
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.೧೩: ಬಿ.ಎಸ್. ಕೆ.ಬಿ ಅಸೋಸಿಯೇಷನ್ ನ ಶತಮಾನೋತ್ಸವ ನಿಮಿತ್ತ ಹಿರಿಯ ನಾಗರಿಕರ ದಿನಾಚರಣೆ ಕಳೆದ ರವಿವಾರ (ಅ.೦೫) ಆಶ್ರಯ ನೇರೂಲ್ ನಲ್ಲಿ ತುಂಬಾ ವಿಜಂಭೃಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಂಕಣ ರೇಲ್ವೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೆಶಕರಾದ ಸಂತೋಷ ಕುಮಾರ್ ಜ್ಹಾ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವ ಅತಿಥಿ ಮ್ಯಾಂಟಿಕ್ ಸಂಸ್ಥೆಯ ಮಾರಾಟ ಮತ್ತು ಕಾರ್ಯಚಾರಣೆಯ ಪ್ರಮುಖ ಕುಮಾರ್ ಹೆಬ್ಬಾರ್ , ಆರ್ಸಿಲ್ ಸಂಸ್ಥೆಯ ಪ್ರಮುಖ ತಾಂತ್ರಿಕ ಅಧಿಕಾರಿ ಶರದ್ ಪ್ರಸಾದ್, ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ರಾವ್ ಮತ್ತು ಆಶ್ರಯದ ಜೇಷ್ಟ ನಾಗರಿಕರಾದ ಸತ್ಯನಾರಯಣ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂದಿನ ಕಾರ್ಯಕ್ರಮದ ಸೂತ್ರ ಸಂಚಾಲನೆ ಮಾಡುತ್ತಾ ಜಗದೀಶ್ ಆಚಾರ್ಯರು ಅ ದಿನದ ಕಾರ್ಯಕ್ರಮದ ರೂಪ ರೇಷೆಗಳನ್ನು ವಿವರಿಸಿ ದರು. ಆಶ್ರಯದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ರಾದ ಶ್ರೀ ರಾಜಾರಾಮ್ ಆಚಾರ್ಯ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡುತ್ತಾ ಅತಿಥಿಗಳನ್ನು ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಸಭಿಕರನ್ನು ಸ್ವಾಗತಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಂದಾಗಿ ಕಾ ಸಫರ್, ಬೊಲೊವುಡ್ ಸಂಗೀತ, ನಾಟಕ ಮತ್ತು ಹಿಂದಿ ಚಲನ ಚಿತ್ರ ಗಳ ಹಾಡುಗಳ ನೃತ್ಯ ಗಳ ಸಂಗಮವಿತ್ತು. ಜೀವನದ ಮೌಲ್ಯಗಳನ್ನು ಅಳೆಯುವ, ತಿಳಿಯುವ, ಯೌವನದ ಆಶಾವಾದ, ಇಳಿವಯಸ್ಸಿನಲ್ಲಿ ಬರುವ ತಿಳುವಳಿಕೆ ಚಿತ್ರ ಗೀತೆ ಗಳ ಮಾಧ್ಯಮದಿಂದ ಬೆಳಕು ಚೆಲ್ಲುವ ಒಂದು ಪ್ರಯತ್ನ. ಈ ನಾಟಕ ಎಲ್ಲರಿಗೂ ತುಂಬಾ ಮನೋರಂಜನೆ ನೀಡಿತು. ಈ ನಾಟಕದಲ್ಲಿ ೫ ವರ್ಷ ಕೆಳಗಿನಿಂದ ಹಿಡಿದು ೯೦ ವರ್ಷ ಪ್ರಾಯದವರು ಭಾಗವಹಿಸಿದರು. ಇದರಲ್ಲಿ ಆಶ್ರಯದ ನಿವಾಸಿಗಳು ಮತ್ತು ಗೋಕುಲದ ಸದಸ್ಯರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದರು. ಈ ಕಾರ್ಯಕ್ರಮದ ಲೇಖನ ಮತ್ತು ನಿರ್ದೇಶನ ಶ್ರೀ ರಾಜಾರಾಮ್ ಆಚಾರ್ಯ ಮಾಡಿ ದರು. ನೃತ್ಯ ನಿರ್ದೇಶನ ಅನಿತಾ ಆಚಾರ್ಯ ಮತ್ತು ಕೃತಿ ಚಡಗ ತುಂಬಾ ಒಳ್ಳೆಯದಾಗಿ ನಿಭಾಯಿಸಿದರು.
ಮನರಂಜನಾ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮದ ಆರಂಭವಾಯಿತು.ಅಂದಿನ ಪ್ರಮುಖ ಅತಿಥಿ ಮತ್ತು ಗೌರವ ಅತಿಥಿ ಗಳನ್ನು ಬಿ ಎಸ್.ಕೆ ಬಿ ಎ ಯ ಅಧ್ಯಕ್ಷ ರು,ಉಪಾಧ್ಯಕ್ಷ ರು ಮತ್ತು ಗೌರವ ಕಾರ್ಯದರ್ಶಿಗಳು ಪುಷ್ಪ ಗುಚ್ಛ ಮತ್ತು ಶಾಲು ಹೊದಿಸಿ ಸ್ವಾಗತಿಸಿದರು. ಬಿ.ಎಸ್.ಕೆ.ಬಿ.ಎ.ಯ ಮಾಜಿ ಉಪಾಧ್ಯಕ್ಷರಾದ ಲಕ್ಷ್ಮೀಶ ಆಚಾರ್ಯ ಅವರು ಸ್ಟಾರ್ ಅವಾರ್ಡ್ ಕೊಡುವ ಉದ್ದೇಶವನ್ನು ವಿವರಿಸಿದರು.
ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಅವರು ವೇದಿಕೆಯಲ್ಲಿ ಮಾತನಾಡುತ್ತಾ ಆಶ್ರಯದ ಉದ್ದೇಶ, ನಿವಾಸಿಗಳ ಅನಿಸಿಕೆಗಳನ್ನು ಮತ್ತು ಸ್ಟಾರ್ ಅವಾರ್ಡ್ ಬಗ್ಗೆ ಮಾತನಾಡಿದರು. ಸ್ಟಾರ್ ಅವಾರ್ಡ್ ಪುರುಷ ವಿಭಾಗದಲ್ಲಿ ಮಾಧವ್ ದಾಮ್ಲೆ ಮತ್ತು ಮಹಿಳಾ ವಿಭಾಗದ ಲ್ಲಿ ವಿಜಯ ಲಕ್ಷ್ಮಿ ಯವರು ಪ್ರಶಸ್ತಿ ಪಡೆದರು.ಅದಲ್ಲದೆ ವಾರಕ್ಕೆ ಒಂದು ದಿವಸ ಆಶ್ರಯಕ್ಕೆ ಬಂದು ಸೇ ವೆ ಸಲ್ಲಿಸುವ ಸ್ವಯಂ ಸೇವಕರನ್ನು, ವೈದ್ಯರು ಗಳನ್ನು ಮತ್ತು ಆಶ್ರಯದ ಸಿಬ್ಬಂದಿಗಳನ್ನು ಸಹ ವೇದಿಕೆಗೆ ಕರೆದು ಸತ್ಕಾರಿಸಲಾಯಿತು.
ಪ್ರಮುಖ ಅತಿಥಿಗಳು ಭಾಷಣ ಮಾಡುತ್ತಾ ಅಂದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೊಗಳಿ ಕೊಂಡಾಡಿದರು ಡಾ| ಸುರೇಶ್ ರಾವ್ ತಮ್ಮ ಭಾಷಣ ದಲ್ಲಿ ಆಶ್ರಯದ ಮುಂದಿನ ಯೋಜನೆಯನ್ನು ತಿಳಿಸಿದರು ಮತ್ತು ಚಂದ್ರಾವತಿಯವರ ಸೇವೆಯನ್ನು ಶ್ಲಾಘಿಸಿದರು.
ಬಿಎಸ್‌ಕೆಬಿ ಅಸೋಸಿಯೆಶನ್ ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ ಧನ್ಯವಾದ ಅರ್ಪಣೆ ಮಾಡಿದರು. ನಂತರ ಸ್ವರಗಂಗಾ ತಂಡ ದವರಿಂದ ವಾದ್ಯವೃಂದ ಕಾರ್ಯಕ್ರಮ ಎಲ್ಲರಿಗೂ ತುಂಬಾ ಖುಷಿ ನೀಡಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.