Skip to main content
www.kallianpur.com | Email : kallianpur7@gmail.com | Mob : 9741001849

ನಾರಾಯಣ ಶೆಟ್ಟಿ-ಸರೋಜಿನಿ ಶೆಟ್ಟಿ ಅವರ ೫೮ನೇ ವೈವಾಹಿಕ ವಾರ್ಷಿಕೋತ್ಸವ ಸ್ಮರಣಾರ್ಥ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಆಯೋಜಿತ ೧೨ನೇ ವಾರ್ಷಿಕ ರಕ್ತದಾನ ಶಿಬಿರ.

By May 22, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಮೇ.೨೨: ದುಬಾಯಿನ ಪ್ರತಿಷ್ಠಿತ ಉದ್ಯಮಿ, ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ) ಅಧ್ಯಕ್ಷ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ವಕ್ವಾಡಿ ತಮ್ಮ ಹೆತ್ತವರಾದ ನಾರಾಯಣ ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ಅವರ ೫೮ನೇ ವೈವಾಹಿಕ ವಾರ್ಷಿಕೋತ್ಸವದ ಸ್ಮರಣಾರ್ಥ ೨೦೨೪ನೇ ಸಾಲಿನ ಹನ್ನೆರಡನೇ ವಾರ್ಷಿಕ ರಕ್ತದಾನ ಶಿಬಿರವನ್ನು ಇಂದಿಲ್ಲಿ ಬುಧವಾರ ಗಲ್ಫ್ ರಾಷ್ಟ್ರದ ದುಬಾಯಿ (ಯುಎಇ) ಅಲ್ ಕುಸೈಸ್ ಇಲ್ಲಿನ ಫಾರ್ಚೂನ್ ಪ್ಲಾಜಾ ಹೋಟೆಲ್ ಸಭಾಗೃಹದಲ್ಲಿ ಆಯೋಜಿಸಿತ್ತು.

ಉಡುಪಿ ಜಿಲ್ಲೆಯ ಕುಂದಾಪುರ ಬಾರಕೂರು ವಕ್ವಾಡಿ ಮೂಲತಃ ಪ್ರವೀಣ್‌ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನ ದಂತೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್‌ಗಳ ಉಪಾಧ್ಯಕ್ಷೆ ಕು| ಪ್ರಾಚಿ ಪಿ.ಶೆಟ್ಟಿ ಇವರ ಮುಂದಾಳುತ್ವದಲ್ಲಿ ನಡೆಸ ಲ್ಪಟ್ಟಿತು. ನಾರಾಯಣ್ ದಂಪತಿಯ ದೀರ್ಘಾವಧಿಯ ದಾಂಪತ್ಯ ಜೀವನ ನಮ್ಮೆಲ್ಲರಿರೂ ಆದರ್ಶವಾಗಿದೆ. ೨೦೧೨ ರಲ್ಲಿ ಆರಂಭಿಸಲ್ಪಟ್ಟ ಈ ಶಿಬಿರವನ್ನು ೧೨ ವರ್ಷಗಳಿಂದ ಸತತವಾಗಿ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಫಾರ್ಚೂನ್ ಹೋಟೆಲು ಸಮೂಹವು ಸದಾ ಸಾಮರಸ್ಯದ ಬಾಳಿಗೆ ಪ್ರೇರಕವಾಗಿದ್ದು ಎಲ್ಲರ ಸಹ ಯೋಗದಿಂದ ಇದು ಸಾಧ್ಯವಾಗುತ್ತಿದೆ. ನಾರಾಯಣ್ ದಂಪತಿಗೆ ನಾವು ದೀರ್ಘ ಮತ್ತು ಆರೋಗ್ಯಕರ ಬದುಕು ಬಯಸುತ್ತೇವೆ ಎಂದು ಫಾರ್ಚೂನ್ ಹೊಟೇಲು ಸಮೂಹದ ಪ್ರಧಾನ ಪ್ರಬಂಧಕ ಹರೀಶ್ ಶೆಟ್ಟಿ ಸುರತ್ಕಲ್ ತಿಳಿಸಿದರು.

ದುಬಾಯಿ ಸರಕಾರದ ದುಬಾಯಿ ಬ್ಲಡ್ ಡೋನೇಶನ್ ಸೆಂಟರ್ ನಡೆಸಿದ ಶಿಬಿರದಲ್ಲಿ ಇರ್ಷದ್ ಮೂಡಬಿದ್ರೆ, ಫಾರ್ಚೂನ್ ಸಮೂಹದ ಹೆಚ್‌ಆರ್ ಮ್ಯಾನೇಜರ್ ಸಂದೇಶ್ ಶೆಟ್ಟಿ, ಮಮತಾ ಶೆೆಟ್ಟಿ ಮತ್ತಿತರ ಹಿರಿಯ ಉದ್ಯೋಗಿ ಗಳು, ಕೆಎನ್‌ಆರ್‌ಐ ದುಬಾಯಿ ಫೋರಂನ ಸದಸ್ಯರು, ಫಾರ್ಚೂನ್ ಸಮೂಹದ ಪ್ರಧಾನ ಪ್ರಬಂಧಕರು, ನೌಕರ ವೃಂದ, ಸ್ಥಾನೀಯ ತುಳು-ಕನ್ನಡ, ಕೊಂಕಣಿ, ಕರ್ನಾಟಕ ಸಂಘಗಳ ಮುಖ್ಯಸ್ಥರು, ಸದಸ್ಯರನೇಕರು ಪಾಲ್ಗೊಂಡು ರಕ್ತದಾನಗೈದರು. ವಸಂತ್ ಶೆಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಿ ಶೆಟ್ಟಿ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.