಸಂಸ್ಕ್ರತಿಯ ಮಹಾ ಸಾಗರವಾಗಿದೆ. ನಮ್ಮ ಮನ ಕರ್ನಾಟಕವನ್ನು ನೆನೆದಾಗವೆಲ್ಲ ಈ ಸಂಸ್ಥೆಗಳು ಹುಟ್ಟಿದ ನೆಲ, ನುಡಿ ಇವುಗಳನ್ನು ನೆನೆದು ಆಸ್ಪದ ನೀಡುತ್ತದೆ. ನಮ್ಮ ಕರ್ನಾಟಕದ ಮಡಿಲಿಗೆ ಕೆರೆದೊಯ್ಯುತ್ತದೆ. ಹಾಗಾಗಿ ಇಂತಹ ಸಾಂಸ್ಕ್ರತಿಕ, ಸಾಹಿತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ವಿಶೇಷ ಅನುಭವ ಆಗುತ್ತಿದೆ. ಮುಂಬಯಿ ಗಡಿಬಿಡಿಯ ಹಾಗೂ ನಮ್ಮನ್ನು ಪರಕೀಯ ಗೊಳಿಸುವ ಪರಿಸರದಲ್ಲಿ ಹಠತ್ತಾಗಿ ಬಾಗಿಲು ತೆರೆದು ಆತ್ಮೀಯತೆ ನಿರ್ಮಾಣ ಆಗುವಂತಹ ಭಾವನೆ. ಮುಂಬಯಿಯ ಕನ್ನಡದ ನಂಟನ್ನು ಕಳೆದುಕೊಳ್ಳಲು ಎಷ್ಟು ಸುಲಭವೋ ಅದನ್ನು ಪುನಃ ಬೆಳೆಸಿಕೊಳ್ಳಲು ಅಷ್ಟೇ ಸುಲಭವಾಗಿದೆ. ಮುಂಬಯಿ ಕನ್ನಡಿಗರು ಜಗತ್ತಿನೊಂದಿಗೆ ಸಂಬಂಧ ಮುಂದುವರಿಸಲು ಕನ್ನಡ ಸಂಸ್ಥೆಗಳು ಯಾವಾಗಲೂ ನೆರವಿಗೆವಿದೆ. ಹೀಗಿದ್ದರೂ ಕನ್ನಡಿಗರ ಬಲಿಷ್ಠ ಒಕ್ಕೂಟದ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ ಎಂದು ಮುಂಬಯಿಯಲ್ಲಿನ ಹಿರಿಯ ತಂತ್ರಜ್ಞ, ಅನುವಾದಕ ಯು. ವೆಂಕಟ್ರಾಜ್ ರಾವ್ ತಿಳಿಸಿದರು.

ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ಭೂಗೋಳ ವಿಭಾಗದ ಸಭಾಗೃಹದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರೊ| ಕೆ.ಜಿ ಕುಂದಣಗಾರ ಸಂಸ್ಮರಣೆ, ಡಾ| ವಿಶ್ವನಾಥ ಕಾರ್ನಾಡ್ ಅಭಿನಂದನೆ, ೨೦೨೩ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ವಿಕಾಸ ಪುಸ್ತಕ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಯು.ವೆಂಕಟ್ರಾಜ್ ಮಾತನಾಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಜಾನಪದ ವಿದ್ವಾಂಸ ಡಾ| ಕಾಳೇಗೌಡ ನಾಗವಾರ ಅವರು ಡಾ| ವಿಶ್ವನಾಥ ಕಾರ್ನಾಡ್ ಅವರಿಗೆ ಸನ್ಮಾನಿಸಿ ಅಭಿನಂದನಾ ಗೌರವ ಸಲ್ಲಿಸಿ ಶುಭಾರೈಸಿದರು. ಹಾಗೂ ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ-೨೦೨೩ನ್ನು ರಂಗತಜ್ಞ ಡಾ|ಭರತ್‌ಕುಮಾರ್ ಪೊಲಿಪು ಅವರಿಗೆ ಪ್ರದಾನಿಸಿ ಅಭಿನಂದಿಸಿದರು.

`ಮುಂಬಯಿ ಕನ್ನಡ ಪತ್ರಿಕೋದ್ಯಮ’ ಶೋಧ ಕೃತಿ ಇದರ ಕೃತಿಕಾರ ಡಾ| ದಿನೇಶ ಶೆಟ್ಟಿ ರೆಂಜಾಳ, `ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತದ ಸಾಹಚರ್ಯ’ (ಶೋಧ ಕೃತಿ) ಕೃತಿಕರ್ತೆ ಡಾ| ಶ್ಯಾಮಲಾ ಪ್ರಕಾಶ್, `ನೀಲಿನಕ್ಷೆ’ ಕಾದಂಬರಿ ಕೃತಿಕರ್ತೆ ನ್ಯಾಯವಾದಿ ಅಮಿತಾ ಎಸ್.ಭಾಗ್ವತ್ ಇವರಿಗೆ ವಿಕಾಸ ಪುಸ್ತಕ ಬಹುಮಾನ-೨೦೨೩ನ್ನು ಅತಿಥಿಗಳು ಪ್ರದಾನಿಸಿ ಅಭಿನಂದಿಸಿದರು.

ಡಾ| ವಿಶ್ವನಾಥ ಕಾರ್ನಾಡ್ ರಚಿತ `ನೀಲ ಕಮಲ’ (ಅನುವಾದಿತ ಕಾದಂಬರಿ) ಹಾಗೂ `ಸ್ಪರ್ಶ’ (ಸಾಹಿತ್ಯ ಲೇಖನಗಳ ಸಂಕಲನ) ಎರಡು ಕೃತಿಗಳನ್ನು ಏಕಕಾಲಕ್ಕೆ ಡಾ| ಕಾಳೇಗೌಡ ನಾಗವಾರ ಬಿಡುಗಡೆ ಗೊಳಿಸಿದರು. ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಕೃತಿಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಡಾ| ಕಾರ್ನಾಡ್ ಶಿಕ್ಷಕ, ಸಂಶೋಧಕ, ಸಾಹಿತಿಯಾಗಿ ಅನೇಕ ದಶಕಗಳಿಂದ ಮುಂಬಯಿ ಕನ್ನಡಿಗರಿಗೆ ಪರಿಚಿತರು. ಅವರು ಕನ್ನಡ ಭಾಷೆ, ಸಂಸ್ಕ್ರತಿಗೆ ವಿಶಿಷ್ಟ ಸಾಲನ್ನು ಕಲ್ಪಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಇವರ ಹೆಸರಲ್ಲಿ ನೀಡುವ ಪ್ರಶಸ್ತಿ ಸೂಕ್ತವಾದದ್ದು. ಇಲ್ಲಿನ ಕನ್ನಡಿಗರ ಸಾಧನೆಗಳನ್ನು ಗಮನಿಸಿದರೆ ಮುಂಬಯಿ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಗಳನ್ನು ಅವಿರತವಾಗಿ ಮಾಡುತ್ತಾ ಬಂದಿದ್ದಾರೆ. ಯಾವ ದೃಷ್ಠಿಯಿಂದ ನೋಡಿದರೂ ನೂರಕ್ಕೆ ನೂರು ಧನಾತ್ಮಕ ಚಿಂತನೆಯುಳ್ಳದ್ದೇ ಜಾನಪದವಾಗಿದೆ. ಮಂಗಳಕರವಾದದ್ದೇ  ನಪದವಾಗಿದೆ. ಧನಾತ್ಮಕ ಚಿಂತನೆವಿದ್ದು, ಅಸೂಯೆವಿಲ್ಲದಿದ್ದರೆ ನೂರಾರು ವರ್ಷಗಳನ್ನು ಬದುಕಬಹುದು ಮಾತ್ರವಲ್ಲದೆ ನೂರಇಪ್ಪತ್ತು ವರ್ಷಗಳವರೆಗೂ ಕ್ರೀಯಾಶೀಲರಾಗಿರಬಹುದು. ಅನ್ನೋದು ಜಾನಪದ ಚಿಂತನೆಯಾಗಿದೆ. ಇಂತಹ ಮನೋಭಾವವುಳ್ಳ ಮುಂಬಯಿಗೆ ಬಂದವರೆಲ್ಲರೂ ಕ್ರೀಯಾಶಿಲರಾಗಿದ್ದಾರೆ ಎಂದು ಕಾಳೇಗೌಡ ನಾಗವಾರ ಹೇಳಿದರು. ಬರವಣಿಗೆ ಭಗೀರಥ ಪ್ರಯತ್ನವಲ್ಲ. ಅದನ್ನು ಸರಳವಾಗಿ ಕಥೆಗಳಾಗಿ ತಿಳಿಸಲು ಸಾಧ್ಯ. ಈ ಹಿಂದೆ ಶ್ರದ್ಧೆ, ಮನಸ್ಸು ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯವಾಗುವುದು. ಸಾಧಿಸದೆ ಪ್ರಶಸ್ತಿಗಳು ಸಲ್ಲದು. ಸಣ್ಣ ಪಶಸ್ತಿಗಳೇ ಪ್ರೋತ್ಸಾಹ ದಾಯಕವಾಗಿರುತ್ತವೆ ಎಂದು ಡಾ| ವಿಶ್ವನಾಥ ಕಾರ್ನಾಡ್ ಹೇಳಿದರು.

ಭರತ್‌ಕುಮಾರ್ ಮಾತನಾಡಿ ಕರ್ನಾಟಕ ಸಂಘ ವಿಭಾಗಕ್ಕೂ ಅತ್ಯಂತ ನಿಕಟ, ಅವಿನಾಭಾವ ಸಂಬಂಧವಿದೆ. ಮುಂಬಯಿಯಲ್ಲಿ ಗೌರವಗಳನ್ನು ಪಡೆಯಲು ಕಾಣದೇ ಇರುವ ಮುಖಗಳು ಬಹಳಷ್ಟಿದೆ. ನನ್ನ ಕಾಟಕರಂಗದ ಸೇವೆಗೆ ಈ ಪ್ರಶಸ್ತಿ ಸಂದಿದೂ ಅರ್ಥಪೂರ್ಣ ಅಂದು ಕೊಂಡಿದ್ದೇನೆ ಎಂದರು. ನಾನು ಯಾವೊತ್ತೂ ಪ್ರಶಸ್ತಿ ಸನ್ಮಾನಗಳಿಂದ ಹಿಂಜರಿಯುತ್ತೇನೆ. ಈ ಸಮಾಜದಲ್ಲಿ ಬೆಳೆಸುವವರು ಹರಸುವವರು, ಬಳಸುವವರು ಜೀವನದಲ್ಲಿ ಇರ್ತಾರೆ, ಅಂತೆಯೇ ನನ್ನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದವರು ಜಿ.ಎನ್ ಉಪಾಧ್ಯ ಗುರುಗಳು. ಪ್ರಚಾರ ಇಲ್ಲದೆ ಮಾಡುವ ಸೇವೆ ದೇವರ ಸೇವೆಯಾಗಿದೆ ಎಂದು ತಿಳಿದಿದ್ದೇನೆ ಎಂದು ದಿನೇಶ ಶೆಟ್ಟಿ ತಿಳಿಸಿದರು.

ಶ್ಯಾಮಲಾ ಪ್ರಕಾಶ್ ಮಾತನಾಡಿ ಎಲ್ಲ ಸಂತೋಷಗಳನ್ನು ಪದಗಳಲ್ಲಿ ಮಂಡಿಸುವುದು ಕಷ್ಟಕರ. ಕನ್ನಡ ವಿಭಾಗವು ನನಗೆ ವಿದ್ಯಾದಾನ ಮಾಡಿದ ಫಲ ಈ ಪ್ರಶಸ್ತಿಯಾಗಿದೆ. ಭಾರವಲ್ಲದ ಸಂಪತ್ತು ವಿದ್ಯೆಯಾಗಿದ್ದು ಇದನ್ನು ನಿಭಾಯಿ ಸಿದಕ್ಕೆ ಸಂದ ಗೌರವ ಇದಾಗಿದೆ ಎಂದರು. ಈ ಪ್ರಶಸ್ತಿ ನನಗೆ ಸಿಕ್ಕಿದಲ್ಲ, ನನ್ನೊಳಗಿನ ಸಾಹಿತ್ಯಕ್ಕೆ ದೊರೆತಿದೆ. ಚಿಕ್ಕವಳಿರುವಾಗಲೇ ಕಂಡ ಸಾಹಿತಿಯಾಗುವ ಕನಸನ್ನು ಪೂರೈಸಿದಕ್ಕೆ ಮತ್ತು ನನ್ನ ಮುಂಬಯಿಯ ಕನ್ನಡ ಚಟುವಟಿಕೆಗಳಿಗೆ ಸಂದ ಗೌರವವಾಗಿದೆ ಎಂದು ಅಮಿತಾ ಭಾಗ್ವತ್ ನುಡಿದರು.

ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿ ಮಹಾರಾಷ್ಟ್ರದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನ ಪ್ರೊಫೆಸರ್ ಕೆ.ಜಿ ಕುಂದಣಗಾರ ಕನ್ನಡಕ್ಕೆ ಭೀಮಬಲ ನೀಡಿದವರು ಎಂದು ಮುಂಬಯಿಯಲ್ಲಿ ಕನ್ನಡ ಸಾಹಿತ್ಯ ಸಾಧನೆಯ ಅವಲೋಕನಗೈದು ಕುಂದಣಗಾರರ ಸೇವೆಯನ್ನು ಸ್ಮರಿಸಿದರು. ಅವರ ನೆನಹಿನೊಂದಿಗಿನ ಸಂಶೋಧನಾ ಸಾಹಿತ್ಯದ ಸ್ಮರಣಾಗೌರವ ಸಂದ ಡಾ| ಕಾರ್ನಾಡ್ ಶ್ರೇಷ್ಠರು. ಇಂತಹ ಪ್ರಾತಃಸ್ಮರಣೀಯ ಧೀಮಂತ ಚೇತನದ ಸಾಧನೆ ಸ್ಮರಿಸುವ ಕಾರ್ಯಕ್ರಮ ಇದಾಗಿದೆ. ಕನ್ನಡ ವಿಭಾಗದಿಂದ ೯೮ನೇ ಕೃತಿ ಪ್ರಕಟಿಸಲಾಗಿದ್ದು ಶೀಘ್ರವಾಗಿ ಶತಕೃತಿ ಪ್ರಕಾಶಿಸುವ ಹೊಸ್ತಿಲಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ನಾಡ್ ಪ್ರತಿಷ್ಠಾನದ ಕೋಶಾಧಿಕಾರಿ ಶರತ್ ಕಾರ್ನಾಡ್, ಸುಚಿತ್ರಾ ಕಾರ್ನಾಡ್, ಮಾ| ದೇವಾಂಶ್, ರೋಹಿತ್ ಕಾರ್ನಾಡ್, ನಿಲೀಮಾ ರೋಹಿತ್, ಕು| ಆರಾಧ್ಯ, ಪಲ್ಲವಿ ಕಾರ್ನಾಡ್, ಮಿತ್ರಾ ವೆಂಕಟ್ರಾಜ್, ದೇವದಾಸ್ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಓಂದಾಸ್ ಕಣ್ಣಂಗಾರ್, ಪೇಟೇಮನೆ ಪ್ರಕಾಶ್ ಶೆಟ್ಟಿ, ರಾಜು ಶೆಟ್ಟಿ ಕೊಲ್ಯಾರು, ಅಶೋಕ ಎಸ್.ಸುವರ್ಣ, ಕೆ.ವಿ.ಆರ್ ಐತಾಳ್, ಮೋಹನ್ ಮಾರ್ನಾಡ್, ನ್ಯಾಯವಾದಿ ಅಮಿತಾ ಎಸ್.ಭಾಗ್ವತ್, ಸುರೇಂದ್ರ ಮಾರ್ನಾಡ್, ಕಲಾ ಭಾಗ್ವತ್ ಸೇರಿದಂತೆ ಸಾಹಿತ್ಯಾಸಕ್ತರನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಲಾ ಭಾಗ್ವತ್, ಡಾ| ಉಮಾ ರಾಮರಾವ್, ಆಶಾ ಸುವರ್ಣ, ದೇವದಾಸ್ ಶೆಟ್ಟಿ, ವಿದ್ಯಾ ರಾಮಕೃಷ್ಣ, ಕೆ.ವಿ.ಆರ್ ಐತಾಳ್, ವಿದ್ಯಾನಂದ ಎಸ್.ಕರ್ಕೇರಾ ಇವರನ್ನು ಅತಿಥಿಗಳು ಗೌರವಿಸಿದರು. ಕಾರ್ನಾಡ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯಕ್ರಮ ನಿರೂಪಿಸಿ ಆಭಾರ ಮನ್ನಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.