kallianpurdotcom: 9741001849
(ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್ಬಿಐ), ಜ.೨೯: ನೆಬ್ ಮೀಡಿಯಾ ಇಂದಿಲ್ಲಿ ಔಟ್ ಲುಕ್ ಪ್ರಸ್ತುತಿಯ ಬೆಸ್ಟ್ ಡಾಕ್ಟರ್ಸ್ ಮುಂಬಯಿ -೨೦೨೪ ಪಟ್ಟಿ ಪ್ರಕಟಿಸಿದ್ದು ಡಾ| ಸದಾನಂದ ಆರ್.ಶೆಟ್ಟಿ ಬೆಸ್ಟ್ ಡಾಕ್ಟರ್ ಗೌರವಕ್ಕೆ ಪಾತ್ರರಾಗಿದ್ದಾರೆ.
`ಬೆಸ್ಟ್ ಡಾಕ್ಸ್ ಮುಂಬಯಿ- 2024ರ ವಾರ್ಷಿಕ ವೈಶಿಷ್ಟ್ಯತೆಗಳನ್ನು ಪ್ರಸ್ತುತಪಡಿಸಿದ್ದು ಬೃಹನ್ಮುಂಬಯಿ ನಗರದ ಅತ್ಯುತ್ತಮ ಆಯ್ದ ವೈದ್ಯಾಧಿ ಕಾರಿಗಳ ಹೆಸರುಗಳನ್ನು ಇಂದಿಲ್ಲಿ ಪ್ರಕಟಿಸಿದೆ. ಮುಂಬಯಿಯಲ್ಲಿನ ವೈದ್ಯರ ಸಲಹೆಗಾರ ತಂಡದ ಹಾಗೂ ನೆಬ್ ಮೀಡಿಯಾ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಪಟ್ಟಿ ಸಿದ್ಧಗೊಂಡಿದ್ದು ಆ ಪೈಕಿ ಡಾ| ಸದಾನಂದ ಶೆಟ್ಟಿ ಇವರನ್ನು ಬೃಹನ್ಮುಂಬಯಿಯ ಪ್ರಸಿದ್ಧ ವೈದ್ಯಾಧಿಕಾರಿ ಆಗಿ ಆಯ್ಕೆ ಗೊಳಿಸಲಾಗಿದೆ.
ಡಾ| ಸದಾನಂದ ಆರ್.ಶೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಡಾಕ್ಟರೇಟ್ ಇನ್ ಮೆಡಿಕಲ್ (ಹೃದ್ರೋಗ), ಎಂ.ಡಿ (ಮೆಡಿಕಲ್), ಎಫ್ಎಸಿಸಿ, ಎಫ್ಎಸ್ಸಿಎಐ (ಅಮೇರಿಕಾ), ಎಫ್ಸಿಪಿಎಸ್, ಎಫ್ಐಎಸ್ಇ, ಎಫ್ಐಸಿಸಿ, ಎಫ್ಐಸಿಪಿ, ಎಫ್ಸಿಎಸ್ಐ, ಎಫ್ಇಎಸ್ಸಿ ಪದವೀಧರರಾಗಿದ್ದು ದೇಶವಿದೇಶಗಳಲ್ಲಿ ಜನಾನುರೆಣಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಮಂಗಳೂರು ಮೂಲ್ಕಿ ಅತಿಕಾರಿಬೆಟ್ಟು ದೆಪ್ಪಣಿಗುತ್ತು ಮೂಲತಃ ಮುಂಬಯಿಯ ಪ್ರತಿಷ್ಟಿತ ವೈದ್ಯಾಧಿಕಾರಿ ಡಾ| ಸದಾನಂದ ಆರ್.ಶೆಟ್ಟಿ (ಸಯಾನ್) ಇವರು ಲಿಪಿಡ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನಾ ಕಾರ್ಯ ದರ್ಶಿ ಆಗಿರುವರು. ಡಾ| ಡಿ.ವೈ.ಪಾಟೀಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್, ನವಿ ಮುಂಬಯಿ ವಿಶ್ರಾಂತ ಪ್ರಾಚಾರ್ಯ ಆಗಿರುವ ಡಾ| ಸದಾನಂದ್ ಶೆಟ್ಟಿ, ಸೋಮಯ್ಯ ಸೂಪರ್ ಸ್ಪೆಷಾಲಿಟಿ ಇನ್ಸ್ಟಿಟ್ಯೂಟ್ ಮುಂಬಯಿ ಇದರ ಹೃದ್ರೋಗ ವಿಭಾಗದ ನಿರ್ದೇಶಕ ಆಗಿರುವರು.
ಸದಾನಂದ್ ಹೆಲ್ತಿ ಲಿವಿಂಗ್ ಸೆಂಟರ್ ಲಿಮಿಟೆಡ್. ಮುಂಬಯಿ ಇದರ ಸಂಸ್ಥಾಪಕರಾಗಿದ್ದು ಪ್ರಸ್ತುತ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಆಗಿರುವರು. ರೋಗಿಗಳ ವಿದ್ಯಾರ್ಜನಾ ಮತ್ತು ಜೀವನಚರಿತ್ರೆಯ ಪುಸ್ತಕ ಕ್ಲೀವೆಲ್ಯಾಂಡ್ ಹಾಲ್ ಆಫ್ ಫೇಮ್ ಇದರ ಪ್ರಧಾನ ಸಂಪಾದಕರೂ, ಸಿವಿಡಿ ಇಂಡಿಯಾ ಎಂಡ್ ಸಿಸಿಎ ಇಂಟನ್ಯಾಶನಲ್ ಇದರ ಸಂಸ್ಥಾಪಕ, ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಇದರ ಅಧ್ಯಕ್ಷ, ಲಿಪಿಡ್ ಅಸೋಸಿಯೇಷನ್ ಆಫ್ ಇಂಡಿಯಾ ಇದರ ರಾಷ್ಟ್ರೀಯ ಸಲಹೆಗಾರ, ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಎಂಡ್ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಇದರ ಸದಸ್ಯ ಆಗಿಉವರು. ಸದಾನಂದ್ ಜಿ೨ಎಸ್೨ ಫೌಂಡೇಶನ್ ಇದರ ಸಂಸ್ಥಾಪಕ ರಾಗಿದ್ದು ಕಾರ್ಡಿಯಾಲಜಿ ಬುಕ್-೨೦೨೦ರಲ್ಲಿ ಕ್ಲಿನಿಕಲ್ ಪ್ರಕರಣಗಳ ಹೊತ್ತಿಗೆಯ ಸಂಪಾದಕರಾಗಿ ಸೇವಾ ನಿರತರಾಗಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.