Skip to main content
www.kallianpur.com | Email : kallianpur7@gmail.com | Mob : 9741001849

ಮಂಗಳೂರು ವಿವಿ ೪೨ನೆ ಘಟಿಕೋತ್ಸವದಲ್ಲಿ ರೊನಾಲ್ಡ್ ಕೊಲಾಸೊ, ಕೆ.ಪ್ರಕಾಶ್ ಶೆಟ್ಟಿ, ಡಾ| ತುಂಬೆ ಮೊಯ್ದಿನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ.

By June 16, 2024Kannada News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಜೂ.೧೫: ದೇಶವನ್ನು ಆಭಿವೃದ್ಧಿಯ ಪತದತ್ತ ಕೊಂಡೊಯ್ಯಲು ಯುವ ಪದವೀಧರರು ಶಿಕ್ಷಣದ ಜೊತೆ ಜೀವನ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ನೆಲ, ಜಲ, ಅರಣ್ಯ, ವಾಯು ಮಾಲಿನ್ಯ ತಡೆಯಲು ಜೀವನ ಶೈಲಿಯಲ್ಲಿ ಸುಧಾರಣೆ ಮಾಡಿಕೊಳ್ಳಲು ಕರ್ನಾಟಕದ ರಾಜ್ಯಪಾಲ, ವಿಶ್ವವಿದ್ಯಾಲಯಗಳ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

ಇಂದು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ ಸಭಾಂಗಣದಲ್ಲಿ ಹಮ್ಮಿಕೊಂಡ ೪೨ನೆ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಗೆಹ್ಲೋಟ್ ಮಾತನಾಡಿದರು. ರಾಜ್ಯಪಾಲರು ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಡಾ| ರೊನಾಲ್ಡ್ ಕೊಲಾಸೊ, ಹಾಗೂ ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ಹಾಗೂ ಅನುಪಸ್ಥಿತಿಯಲ್ಲಿ ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕ ತುಂಬೆ ಮೊಹಿಯುದ್ಧೀನ್(ಪ್ರತಿನಿಧಿಗೆ) ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಿದರು.

ಪರಿಸರ ಮಾಲಿನ್ಯ ತಡೆಯಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಅನಿವಾರ್ಯವಾಗಿದೆ ಎಂದು ಆರ್ ಐಎಸ್ (ಅಭಿವೃದ್ಧಿಶೀಲ ರಾಷ್ಟ್ರದ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ವಿಭಾಗದ) ಮಹಾ ನಿರ್ದೇಶಕ ಪ್ರೊ| ಸಚಿನ್ ಚತುರ್ವೇದಿ ಘಟಿಕೋತ್ಸವದಲ್ಲಿ ಸುಸ್ಥಿರ ಅಭಿವೃದ್ಧಿಗೆ ಜೀವನ ಶೈಲಿ ಬಗ್ಗೆ ವಿಶ್ವ ವಿದ್ಯಾನಿಲಯದ ಚಿಂತನೆಗಳ ಬಗ್ಗೆ ಘಟಿಕೋತ್ಸವ ಭಾಷಣ ಮಾಡಿದರು.

ಅಭಿವೃದ್ಧಿ ಶೀಲ ದೇಶವಾಗಿರುವ ಭಾರತ ಜಗತ್ತಿನಲ್ಲಿ ವೇಗವಾಗಿ ಆಥಿsðಕ ಬೆಳವಣಿಗೆಯನ್ನು ಹೊಂದುತ್ತಿರುವ ದೇಶವಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುತ್ತದೆ. ದೇಶದ ಅಭಿವೃದ್ಧಿಗೆ ಹವಾಮಾನ ವೈಪರೀತ್ಯ, ಬಡತನ, ಇತರ ಸಮಸ್ಯೆಗಳು ನಮ್ಮ ಮುಂದಿರುವ ಸವಾಲುಗಳಾಗಿವೆ ಎಂದರು.

೨೦೧೯ ಮತ್ತು ೨೦೨೨ ರ ನಡುವೆ, ಸುಸ್ಥಿರ ಬಳಕೆ ಮತ್ತು ಉತ್ಪಾದನೆಗೆ ಬದಲಾವಣೆ ಯನ್ನು ಬೆಂಬಲಿಸುವ ೪೮೫ ನೀತಿ ವಿಧಾನಗಳನ್ನು ೬೨ ದೇಶಗಳು ಮತ್ತು ಯುರೋಪಿಯನ್ ಯೂನಿಯನ್ ವರದಿ ಮಾಡಿದೆ. ಕೃಷಿ, ಸಾರಿಗೆ, ಸಂಗ್ರಹಣೆ, ಸಗಟು ಮತ್ತು ಸಂಸ್ಕರಣೆ ಹಂತದಲ್ಲಿ ಜಾಗತಿಕವಾಗಿ ನಷ್ಟವಾದ ಆಹಾರದ ಶೇಕಡಾವಾರು ಪ್ರಮಾಣವು ೨೦೨೧ರಲ್ಲಿ ೧೩.೨% ಎಂದು ಅಂದಾಜಿಸಲಾಗಿದೆ. ತಂತ್ರಜ್ಞಾನ, ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಹೊಸ ತಂತ್ರಜ್ಞಾನಗಳ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬೇಕಾಗಿದೆ.

ಪ್ರಪಂಚದ ಭವಿಷ್ಯದ ಅಭಿವೃದ್ಧಿ ಪಥ ಮತ್ತು ಭಾರತೀಯ ಆರ್ಥಿಕತೆಯು ಹೆಚ್ಚು ಸಂಕೀರ್ಣವಾಗಿರುವ ಸಾಧ್ಯತೆಯಿದೆ ಎಂದು ಒತ್ತಿ ಹೇಳಬೇಕಾಗಿದೆ. ಇದು ಭವಿಷ್ಯದ ಪೀಳಿಗೆಯು ಅಂತಹ ನಿರ್ಣಾಯಕ ಸವಾಲುಗಳನ್ನು ಎದುರಿಸಲು ಸಮರ್ಥರಾಗಬೇಕಾಗಿರುತ್ತದೆ. ಜಾಗತಿಕವಾಗಿ ಭಾರತದ ಪಾತ್ರವನ್ನು ಯುವಕರು ಅರ್ಥಮಾಡಿಕೊಳ್ಳಬೇಕು. ಈ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಜಿ೨೦ ಯುನಿವರ್ಸಿಟಿ ಕನೆಕ್ಟ್ನ ಕಲ್ಪನೆಯನ್ನು ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಜಿ೨೦ ಕುರಿತು ಜಾಗೃತಿ ಮೂಡಿಸಲು ಮತ್ತು ವಿವಿಧ ಅಂತರಾಷ್ಟ್ರೀಯ ವಿಷಯಗಳ ಕುರಿತು ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ೭೫ ವಿಶ್ವವಿದ್ಯಾಲಯಗಳಲ್ಲಿ ಉ೨೦ ವಿಷಯಗಳ ಕುರಿತು ಉಪನ್ಯಾಸಗಳನ್ನು ಕೈಗೊಳ್ಳಲಾ ಯಿತು ಎಂದೂ ಚತುರ್ವೇದಿ ತಿಳಿಸಿದರು.

ಸಮಾರಂಭದಲ್ಲಿ ಸಹ ಕುಲಾಧಿಪತಿ ಮತ್ತು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಉಪಸ್ಥಿತರಿದ್ದು ಮಾತನಾಡಿ ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ನಮ್ಮನ್ನು ಕಾಡುತ್ತಿದೆ,ಪದವಿ, ಸ್ನಾತಕೋತ್ತರ ಪದವಿ ಪಡೆದವ ರಲ್ಲೂ ನಿರುದ್ಯೋಗದ ಪ್ರಮಾಣ ಹೆಚ್ಚಿದೆ. ಐಟಿ ವಲಯ ದಲ್ಲಿಯೂ ಉದ್ಯೋಗ ಕಡಿತಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸರಕಾರ ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರಕಾರ ಈ ವರ್ಷ ತಾಂತ್ರಿಕ ಶಿಕ್ಷಣದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಶಿಕ್ಷಣದ ಕೌಶಲ್ಯ ತರಬೇತಿ ನೀಡುವ ಅಪ್ರೆಂಟಿಸ್ ಡಿಗ್ರಿ ಕೋರ್ಸ್ ಗಳನ್ನು ಆರಂಭಿಸಲು ನಿರ್ಧರಿಸಿರುವುದಾಗಿ ಸುಧಾಕರ್ ತಿಳಿಸಿದರು.

ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ೧೫೫ ಮಂದಿಗೆ ಪಿ.ಎಚ್.ಡಿ ಪದವಿ (ಕಲೆ-೫೧, ವಿಜ್ಞಾನ -೭೩, ವಾಣಿಜ್ಯ- ೨೬, ಶಿಕ್ಷಣ -೦೫) ಇವರಲ್ಲಿ ೬೦ ಮಹಿಳೆಯರು ಮತ್ತು ೯೫ ಪುರುಷರು. ಈ ಬಾರಿ ೧೮ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ೪ ಅಂತಾರಾ ಷ್ಟ್ರೀಯ ಮಹಿಳಾ ವಿದ್ಯಾರ್ಥಿಗಳು ಪಿ.ಎಚ್. ಡಿ ಪದವಿ ಸ್ವೀಕರಿಸಿದರು. ಇವರಲ್ಲಿ ೬೦ ಮಹಿಳೆಯರು ಮತ್ತು ೫೮ ಚಿನ್ನದ ಪದಕ ಮತ್ತು ೫೭ ನಗದು ಬಹುಮಾನ ಗಳಿದ್ದು, ವಿವಿಧ ಕೋರ್ಸ್ಗಳ ಒಟ್ಟು ೧೬೮ರ‍್ಯಾಂಕ್ ಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ ೭೨ ಮಂದಿಗೆರ‍್ಯಾಂಕ್ ಪ್ರಮಾಣ ಪತ್ರ ನೀಡಲಾಯಿತು.

ವೇದಿಕೆಯಲ್ಲಿ ಕುಲಸಚಿವ (ಆಡಳಿತ) ಕೆ.ರಾಜು ಮೊಗವೀರ ಕುಲಚಿವ (ಪರೀಕ್ಷಾಂಗ), ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಸಂಗಪ್ಪ ವೈ. ವಿಶ್ವ ವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕುಲಪತಿ ಪ್ರೊ| ಪಿ.ಎಲ್.ಧರ್ಮ ಸ್ವಾಗತಿಸಿ ದರು. ಧನಂಜಯ್ ಕುಂಬ್ಳೆ ಮತ್ತು ಪ್ರೀತಿ ಕೀರ್ತಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.